ತುಮಕೂರು :
ಜ.15ರಿಂದ ಪ್ರಥಮ ದ್ವಿತೀಯ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ತರಗತಿಗಳು ಆರಂಭಗೊಂಡಿದ್ದು, ಎಸ್ಸೆಸ್ಸೆಲ್ಸಿ ದ್ವಿತೀಯ ಪಿಯುಸಿ, ಅಂತಿಮ ಪದವಿ ಆಫ್‍ಲೈನ್ ತರಗತಿಗಳು ಈಗಾಗಲೇ ನಡೆಯುತ್ತಿವೆ. ಈ ಸಂದರ್ಭದಲ್ಲಿ ಸರಕಾರ ಹಿಂದೆ ಜಾರಿಗೊಳಿಸಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಿಯೇ ತರಗತಿ ಪ್ರವೇಶಿಸಬೇಕೆಂಬ ನಿಯಮ ಸಡಿಲಗೊಳಿಸಿ, ಸೋಂಕಿನ ಚಿಹ್ನೆಯಿದ್ದವರೂ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹೇಳಿದ್ದರೂ, ವಿದ್ಯಾರ್ಥಿಗಳಲ್ಲಿನ ಗೊಂದಲ, ಆತಂಕ ದೂರವಾಗಿಲ್ಲ. ಕೋವಿಡ್ ಪರೀಕ್ಷಾ ಫಲಿತಾಂಶ ಹೊರಬರುವಲ್ಲಿ ಆಗುತ್ತಿರುವ ಹತ್ತಾರವಿಳಂಬ ವಿದ್ಯಾರ್ಥಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.
ಈ ಚಿಂತೆಯಲ್ಲೇ ಶಾಲಾ ಕಾಲೇಜು ಪ್ರವೇಶಿಸುತ್ತಿರುವ ವಿದ್ಯಾರ್ಥಿಗಳು, ಹೆಚ್ಚು ಜನರೊಂದಿಗೆ ಇರುತ್ತೇವೆ. ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುತ್ತಿರುತ್ತೇವೆ. ಒಮ್ಮೆ ಕೋವಿಡ್ ಪರೀಕ್ಷೆ ಮಾಡಿಸೋಣ ಎಂದು ಗಂಟಲುದ್ರವವನ್ನು ತಮ್ಮೂರಿನ ಪಿಎಚ್‍ಸಿ, ತಾಲೂಕು ಕೇಂದ್ರಗಳಿಗೆ ತೆರಳಿ ನೀಡಿದರೆ, ಪರೀಕ್ಷಾ ಫಲಿತಾಂಶ ಬರುವಲ್ಲಿ ವಾರಗಟ್ಟಲೇ ಕಾಯುವಂತಾಗಿರುವುದು ವಿದ್ಯಾರ್ಥಿಗಳ ಹೃದಯ ಬಡಿತವನ್ನು ಹೆಚ್ಚಿಸಿದೆಯಲ್ಲದೇ ಫಲಿತಾಂಶ ಬರುವವರೆಗೆ ತರಗತಿಗೆ ತೆರಳಬೇಕೋ ಬೇಡವೋ? ನನಗೆ ಪಾಸಿಟಿವ್ ಇದ್ದರೆ ಏನು ಗತಿ? ಇಲ್ಲವೇ ಉಳಿದವರಿಗಿದ್ದು ಅವರ ಒಡನಾಟದಿಂದ ನಮಗೂ ಸೋಂಕು ತಗಲಿದರೆ ಏನು ಮಾಡುವುದು ಎಂಬ ಜಿಜ್ಞಾಸೆಗೆ ಹಚ್ಚಿದೆ. ಇದಕ್ಕೆ ತಾಜಾ ನಿದರ್ಶನವಾಗಿ ಭರತ್‍ಕುಮಾರ್ ಟಿ.ಆರ್.ಎನ್ನುವ ವಿದ್ಯಾರ್ಥಿ ಜ.12ರಂದು ಸ್ಯಾಂಪಲ್ ಪರೀಕ್ಷೆಗೆ ನೀಡಿದ್ದು, ಈವರೆಗೆ
144 ಪಿಎಚ್‍ಸಿ, ಆಸ್ಪತ್ರೆಗಳಲ್ಲಿ ಪರೀಕ್ಷೆ:
ಸದ್ಯ ಜಿಲ್ಲೆಯಲ್ಲಿ ತುಮಕೂರು ಜಿಲ್ಲಾಸ್ಪತ್ರೆ, 9 ತಾಲೂಕು ಆಸ್ಪತ್ರೆ, 4 ಸಮುದಾಯ ಆರೋಗ್ಯ ಕೇಂದ್ರ ಹಾಗೂ 144 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸದ್ಯ ಕೋವಿಡ್ ಆರ್‍ಟಿಪಿಸಿಆರ್(ಗಂಟಲು, ಮೂಗಿನ ದ್ರವ ) ಪರೀಕ್ಷೆ ಮಾಡಲಾಗುತ್ತಿದ್ದು, ತುರ್ತು ಇದ್ದವರಿಗೆ ಮಾತ್ರ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ.
ಸ್ಥಳೀಯ ಗ್ರಾಮ ಪಂಚಾಯಿತಿ, ಬೂತ್ ಮಟ್ಟದ ಅಧಿಕಾರಿಗಳ ಸಹಕಾರದೊಂದಿಗೆ ಪರೀಕ್ಷೆ ಮಾಡಲಾಗುತ್ತಿದೆ. ಹೀಗೆ ಪರೀಕ್ಷೆ ಮಾಡಿ ಸಂಗ್ರಹಿಸಿದ ಗಂಟಲು ದ್ರವವನ್ನು ಪರೀಕ್ಷಾ ಪ್ರಯೋಗಾಲಯವಿರುವ ಜಿಲ್ಲಾಸ್ಪತ್ರೆ, ಶ್ರ್ರೀದೇವಿ ಕಾಲೇಜು, ಸಿದ್ಧಾರ್ಥ ಮೆಡಿಕಲ್ ಕಾಲೇಜು ಹಾಗೂ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಪಾಸಿಟಿವ್, ನೆಗೆಟಿವ್ ಫಲಿತಾಂಶ ತಿಳಿಯಲಾಗುತ್ತಿದೆ. ಆದರೆ ಫಲಿತಾಂಶ ಮರು ದಿನವೇ ಪ್ರಕಟವಾಗದೇ 3-4 ದಿನ ಕಾಯಬೇಕಿರುವುದು ವಿದ್ಯಾರ್ಥಿಗಳು, ಸಾರ್ವಜನಿಕರನ್ನು ತಳಮಳಕ್ಕೆ ಸಿಲುಕಿಸಿದೆ.
ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ನಾಲ್ಕು ಕಡೆ ಮಾತ್ರ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಜಿಲ್ಲೆಯಲ್ಲಿದ್ದು, 3000 ರಿಂದ 4000 ಪರೀಕ್ಷಾ ಫಲಿತಾಂಶವನ್ನಷ್ಟೇ ಒಂದು ದಿನಕ್ಕೆ ನೀಡಲು ಸಾಧ್ಯ. ಫಲಿತಾಂಶ ಬರಲು 3-4 ದಿನ ಆಗುತ್ತದೆ. ಅಲ್ಲದೇ ಈ ಕೋವಿಡ್ ಪರೀಕ್ಷಾ ನೆಗೆಟಿವ್ ಫಲಿತಾಂಶ ಶಾಲಾ-ಕಾಲೇಜಿಗೆ ತೆರಳಲು ಕಡ್ಡಾಯವಲ್ಲ. ಸೋಂಕಿನ ಲಕ್ಷಣವಿದ್ದವರೂ ಅಂದರೆ ಮನೆಯಲ್ಲಿ ಅಥವಾ ನಿಮ್ಮ ಸಂಪರ್ಕಕ್ಕೆ ಬಂದವರಲ್ಲಿ ಯಾರಿಗಾದರೂ ಕೋವಿಡ್ ದೃಢಪಟ್ಟಿದ್ದಲ್ಲಿ ಇಲ್ಲವೇ ಸೋಂಕಿನ ಲಕ್ಷಣಗಳು ಕಂಡುಬಂದಿದ್ದಲ್ಲಿ ಮಾತ್ರ ಸ್ವಯಂ ಇಚ್ಚೆಯಿಂದ ನಿಮ್ಮೂರಿನ ಪಿಎಚ್‍ಸಿಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡರೆ ಸಾಕು. ಪರೀಕ್ಷೆ ಬಗ್ಗೆ ಅನಗತ್ಯ ಭಯ, ಗೊಂದಲಕ್ಕೀಡಾಗುವುದು ಬೇಡ. ಸರಕಾರದ ಆರೋಗ್ಯ ಇಲಾಖೆ ಆಯುಕ್ತರೇ ಜ.12ರಂದು ಆದೇಶ ಹೊರಡಿಸಿ ಸ್ಪಷ್ಟೀಕರಿಸಿದ್ದಾರೆ ಎಂದು ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ್ದಾರೆ.
ರ್ಯಾಪಿಡ್ ಆಂಟಿಜನ್ ಟೆಸ್ಟ್ ಕೈಗೊಳ್ಳಬಾರದೇಕೆ?
ಶಾಲಾ-ಕಾಲೇಜುಗೆ ತೆರಳುತ್ತಿರುವ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷಾ ಫಲಿತಾಂಶ ವಿಳಂಬದಿಂದಾಗಿ ತರಗತಿಗಳಿಗೆ ಹಾಜರಾಗಲು ಎದುರಿಸುತ್ತಿರುವ ತಳಮಳ ತಪ್ಪಿಸಲು ಆರ್‍ಟಿಪಿಸಿಆರ್ ಪರೀಕ್ಷೆ ಬದಲಿವಗೆಆ ದಿನವೇ ಫಲಿತಾಂಶ ಕೊಡಬಹುದಾದ ರ್ಯಾಪಿಡ್ ಆಂಟಿಜನ್ ಟೆಸ್ಟ್ (ಬರೀ ಮೂಗಿನ ದ್ರವ ಪರೀಕ್ಷೆ) ಮಾಡಿಸಿ ಬೇಗ ಫಲಿತಾಂಶ ಕೊಡುವ ಪ್ರಯತ್ನಕ್ಕೆ ಆರೋಗ್ಯ ಇಲಾಖೆ ಏಕೆ ಮುಂದಾಗಬಾರದು ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳು, ಶಿಕ್ಷಕ ವರ್ಗದವರು ಮುಂದಿಡುತ್ತಿದ್ದಾರೆ.
ಆರೋಗ್ಯ ಇಲಾಖೆ ಈ ಬಗ್ಗೆ ತ್ವರಿತ ತೀರ್ಮಾನ ಕೈಗೊಂಡು ಪರೀಕ್ಷೆ ಮಾಡ್ಳದಿದ್ದರೆ ಸಡಿಲಗೊಂಡ ನಿಯಮದ ಹೆಸರಲ್ಲಿ ಕೋವಿಡ್ ಪಾಸಿಟಿವ್ ಇರುವವರು ಕಾಲೇಜಿಗೆ ಹಾಜರಾಗಿ ತೊಂದರೆ ಉಂಟಾದರೆ ಶಾಲೆ, ಕಾಲೇಜನ್ನೇ ಮುಚ್ಚಬೇಕಾಗುತ್ತದೆ ಎಂಬ ಆತಂಕವನ್ನು ಶಿಕ್ಷಣ ಸಂಸ್ಥೆಯವರು, ಆಡಳಿತ ಮಂಡಳಿಯವರು ವ್ಯಕ್ತಪಡಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಪರೀಕ್ಷಾ ವಿಳಂಬದ ಕಾರಣಕ್ಕೆ ಖಾಸಗಿಗೆ ಮೊರೆಹೋಗಿ ಸಾವಿರಾರು ರೂಪಾಯಿ ಪರೀಕ್ಷೆಗೆ ಬಡ ವಿದ್ಯಾರ್ಥಿಗಳು ವೆಚ್ಚ ಮಾಡುವಂತಾಗಿದೆ.
ಶಾಲಾ-ಕಾಲೇಜಿಗೆ ತೆರಳಲು ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ. ಸೋಂಕಿನ ಲಕ್ಷಣವಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಮಾತ್ರ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಆಯುಕ್ತರೇ ಆದೇಶ ಹೊರಡಿಸಿದ್ದಾರೆ. ಆದರೆ ನಿಮ್ಮ ಮನೆಯಲ್ಲಿ, ಸಂಪರ್ಕಿತರಲ್ಲಿ ಕೋವಿಡ್ ಪಾಸಿಟಿವ್ ಇದ್ದರೆ, ಅಂತಹವರು ಪಿಎಚ್‍ಸಿ ಕೇಂದ್ರಗಳಲ್ಲೇ ಟೆಸ್ಟ್ ಮಾಡಿಸಿಕೊಳ್ಳಬಹುದು. ಕೋವಿಡ್ ಪ್ರಯೋಗಾಲಯ ಜಿಲ್ಲಾ ಕೇಂದ್ರ ಹಾಗೂ ತಿಪಟೂರಿನಲ್ಲಿ ಮಾತ್ರ ಲಭ್ಯವಿದ್ದ, ಸಂಗ್ರಹಿಸಿದ ದ್ರವಗಳ ಫಲಿತಾಂಶವನ್ನು ಆಯಾದಿನವೇ ನೀಡಲು ಸಾಧ್ಯವಿಲ್ಲ. ಪರೀಕ್ಷೆದ್ರವ ಸಂಗ್ರಹಿಸಿದ 3-4 ದಿನದೊಳಗೆ ಫಲಿತಾಂಶವನ್ನು ಅವರ ಮೊಬೈಲ್‍ಗೆ ರವಾನಿಸಲಾಗುತ್ತಿದೆ.
-ಡಾ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ.
ಜಿಲ್ಲೆಯ ಕೋವಿಡ್ ಅಂಕಿ ಅಂಶ :
5,16,288 ಮಂದಿಗೆ ಪರೀಕ್ಷೆ
23,352 ಮಂದಿಗೆ ಪಾಸಿಟಿವ್
4,62.487 ಮಂದಿಗೆ ನೆಗೆಟಿವ್
264 ಮಂದಿ ಒಟ್ಟು ಮೃತರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
