ತುಮಕೂರು :
ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 1199 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, 374 ಮಂದಿ ಬಿಡುಗಡೆಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 32837ಕ್ಕೆ ಏರಿಕೆಯಾಗಿದ್ದು, 5020 ಕೋವಿಡ್ ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ.
ಸೋಂಕಿತರ ಪೈಕಿ ಚಿ.ನಾ.ಹಳ್ಳಿ 56, ಗುಬ್ಬಿ 109, ಕೊರಟಗೆರೆ 27 , ಕುಣಿಗಲ್ 74, ಮಧುಗಿರಿ 48, ಪಾವಗಡ 65, ಶಿರಾ 35 ತಿಪಟೂರು99, ತುಮಕೂರು 637, ತುರುವೇಕೆರೆ 49 ಪ್ರಕರಣಗಳು ದಾಖಲಾಗಿದೆ. ಸೋಂಕಿತರ ಪೈಕಿ695 ಪುರುಷರು, 504 ಮಹಿಳೆಯರಿದ್ದು, 5 ವರ್ಷದೊಳಗಿನ 13 ಮಕ್ಕಳಿದ್ದು, 60 ವರ್ಷ ಮೇಲ್ಟಟ್ಟ 170 ಮಕ್ಕಳು ಸೇರಿದ್ದಾರೆ.
ಮೃತರ ವಿವರ: ಮಧುಗಿರಿ ತಾಲೂಕು ಜಕ್ಕೇನಹಳ್ಳಿ ಗ್ರಾಮದ 38 ವರ್ಷದ ವ್ಯಕ್ತಿ ಹಾಗೂ ಗುಬ್ಬಿ ತಾಲೂಕು ಮಾರುತಿ ನಗರದ 64 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ ಚಿಕಿತ್ಸೆ ಫಲಕಾರಿಯಾಗದೆ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಸುನೀಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ