ತುಮಕೂರು :
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಳೆದ ಹತ್ತು ದಿನಗಳಿಂದ ತೀವ್ರ ಏರುಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ದಿನವೊಂದಕ್ಕೆ ಸೋಂಕಿತರ ಸಂಖ್ಯೆ ದ್ವಿಶತಕ ತಲುಪಿರುವುದು ಆತಂಕಕಾರಿ ಸಂಗತಿಯೆನಿಸಿದೆ. ಇನ್ನೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಶಲಕ್ಷ (10,20,434) ದಾಟಿದ್ದು ಭಾನುವಾರ ಒಂದೇ ದಿನ 5279 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಸೋಮವಾರ 195 ಮಂದಿಯಲ್ಲಿ ಹೊಸದಾಗಿ ಕೋವಿಡ್ ಸೋಂಕು ಕಂಡುಬಂದಿದ್ದು, ಸೋಂಕಿತರ ಒಟ್ಟು ಸಂಖ್ಯೆ 26,392ಕ್ಕೆ ಏರಿಕೆಯಾಗಿದೆ. ಕೋವಿಡ್ ಜೊತೆಗೆ ಅನ್ಯ ಕಾರಣದಿಂದ ಒಬ್ಬರು ಮೃತಪಟ್ಟಿದ್ದು, ಮೃತರನ್ನು ತುಮಕೂರು ನಗರದ ಸದಾಶಿವನಗರದ 43 ವರ್ಷದ ನಿವಾಸಿಯೆಂದು ಗುರುತಿಸಲಾಗಿದೆ.
ಸೋಂಕಿತರಲ್ಲಿ ತುಮಕೂರು ತಾಲೂಕೊಂದರಲ್ಲಿ 94 ಮಂದಿ ಕಂಡುಬಂದಿದ್ದು, ಚಿ.ನಾಹಳ್ಳಿ 4, ಗುಬ್ಬಿ 35, ಕೊರಟಗೆರೆ 4, ಕುಣಿಗಲ್ 8, ಮಧುಗಿರಿ 7, ಪಾವಗಡ 11, ಶಿರಾ 17, ತಿಪಟೂರು 13, ತುಮಕೂರು 94, ತುರುವೇಕೆರೆಯಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ 100 ಮಂದಿ ಪುರುಷರು, 95 ಮಂದಿ ಮಹಿಳೆಯರು, 5 ವರ್ಷದೊಳಗಿನ 5 ಮಂದಿ ಮಕ್ಕಳಿದ್ದು, 60 ವರ್ಷ ಮೇಲ್ಪಟ್ಟವರು 30 ಮಂದಿ ಇದ್ದಾರೆ. ಇದರೊಂದಿಗೆ 68 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದು, ಕೋವಿಡ್‍ನಿಂದ ಜಿಲ್ಲೆಯಲ್ಲಿ ಈವರೆಗೆ ಮೃತರಾದವರ ಸಂಖ್ಯೆಯೂ 463ಕ್ಕೆ ಏರಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ