ತುಮಕೂರು :-
ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸ್ಫೋಟಿಸುವಾಗಿ ಮಂಗಳವಾರ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಕೆಲಸದ ವೇಳೆ ಬೆಳಿಗ್ಗೆ 10:00 ಗಂಟೆಗೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ತುಮಕೂರು ಜಿಲ್ಲಾ ಧಿಕಾರಿಗಳ ಕಚೇರಿಗೆ ಮಂಗಳವಾರ 9.30 ಕ್ಕೆ ಇ-ಮೇಲ್ ಸಂದೇಶ ರವಾನೆಯಾಗಿದ್ದು, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶದ ಮೇರೆಗೆ ಎಲ್ಲಾ ಅಧಿಕಾರಿಗಳನ್ನ ಹೊರ ಕಳಿಸಲಾಗಿದೆ.ಬಾಂಬ್ ಬೆದರಿಕೆ ಸಂದೇಶ ಬಂದ ನಂತರ ಎಸ್ ಪಿ ಅಶೋಕ್, ಡಿ ವೈ ಎಸ್ ಪಿ ಚಂದ್ರಶೇಖರ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಯ ನೌಕರರನ್ನ ಕಚೇರಿಯಿಂದ ಹೊರ ಕಳಿಸಿ ಬರುವ ನೌಕರರನ್ನ ಕಚೇರಿಯ ಫ್ರೆಂಡ್ ಗೇಟ್ ತಡೆಯಲಾಗಿ ಶ್ವಾನದಳ ಸೇರಿದಂತೆ ಬಾಂಬ್ ನಿಶ್ಕ್ರಿಯ ದಳ ಪರಿಶಿಲನ ನಡೆಸುತ್ತಿದ್ದು ಆತಂಕದ ವಾತಾವರಣ ಮೂಡಿಸಿದೆ.
ಬಾಂಬ್ ಬೆದರಿಕೆಯ ನಡುವೆಯೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆಯಲಾಗಿದ್ದ ಸಭೆಗೆ 50ಕ್ಕೂ ಹೆಚ್ಚು ಅಧಿಕಾರಿಗಳು ಸಭೆ ನಡೆಯುತ್ತಿದ್ದು ಅಧಿಕಾರಿಗಳು ಸಭೆಯ ನಡುವೆಯೂ ಬಾಂಬ್ ಬೆದರಿಕೆಯ ಆತಂಕದಲ್ಲಿ ಸಭೆಯಲ್ಲಿ ಅನಿವಾರ್ಯತೆಯಲ್ಲಿ ಹಾಜರಾಗಿರುವುದು ಕಂಡುಬರುತ್ತದೆ.








