ತುಮಕೂರು: ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಹಣ ಕೀಳುವ ಆನ್’ಲೈನ್ ವಂಚಕರ ಜಾಲ!

 ತುಮಕೂರು:

      ಡಿಜಿಟಲ್ ವ್ಯವಹಾರಗಳು ಹೆಚ್ಚಿದಂತೆಲ್ಲಾ ಆನ್‍ಲೈನ್ ಮೂಲಕ ಹಣ ದೋಚುವ ದಂಧೆಯು ಹೆಚ್ಚತೊಡಗಿತು. ಇದರ ಹಿಂದೆಯೇ ಫೇಸ್‍ಬುಕ್‍ನಲ್ಲಿಯೂ ನಕಲಿ ಖಾತೆಯನ್ನು ಸೃಷ್ಟಿಸಿ ಹಣ ದೋಚುವವರ ದಂದೆ ದಿನೆ ದಿನೆ ಹೆಚ್ಚಾಗುತ್ತಿದೆ. ಗಣ್ಯ ವ್ಯಕ್ತಿಗಳು ಮತ್ತು ಸಾರ್ವಜನಿಕ ಜೀವನದಲ್ಲಿ ಹೆಚ್ಚು ಒಡನಾಟ ಇಟ್ಟುಕೊಂಡಿರುವವರನ್ನೇ ಟಾರ್ಗೆಟ್ ಮಾಡಿ ಹಣ ದೋಚುವ ದಂಧೆ ವ್ಯಾಪಕವಾಗುತ್ತಿದೆ.

ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಖಾತೆ ಹೊಂದಿರುವ ವ್ಯಕ್ತಿಗಳ ಹೆಸರಿನಲ್ಲೇ ನಕಲಿ ಫೇಸ್ ಬುಕ್ ತೆರೆಯಲಾಗುತ್ತದೆ. ಅವರ ಮೂಲ ಭಾವಚಿತ್ರವೆ ನಕಲಿ ಖಾತೆಯಲ್ಲಿಯೂ ಇರುತ್ತದೆ. ಇದು ಅಸಲಿಯೋ, ನಕಲಿಯೋ ಎಂಬುದು ಗೊತ್ತಾಗುವುದೇ ಇಲ್ಲ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಆನ್‍ಲೈನ್ ವಂಚಕರು ಫೇಸ್‍ಬುಕ್ ಖಾತೆ ಹೊಂದಿರುವ ಪರಿಚಯಸ್ಥರಿಗೆ ಸಂದೇಶ ರವಾನಿಸುತ್ತಾರೆ.
ತುರ್ತಾಗಿ ಇಂತಿಷ್ಟು ಹಣ ಬೇಕಾಗಿದೆ, ಈಗ ಮಾತನಾಡಲು ಸಮಯವಿಲ್ಲ, ಉಳಿದ ವಿಷಯ ನಂತರ ಹೇಳುತ್ತೇನ, ನಾಳೆಯೇ ಹಣ ಹಿಂದಿರುಗಿಸುತ್ತೇನೆ ಎಂಬಿತ್ಯಾದಿ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಸಂದೇಶ ಕಳುಹಿಸುವ ಖದೀಮರು 10 ಸಾವಿರ, 15 ಅಥವಾ 20 ಸಾವಿರ ಹೀಗೆ ನಿಗದಿತ ಮೊತ್ತದ ಬೇಡಿಕೆಯನ್ನೂ ಇಡುತ್ತಾರೆ. ಅಥವಾ ಇಂತಿಷ್ಟು ಹಣ ಬೇಕಾಗಿತ್ತು, ಇದರಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಳುಹಿಸಿ ಎಂದು ಸಂದೇಶದಲ್ಲಿ ಹೇಳುತ್ತಾರೆ.

      ಈ ಸಂದೇಶಗಳನ್ನು ನಂಬಿದರೆ ಕಥೆ ಮುಗಿದಂತೆ. ರಾಷ್ಟ್ರದ ಉದ್ದಗಲಕ್ಕೂ ಸಾವಿರಾರು ಮಂದಿ ಲಕ್ಷ ಲಕ್ಷ ರೂ.ಗಳನ್ನು ಇಂತಹ ಸಂದೇಶಗಳನ್ನು ನಂಬಿಯೇ ಕಳೆದುಕೊಂಡಿದ್ದಾರೆ. ಗೆಳೆತನ, ಆಪ್ತತೆ, ಬಂಧು ಬಳಗ ಇತ್ಯಾದಿ ವಿಷಯಗಳನ್ನೇ ಬಂಡವಾಳ ಮಾಡಿಕೊಳ್ಳುವ ಆನ್‍ಲೈನ್ ವಂಚಕರು ನಯವಾಗಿಯೇ ಸಾವಿರಾರು ರೂ.ಗಳನ್ನು ನಿಮಿಷಾರ್ಧದಲ್ಲಿ ದೋಚಿ ಸೈಲೆಂಟಾಗಿ ಅವರ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ವಿಷಯ ನಕಲಿ ಎಂದು ಗೊತ್ತಾಗುವಷ್ಟರಲ್ಲಿ ಅವರ ನಂಬರ್‍ಗಳೇ ಮಾಯವಾಗಿರುತ್ತವೆ. ಯಾವ ಕುರುಹು ಇಲ್ಲದಂತೆ ಡಿಲೀಟ್ ಆಗಿರುತ್ತಾರೆ.

Too many Facebook friends? | Science News for Students

      ದುರಂತವೆಂದರೆ, ಇಷ್ಟೆಲ್ಲ ಅಭಿವೃದ್ಧಿ ಹೊಂದಿರುವ ರಾಷ್ಟ್ರದಲ್ಲಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ದೇಶದಲ್ಲಿ ಇಂತಹ ಆನ್‍ಲೈನ್ ವಂಚನೆಯನ್ನು ತಡೆಯಲು ಸಾಧ್ಯವಾಗಿಲ್ಲದೆ ಇರುವುದು. ಹಣ ಕಳೆದುಕೊಂಡಿರುವ, ವಂಚನೆಗೆ ಒಳಗಾಗಿರುವ ಸಾವಿರಾರು ಮಂದಿಯನ್ನು ಕೇಳಿದರೆ ಅಯ್ಯೋ ಬಿಡಿ, ಹೋದದ್ದು ಹೋಯಿತು, ಇನ್ನು ಹುಷಾರಾಗಿರಬೇಕಷ್ಟೆ ಎನ್ನುತ್ತಾರೆ.
ಸಾಕಷ್ಟು ಜನರ ಫೇಸ್‍ಬುಕ್ ಖಾತೆಯನ್ನು ಹ್ಯಾಕ್ ಮಾಡುವುದು, ನಕಲಿ ಖಾತೆ ತೆರೆದು ಪರಿಚಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂತರ ಹಣ ಕೇಳುವುದು… ಈ ಸಂಗತಿಗಳು ದಿನೆ ದಿನೆ ಹೆಚ್ಚುತ್ತಿವೆ.

      ಈಗಾಗಲೇ ಸ್ನೇಹಿತರ ಪಟ್ಟಿಯಲ್ಲಿರುವ ನಿಮ್ಮ ಗೆಳೆಯರ ಹೆಸರಿನಲ್ಲಿ ಮತ್ತೆ ಫ್ರೆಂಡ್ ರಿಕ್ವೆಸ್ಟ್ ಬಂದರೆ ಅದನ್ನೊಮ್ಮೆ ಅನುಮಾನಿಸಿ ನೋಡುವುದು ಒಳ್ಳೆಯದು. ತಕ್ಷಣ ಅಕ್ಸೆಪ್ಟ್ ಮಾಡುವ ಬದಲು ಒಮ್ಮೆ ಪರೀಕ್ಷಿಸುವುದು ಅಗತ್ಯ. ಗೆಳೆಯರ ಒರಿಜಿನಲ್ ಖಾತೆಯಾದರೆ ಫೇಸ್ ಬುಕ್.ಕಾಮ್/ಬಳಿಕ ಸ್ನೇಹಿತರ ಹೆಸರು ಬರುತ್ತದೆ. ನಕಲಿ ಖಾತೆಯಾದರೆ ಫೇಸ್‍ಬುಕ್ ಯುನಿಕ್ ಐಡಿ, ಅಲ್ಲಿ ನಕಲಿ ಅಕೌಂಟ್ ಮಾಡಿದವನು ಪ್ರದರ್ಶನದ ಹೆಸರನ್ನಷ್ಟೆ ಬದಲಿಸಿರುತ್ತಾನೆ. ಯುನಿಕ್ ಐಡಿ ನಕಲಿ ಖಾತೆ ಸೃಷ್ಟಿಸಿದವನ ಹೆಸರಿನಲ್ಲಿರುತ್ತದೆ. ಅಥವಾ ಯಾವುದೋ ಅಂಕಿಗಳನ್ನು ಒತ್ತಿರುತ್ತಾನೆ. ಹೀಗೆ ನಕಲಿ ಖಾತೆಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆಗಳನ್ನು ಕೈಗೊಳ್ಳಬಹುದು. ಈ ಬಗ್ಗೆ ಗೆಳೆಯರ ಸಹಕಾರವನ್ನು ಪಡೆಯಬಹುದು.

      ರಾಜಕಾರಣಿಗಳು, ಐಪಿಎಸ್, ಐಎಎಸ್ ಅಧಿಕಾರಿಗಳನ್ನೇ ಬಿಟ್ಟಿಲ್ಲ ಈ ಸೈಬರ್ ಕ್ರೈಂ ಖದೀಮರು. ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಹೆಸರಲ್ಲೂ ನಕಲಿ ಫೇಸ್‍ಬುಕ್ ಖಾತೆ ತೆರೆಯಲಾಗಿತ್ತು. ಸ್ವತಃ ಅವರೇ ಅಭಿಪ್ರಾಯ ಹಂಚಿಕೊಂಡಿದ್ದರು. 

      ಅಸಲಿ ಖಾತೆಯನ್ನು ಹೋಲುವ ರೀತಿಯಲ್ಲಿಯೇ ನಕಲಿ ಫೇಸ್‍ಬುಕ್ ಖಾತೆ ಸೃಷ್ಟಿಸುತ್ತಾರೆ. ಗಣ್ಯ ವ್ಯಕ್ತಿಗಳು ಹಾಗೂ ಹೆಚ್ಚು ಸ್ನೇಹಿತರು ಇರುವ ವ್ಯಕ್ತಿಗಳನ್ನು ಗುರುತಿಸಿ ಅಂತಹವರ ನಕಲಿ ಖಾತೆಯನ್ನು ಸೃಷ್ಟಿಸಿ ಹಣ ಮಾಡುವ ದಂಧೆ ವ್ಯಾಪಕವಾಗುತ್ತಿದೆ. ಫೇಸ್ ಬುಕ್ ಬಳಕೆದಾರರು ಎಂದಿಗೂ ಇಂತಹ ಮೆಸೆಂಜರ್ ಸಂದೇಶದ ಹಣದ ಬೇಡಿಕೆಗೆ ಮೋಸ ಹೋಗಬಾರದು, ಕೂಡಲೇ ಸಂಬಂಧಪಟ್ಟ ವ್ಯಕ್ತಿಯನ್ನು ಸಂಪರ್ಕಿಸಿ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಬೇಕು. ಇತ್ತೀಚೆಗೆ ನನ್ನ ಆತ್ಮೀಯರು ಸಾಕಷ್ಟು ಹಣ ಕಳೆದುಕೊಂಡಿದ್ದಾರೆ ಎನ್ನುತ್ತಾರೆ. 

– ರೂಪೇಶ್ ಕೃಷ್ಣಯ್ಯ

      ಮೊದಲಿಗೆ ಒಂದು ಫ್ರೆಂಡ್ ರಿಕ್ವಿಸ್ಟ್ ಬರುತ್ತದೆ. ಅವರು ನಮಗೆ ಪರಿಚಯ ಇರುವುದರಿಂದ ಸಾಮಾನ್ಯವಾಗಿ ಅಕ್ಸೆಪ್ಟ್ ಮಾಡುತ್ತೇವೆ. ಕೂಡಲೇ ಹಾಯ್ ಎಂಬ ಸಂದೇಶ ಬರುತ್ತದೆ. ಸಂದೇಶಗಳ ಕ್ರಿಯೆ, ಪ್ರತಿಕ್ರಿಯೆ ಮುಂದುವರೆಯುತ್ತದೆ. ನಂಬಿಕೆ ಬಂದ ಕೂಡಲೇ ಮೊತ್ತದ ಬೇಡಿಕೆ ಇಡುತ್ತಾರೆ. ಗೂಗಲ್ ಪೇ ಇತ್ಯಾದಿಗಳ ಬಗ್ಗೆ ಕೇಳುತ್ತಾರೆ. ಇದನ್ನು ನಂಬಿ ಹಣ ಕಳುಹಿಸಿದರೆ ನಮ್ಮ ಹಣ ಹೋದಂತೆಯೇ. ಕೆಲವೆ ನಿಮಿಷಗಳ ಅಂತರದಲ್ಲಿ ಅಪರಿಚಿತರ ಆ ನಂಬರ್ ಇತ್ಯಾದಿ ಯಾವ ಮಾಹಿತಿಯೂ ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಆನ್‍ಲೈನ್ ಖದೀಮರು ಎಚ್ಚರಿಕೆ ವಹಿಸಿರುತ್ತಾರೆ.

ಮೋಸ ಯಾಕೆ ಹೋಗಬೇಕು..? 

Facebook security essentials: Avoiding phishing & scams

      ಯಾರಿಗಾದರೂ ಹಣದ ಅವಶ್ಯಕತೆ ಇದ್ದರೆ ನೇರವಾಗಿ ಕರೆ ಮಾಡಿ ಕೇಳುತ್ತಾರೆ, ಇಲ್ಲವೇ ಪ್ರತ್ಯಕ್ಷವಾಗಿ ಸಂಪರ್ಕಿಸುತ್ತಾರೆ. ಫೇಸ್ ಬುಕ್ ಮೂಲಕ ಹಣ ಕೇಳಿದ ತಕ್ಷಣ ಯಾಕೆ ಕೊಡಬೇಕು. ಜನ ಜಾಗರೂಕರಾಗಿಲ್ಲದಿದ್ದರೆ ಇಂತಹ ವಂಚನೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆನ್ ಲೈನ್ ವಂಚನೆ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇವುಗಳನ್ನು ನೋಡಿಯಾದರೂ ಜನ ಎಚ್ಚೆತ್ತುಕೊಳ್ಳಬೇಕು. ಸಾಮಾಜಿಕ ಜಾಲ ತಾಣ ಬಳಕೆ ಮಾಡುವವರು ತುಂಬಾ ಎಚ್ಚರಿಕೆ ವಹಿಸಬೇಕು.

– ರಾಹುಲ್ ಕುಮಾರ್ ಶಹಪೂರ್ ವಾಡ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ತುಮಕೂರು

ನಕಲಿ ಖಾತೆಯನ್ನು ಹೀಗೆ ಬ್ಲಾಕ್ ಮಾಡಿ

      ನಿಮ್ಮ ಹೆಸರಿನಲ್ಲಿರುವ ನಕಲಿ ಖಾತೆಯ ಪ್ರೊಫೈಲ್ ಗೆ ಹೋಗಿ, ಬಲ ಭಾಗ ಪಕ್ಕದಲ್ಲಿರುವ 3 ಡಾಟ್ ಐಕಾನ್ ಕ್ಲಿಕ್ ಮಾಡಿ, ಫೈಂಡ್ ಸಪೋರ್ಟ ಅಥವಾ ರಿಪೋಟ್  ಪ್ರೊಫೈಲ್ ಕ್ಲಿಕ್ ಮಾಡಿ, ಫೇಕ್ ಅಕೌಂಟ್ ಅಂತ ಆಯ್ಕೆ ಕ್ಲಿಕ್ ಮಾಡಿದರೆ ಬ್ಲಾಕ್ ಆಗುತ್ತದೆ.
 

ಸಾ.ಚಿ. ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap