ತುಮಕೂರು : 200 ರ ಸಂಖ್ಯೆ ದಾಟಿದ ಕೊರೋನಾ

 ತುಮಕೂರು : 

      ಕಳೆದ ಒಂದು ವಾರದಿಂದ 100ರ ಮೇಲ್ಪಟ್ಟು 200 ರ ಒಳಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಬುಧವಾರ ದಿಢೀರ್ 248 ಕ್ಕೆ ಏರಿಕೆಯಾಗಿದೆ.

      ಇದರೊಂದಿಗೆ ಈವರೆಗೆ ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 26,793 ಆಗಿದೆ. ದಿನೆ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣವಾಗುತ್ತಲೆ ಇದ್ದು, ಕಳೆದ ವರ್ಷದ ಅಂಕಿ ಸಂಖ್ಯೆಗಳನ್ನೇ ಹೋಲುವಂತಹ ದಿಕ್ಕಿನಲ್ಲಿ ಸೋಂಕಿನ ಪ್ರಮಾಣ ಸಾಗುತ್ತಿದೆ.

      ಬುಧವಾರ ವರದಿಯಾಗಿರುವ ಒಟ್ಟು 248 ಸೋಂಕಿನ ಪೈಕಿ ತುಮಕೂರು ತಾಲ್ಲೂಕಿನಲ್ಲಿಯೇ 116 ಪ್ರಕರಣಗಳು ವರದಿಯಾಗಿವೆ. ಚಿಕ್ಕನಾಯಕನಹಳ್ಳಿ-4, ಗುಬ್ಬಿ 10, ಕೊರಟಗೆರೆ 13, ಕುಣಿಗಲ್ 24, ಮಧುಗಿರಿ 10, ಪಾವಗಡ 15, ಶಿರಾ 16, ತಿಪಟೂರು 31, ತುರುವೇಕೆರೆ ತಾಲ್ಲೂಕಿನಲ್ಲಿ 9 ಪ್ರಕರಣಗಳು ವರದಿಯಾಗಿವೆ.

2 ಸಾವು:

      ಕೊರಟಗೆರೆ ಪಟ್ಟಣದ 34 ವರ್ಷದ ವ್ಯಕ್ತಿ ಜ್ವರ, ಕೆಮ್ಮು ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿದ್ದು, ಮಾ.29 ರಂದು ಕೊರಟಗೆರೆ ಆಸ್ಪತ್ರೆಗೆ ತಪಾಸಣೆಗೆ ಹೋಗಿದ್ದರು. ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ 34 ವರ್ಷದ ವ್ಯಕ್ತಿ ಮರಣ ಹೊಂದಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಂದಿಕೆರೆ ಗ್ರಾಮದ 70 ವರ್ಷದ ವ್ಯಕ್ತಿ ಅನ್ಯ ಕಾರಣದಿಂದ ಕೋವಿಡ್ ಸೋಂಕಿನಿಂದಾಗಿ ಮರಣ ಹೊಂದಿದ್ದಾರೆ. ಇವರು ಕೆಮ್ಮು, ಜ್ವರ, ಉಸಿರಾಟದ ತೊಂದರೆ, ಕೋ ಮಾರ್ಬಿಡ್‍ನಿಂದ ಬಳಲುತ್ತಿದ್ದರು. ಏಪ್ರಿಲ್ 1 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

      ಕೋವಿಡ್ ಸೋಂಕಿತರಲ್ಲಿ 143 ಪುರುಷರು, 105 ಮಂದಿ ಮಹಿಳೆಯರು, 5 ವರ್ಷದ ಒಳಗಿನ 3 ಮಕ್ಕಳು, 60 ವರ್ಷ ಮೇಲ್ಟಟ್ಟ 53 ಮಂದಿ ಸೇರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap