ಚೆಕ್ ಡ್ಯಾಂ ಕಾಮಗಾರಿಗಳಿಗೆ ಸಚಿವರಿಂದ ಶಂಕುಸ್ಥಾಪನೆ

 ಚಿಕ್ಕನಾಯಕನಹಳ್ಳಿ : 

      ತಾಲ್ಲೂಕಿನ ದಬ್ಬೇಘಟ್ಟ ಭಾಗಕ್ಕೆ ಹೇಮಾವತಿ ನೀರಾವರಿಯ ಎರಡನೇ ಹಂತದ ಕಾಮಗಾರಿ ಕೆಲಸಕ್ಕೆ ಶೀಘ್ರದಲ್ಲಿ ಕಾಯಕಲ್ಪ ಸಿಗಲಿದೆ ಎಂದು ಸಣ್ಣ ನೀರಾವರಿ ಹಾಗು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

      ತಾಲ್ಲೂಕಿನ ವಿವಿಧ ಕಡೆ ಹಳ್ಳಗಳಿಗೆ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

      ತಾಲ್ಲೂಕಿಗೆ ಈಗಾಗಲೆ ಮೊದಲ ಹಂತದಲ್ಲಿ ಸಾಸಲು ಕೆರೆಗೆ ಹೇಮಾವತಿ ನೀರು ಹರಿದಿದ್ದು ಶೆಟ್ಟೀಕೆರೆ ಕೆರೆಗೂ ಹರಿಯುತ್ತಿದೆ. ಕೆಲವೇ ದಿನಗಳಲ್ಲಿ ಆ ಕೆರೆಯು ತುಂಬಲಿದೆ, ಎರಡನೇ ಹಂತದಲ್ಲಿ ನವಿಲೆ ಕೆರೆ ಭಾಗಕ್ಕೆ ನೈಸರ್ಗಿಕವಾಗಿ ಹೇಮಾವತಿಯ ನೀರು ಹರಿಯ ಬೇಕಾದರೆ ಸಾಸಲು ಕೆರೆಗೆ ಹೋಗಿರುವ ನಾಲೆಯಿಂದ ದಬ್ಬೆಘಟ್ಟದ ಕೆರೆಯವರೆಗೆ ನಾಲೆ ತೆಗೆಯುವ ಕೆಲಸವಾಗಬೇಕು ಎಂದರು.

     2011-12ಸಾಲಿನಲ್ಲಿ ಕಾಮಗಾರಿಗೆ ಗುತ್ತಿಗೆ ಪಡೆದ ಗುತ್ತಿಗೆದಾರರು ತಮ್ಮ ವಾಯ್ದೆಯಲ್ಲಿ ಭೂಸ್ವಾಧೀನ ಸಮಸ್ಯೆಯಿಂದ ಕೆಲಸಕ್ಕೆ ತಡೆ ಉಂಟಾಗಿ, ಟೆಂಡರ್ ವಾಯ್ದೆಯು ಮುಗಿದ ಹಿನ್ನಲೆಯಲ್ಲಿ ಕಾಮಗಾರಿಯ ಕೆಲಸದಲ್ಲಿ ನಷ್ಟವಾಗಿದೆ ಎಂದು ಹಳೆಯ ಗುತ್ತಿಗೆದಾರರು ನ್ಯಾಯಲಯದ ಮೊರೆಹೋಗಿದ್ದಾರೆ. ನ್ಯಾಯಾಲಯಕ್ಕೆ ಹೋಗಿರುವ ಗುತ್ತಿಗೆದಾರರನ್ನು ವಜಾಮಾಡಿ. ನಾಲೆ ತೆಗೆಯಲು ಹೊಸ ಟೆಂಡರನ್ನು ಕರೆಯಲಾಗುವುದು ಇದಕ್ಕೆ ಹಳೆಯ ಗುತ್ತಿಗೆದಾರರು ಸಹ ಸಮ್ಮತಿ ನೀಡಿದ್ದಾರೆ ಇನ್ನೊಂದು ತಿಂಗಳಲ್ಲಿ ನಾಲೆ ಕೆಲಸಕ್ಕೆ ಪ್ರಗತಿ ಕಾಣಲಿದೆ ಎಂದು ತಿಳಿಸಿದರು.

      ಜಿಲ್ಲೆಯಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಿದ್ದುದ್ದರಿಂದ ತಾಲ್ಲೂಕಿನ ಅಭಿವೃದ್ದಿ ಕೆಲಸಗಳಲ್ಲಿ ತಡೆ ಉಂಟಾಗಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಹಂದನಕೆರೆ ಹೋಬಳಿ ಓಟಿಕೆರೆ ಗ್ರಾಮದ 128 ಸರ್ವೆ ನಂಬರ್ ಹತ್ತಿರ 1ಕೋಟಿ 20ಲಕ್ಷ ರೂ. ವೆಚ್ಚದ ಚೆಕ್ ಡ್ಯಾಂ, ಕಸಬಾ ಹೋಬಳಿಯ ಹೊನ್ನೇಬಾಗಿ ಸಮೀಪದ ಗೊಲ್ಲರಹಟ್ಟಿಯಿಂದ ಹೊಸಹಳ್ಳಿ ರಸ್ತೆಯ ದುರ್ಗದ ಕೆರೆಗೆ ಹೋಗುವ ಹಳ್ಳಕ್ಕೆ 2ಕೋಟಿ ರೂ.ಗಳ ಚೆಕ್ ಡ್ಯಾಂ ಮತ್ತು ಸೇತುವೆ, ಶೆಟ್ಟೀಕೆರೆ ಹೋಬಳಿಯ ಅಗಸರಳ್ಳಿ ಗ್ರಾಮದ ಬಾಳದ ಕೆರೆ ಹಳ್ಳಕ್ಕೆ 1ಕೋಟಿ ರೂ. ವೆಚ್ಚದ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಈ ಕಾರ್ಯದಿಂದ ಅಂತರ್ ಜಲವು ವೃದ್ದಿಯಾಗಿ ಬೋರುಗಳಲ್ಲಿ ನೀರು ವೃದ್ದಿಯಾಗುತ್ತವೆ, ರೈತರ ಬದುಕಿಗೆ ನೆಮ್ಮದಿ ತರುವಂತದಾಗುತ್ತದೆ ಎಂದರು.

      ಮುಂದಿನ ವಾರದಲ್ಲಿ ಇನ್ನೂ 20ರಿಂದ 30 ಕೋಟಿಯ ವೆಚ್ಚದಲ್ಲಿ ಅಗತ್ಯವಿರುವ ಕಡೆ ಚೆಕ್ ಡ್ಯಾಂಗಳಿಗೆ ಚಾಲನೆ ನೀಡಲಾಗುವುದು ಎಂದರು.

     ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಆಧ್ಯಕ್ಷ ಅಗಸರಹಳ್ಳಿ ಶಿವರಾಜು, ತಾ.ಪಂ.ಮಾಜಿ ಉಪಾಧ್ಯಕ್ಷ ನಿರಂಜನ ಮೂರ್ತಿ, ತಾ.ಪಂ. ಸದಸ್ಯ ಕೇಶವ ಮೂರ್ತಿ, ಸೋರಲಮಾವು ಎಸ್.ವಿ.ಸಿದ್ದಲಿಂಗಸ್ವಾಮಿ, ಬರಕನಾಳ್ ವಿಶ್ವನಾಥ್, ಪಿಎಲ್.ಡಿಬ್ಯಾಂಕ್ ನಿರ್ದೆಶಕ ಬರಗೂರು ಬಸವರಾಜು, ವಕೀಲ ನಿರಂಜನ್ ಮೂರ್ತಿ, ಹಾಗು ಸಣ್ಣ ನೀರಾವರಿಯ ಎಇಇ ಪ್ರಭಾಕರ್ ಮತ್ತು ರವಿಚಂದ್ರಕುಮಾರ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link