ತುಮಕೂರು ಜಿಲ್ಲಾಧಿಕಾರಿ ವೈ‌ ಎಸ್ ಪಾಟೀಲ್ ವರ್ಗಾವಣೆ…!

ಬೆಂಗಳೂರು:

      ತುಮಕೂರು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಸೇರಿದಂತೆ 11 ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಮಂಗಳವಾರ ವರ್ಗಾವಣೆ ಮಾಡಿ ಆದೇಶಿಸಿದೆ.

      ಈ ಕುರಿತಂತೆ ಅಧಿಸೂಚನೆಯನ್ನು ಹೊರಡಿಸಿದ್ದು, 1990ರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿದೆ.

       ಐಎಎಸ್ ಧಿಕಾರಿ ಉಮಾಶಂಕರ್ ಎಸ್ ಆರ್ ಅವರನ್ನು ಸಹಕಾರ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಯಿಂದ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ನೇಮಿಸಿ ಆದೇಶಿಸಿದೆ.

     ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಮಂಜುನಾಥ್ ಪ್ರಸಾದ್ ಅವರನ್ನು ಸಹಕಾರ ಇಲಾಖೆಯ ಪ್ರಿನ್ಸಿಪಲ್ ಸೆಕ್ರೇಟರಿಯಾಗಿ ನೇಮಿಸಿದೆ. ವಿ ಅನ್ಬುಕುಮಾರ್ ಅವರನ್ನು ಕೆ ಎಸ್ ಆರ್ ಟಿಸಿ ಎಂ.ಡಿ ಹುದ್ದೆಯಿಂದ ವರ್ಗಾವಣೆ ಮಾಡಿ, ಕೃಷಿಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿದೆ.

    ಐಎಎಸ್ ಅಧಿಕಾರಿ ಮೋಹನ್ ರಾಜ್ ಕೆ.ಪಿ ಅವರನ್ನು ಆರ್ಟಿಕಲ್ಚರ್ ಮತ್ತು ಸಿರಿಕಲ್ಚರ್ ಇಲಾಖೆಯ ಸೆಕ್ರೇಟರಿಯಾಗಿ, ಡಾ.ರಿಚರ್ಡ್ ವಿನ್ಸನ್ ಡಿಸೋಜಾ ಅವರನ್ನು ಎಂಎಸ್‌ಎಂಇ ಮತ್ತು ಮೈನ್ ಇಲಾಖೆಯ ಕಾರ್ಯದರ್ಶಿಯಾಗಿ ನಿಯೋಜಿಸಿದೆ.

     ಕೆಐಎಡಿಬಿಯ ಸಿಇಓ ಆಗಿದ್ದಂತ ಐಎಎಸ್ ಅಧಿಕಾರಿ ಗಿರೀಶ್ ಆರ್ ಅವರನ್ನು ಮೈನಿಂಗ್ ಮತ್ತು ಜಿಯೋಲಜಿ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಿದೆ.

      ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಐಎಎಸ್ ಅಧಿಕಾರಿ ಕರೆ ಗೌಡ ಅವರನ್ನು ಬೆಂಗಳೂರಿನ ಅಟಲ್ ಸ್ನೇಹಿ ಕೇಂದ್ರದ ನಿರ್ದೇಶಕರಾಗಿ, ಪಾಟಿಲ್ ಯಲಗೌಡ ಶಿವನಗೌಡ ಅವರನ್ನು ತುಮಕೂರು ಡಿಸಿ ಹುದ್ದೆಯಿಂದ ವರ್ಗಾವಣೆ ಮಾಡಿ ಬೆಂಗಳೂರಿನ ಅಗ್ರಿಕಲ್ಚರ್ ಇಲಾಖೆಯ ಕಮೀಷನರ್ ಆಗಿ ನೇಮಕ ಮಾಡಲಾಗಿದೆ.

     2012ರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಜಗದೀಶ್ ಜಿ ಅವರನ್ನು ಕೆ ಎಸ್ ಟಿ ಡಿ ಸಿಯ ಎಂ.ಡಿಯಾಗಿ ನೇಮಿಸಿದೆ. ಡಾ.ಮಹೇಶ್ ಎಂ ಅವರನ್ನು ಕರ್ನಾಟಕ ಸೋಪ್ ಮತ್ತು ಮರ್ಜಕ ಲಿಮಿಟೆಡ್ ಎಂ.ಡಿ ಹುದ್ದೆಯಿಂದ ವರ್ಗಾವಣೆ ಮಾಡಿ ಕೆಐಎಡಿಬಿ ಸಿಇಓ ಆಗಿ ನೇಮಕ ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap