ತುಮಕೂರು :
ತುಮಕೂರು ದಸರಾ ಸಮಿತಿ ವತಿಯಿಂದ ಅ.15 ರಂದು ನಾಡಹಬ್ಬ ದಸರಾ ಕಾರ್ಯ ಕ್ರಮವನ್ನು ನಗರದ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಗೆ ರಂಗೋಲಿ ಸ್ಪರ್ಧೆ ಹಮ್ಮಿ ಕೊಳ್ಳಲಾಗಿದೆ. ಮಧ್ಯಾಹ್ನ 1.30 ಗಂಟೆಗೆ ಬಿಜಿಎಸ್ (ಟೌನ್‍ಹಾಲ್)ವೃತ್ತದಿಂದ ಜೂನಿಯರ್ ಕಾಲೇಜು ಮೈದಾನದವರೆಗೆ ವಿಜಯದಶಮಿ ಮೆರವಣಿಗೆ ನಡೆಯಲಿದ್ದು, ಬೆಂಗಳೂರಿನ ವಾಸವಿ ಪೀಠಂನ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಚಾಲನೆ ನೀಡುವರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಧ್ವಜ ಪೂಜೆ, ಗಾಯತ್ರಿ ನಾರಾಯಣ್ ಗಣಪತಿ ಪೂಜೆ, ಎಸ್‍ಪಿ ಚಿದಾನಂದ್ ಚಾಮುಂಡೇ ಶ್ವರಿ ಪೂಜೆ ನೆರವೇರಿಸ ಲಿದ್ದು, ಮೇಯರ್ ಬಿ.ಜಿ. ಕೃಷ್ಣಪ್ಪ ಉದ್ಘಾಟಿಸುವರು. ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಎಸ್ಪಿ ರಾಹುಲ್ ಕುಮಾರ್ ಶಹಪೂರ್‍ವಾಡ್ ಮುಖ್ಯ ಅತಿಥಿಗಳಾಗಿ ರುವರು.
ಸಂಜೆ 4 ಗಂಟೆಗೆ ಸಾಮೂಹಿಕ ಶಮೀಪೂಜೆ, 5 ಗಂಟೆಗೆ ಸಾರ್ವಜನಿಕ ಸಮಾರಂಭ, ಸಾರ್ವಜನಿಕರಿಗಾಗಿ ರಂಗೋಲಿ ಸ್ಪರ್ಧೆ(ಅಗತ್ಯ ವಸ್ತುಗಳನ್ನು ಸ್ಪರ್ಧಿಗಳು ತರಬೇಕು) ಏರ್ಪಡಿಸಲಾಗಿದ್ದು, ಕಾಲಾವಕಾಶ : 90 ನಿಮಿಷ ನಿಗಧಿಗೊಳಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ(ರೂ. 5000/- ರೂ. 3000/- ರೂ. 2000/) ಮತ್ತು ಪಾರಿತೋಷಕ ನೀಡಲಾಗುವುದು.
ಸಂಜೆ 6-45 ರಿಂದ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯುತ್ತದೆ.
ಜಿಲ್ಲಾ ಸಚಿವ ಜೆ.ಸಿ. ಮಾಧುಸ್ವಾಮಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದ ಜಿ.ಎಸ್. ಬಸವ ರಾಜು ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ರುವರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
