ತುಮಕೂರು : ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ವಹಿವಾಟು ಸ್ತಬ್ದ!?

 ತುಮಕೂರು :

     ಬಜರಂಗದಳದ ಜಿಲ್ಲಾ ಸಂಚಾಲಕ ಮಂಜುಭಾರ್ಗವ್ ಅವರ ಮೇಲಿನ ಹಲ್ಲೆ ಘಟನೆ ಖಂಡಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳ ಸಂಘಟನೆಗಳವರು ಇಂದು ತುಮಕೂರು ನಗರ ಬಂದ್‍ಗೆ ಕರೆ ನೀಡಿದ್ದಾರೆ.

      ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್ ಅವರು ಮಂಜುಭಾರ್ಗವ ಮೇಲಿನ ಹಲ್ಲೆ ಪೂರ್ವ ಯೋಜಿತ ಕೃತ್ಯವಾಗಿದ್ದು, ಬಜರಂಗದಳದ ಜಿಲ್ಲಾ ಸಂಚಾಲಕನಾಗಿ ಅಕ್ರಮ ಗೋವಿನ ಸಾಗಾಟ ತಡೆದು ಗೋವುಗಳನ್ನು ರಕ್ಷಿಸುತ್ತಿದ್ದುದಕ್ಕೆ ಆತನಿಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಸಂಬಂಧ 15 ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದರು ಕ್ರಮ ವಹಿಸಿಲ್ಲದಿರುವುದು ಆತನನ್ನು ಹಿಂಬಾಲಿಸಿ ಹಲ್ಲೆಗೆ ಕಾರಣವಾಗಿದೆ. ಇದು ಬೆಳಕಿಗೆ ಬಂದ ಕೃತ್ಯ. ಇಂತಹ ಅನೇಕ ಕೃತ್ಯಗಳು ಜರುಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಬೆಳಿಗ್ಗೆ 6 ರಿಂದ ಸಂಜೆ6ರವರಗೆ ನಗರ ಬಂದ್‍ಗೆ ಕರೆ ನೀಡಲಾಗಿದೆ ಎಂದರು.

     ಬಂದ್‍ಗೆ ಈಗಾಗಲೇ ಆಟೋ ಸಂಘಟನೆಗಳವರು, ಎಪಿಎಂಸಿ ವರ್ತಕ ಮಳಿಗೆಯವರು, ವೀರಶೈವ ಸಮಾಜ, ಬ್ರಾಹ್ಮಣ ಸಮಾಜ ಸೇರಿ ಹಲವು ಸಮಾಜ ಸಂಘಟನೆಗಳವರು ಬೆಂಬಲಸೂಚಿಸಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳವರು, ಸಹಕಾರಿ ಬ್ಯಾಂಕ್‍ಗಳು, ಶಾಲಾ-ಕಾಲೇಜುಗಳವರು, ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹಲ್ಲೆ ಘಟನೆ ಖಂಡಿಸಬೇಕೆಂದು ಮನವಿ ಮಾಡುತ್ತೇವೆಂದರು.

ಪ್ರತಿಭಟನಾ ಸಭೆ:

      ಹಲ್ಲೆಗೊಳಗಾದವರನ್ನು ಜಿಲ್ಲಾಸ್ಪತ್ರೆಯಿಂದ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಶಾಂತಿಯುತವಾಗಿ ಬಂದ್ ನಡೆಸಲಾಗುವುದು. ನಗರದ ಟೌನ್‍ಹಾಲ್(ಬಿ.ಜಿ.ಎಸ್) ವೃತ್ತದಲ್ಲಿ ಬೆಳಿಗ್ಗೆ 10.30ಕ್ಕೆ ಪ್ರತಿಭಟನಾ ಸಭೆ ನಡೆಯಲಿದ್ದು, ಹಿಂದೂ ಪರ ಸಂಘಟನೆ ಮುಖಂಡರಾದ ಉಲ್ಲಾಸ್‍ಕಾರಂತ್, ಬಸವರಾಜು ಮತ್ತಿತರರು ಪಾಲ್ಗೊಂಡು ಭಾಷಣ ಮಾಡಲಿದ್ದಾರೆ. ಪೊಲೀಸರು ಹಲ್ಲೆಗೆ ಕಾರಣರಾದ 5 ಮಂದಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

      ನಗರ ವೀರಶೈವ ಸಮಾಜದ ಕಾರ್ಯದರ್ಶಿ ಅತ್ತಿರೇಣುಕಾನಂದ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಶವಸಂಸ್ಕಾರದ ಹೆಸರಿನಲ್ಲಿ ಹಣಪೀಕುತ್ತಿದ್ದವರನ್ನು ತಪ್ಪಿಸಿ ಉಚಿತವಾಗಿ 70-80 ಶವಗಳನ್ನು ತಾನೇ ಮಂಜುಭಾರ್ಗವ್ ದಫನ್ ಮಾಡಿದ್ದು ಸಹ ಹಲ್ಲೆಗೆ ಕಾರಣವಾಗಿದೆ. ಇಂದಿನ ಬಂದ್ ಅನ್ನು ವೀರಶೈವ ಸಮಾಜ ಬೆಂಬಲಿಸುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರಾದ ದಯಾನಂದ್, ಪ್ರತಾಪ್, ಓಂಕಾರ್, ಸ್ಮಾರ್ಟ್ ಜಗದೀಶ್, ಕೊಪ್ಪಲ್‍ನಾಗರಾಜ್ ಮತ್ತಿತರರಿದ್ದರು.

ವ್ಹೀಲಿಂಗ್ ಮಾಡುವವರಿಗೆ ಗುಂಡಿಕ್ಕಿ: ಶಾಸಕ

      ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ ಮಂಜುಭಾರ್ಗವ ಅವರ ಮೇಲಿನ ಹಲ್ಲೆಗೆ ವ್ಹೀಲಿಂಗ್ ಮಾಡುತ್ತಿದ್ದವರನ್ನು ಎಚ್ಚರಿಸಿದ್ದು ಒಂದು ಕಾರಣವಾಗಿದ್ದು, ರಾಜರೋಷವಾಗಿ ಹೆದ್ದಾರಿ, ಬಡಾವಣೆ ರಸ್ತೆಯೆನ್ನದೆ ಸಾರ್ವಜನಿಕರು ಸಂಚರಿಸುವ ಸ್ಥಳಗಳಲ್ಲೆ ಬೈಕ್‍ಗಳಲ್ಲಿ ವ್ಹೀಲಿಂಗ್ ಮಾಡುವುದು ಹೆಚ್ಚಿದೆ. ಈ ರೀತಿ ವ್ಹೀಲಿಂಗ್ ಮಾಡುವವರನ್ನು ಸ್ಥಳದಲ್ಲೇ ಶೂಟೌಟ್(ಗುಂಡಿಡುವ) ಮಾಡುವ ಮೂಲಕ ಎಚ್ಚರಿಕೆಯ ಸಂದೇಶವನ್ನು ಪೊಲೀಸರು ರವಾನಿಸಬೇಕಿದೆ.ಸಮಾಜ ಘಾತಕ ಶಕ್ತಿಗಳು ನಗರದಲ್ಲಿ ಹೆಚ್ಚುತ್ತಿದ್ದು ಅವರನ್ನು ಹತ್ತಿಕ್ಕುವ ಕಾರ್ಯ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap