ಅಂಚೆ ಕಚೇರಿ ಹೆಸರಲ್ಲಿ ವಂಚಕರು ಬರ್ತಿದ್ದಾರೆ ಹುಷಾರ್!

 ಮಿಡಿಗೇಶಿ :

      ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ನಲ್ಲೇಕಾಮನಹಳ್ಳಿ ಗ್ರಾಮದ ದಲಿತ ಸಮುದಾಯದ ಮಹಿಳೆ ರಂಗಮ್ಮ ಕೋಂ ನರಸಿಂಹಮೂರ್ತಿ ಎನ್ನುವರ ಮನೆಯ ಬಳಿಗೆ ಶುಕ್ರವಾರ ಆಗಮಿಸಿದ ಅಪರಿಚಿತ ವ್ಯಕ್ತಿ ನಿಮಗೆ ಅಂಚೆ ಕಚೇರಿಯಿಂದ 50 ಸಾವಿರ ಸಾಲ ಮಂಜೂರಾಗಿದೆ ಎಂದು ನಂಬಿಸಿ, ಶುಲ್ಕವಾಗಿ 5 ಸಾವಿರ ಕಟ್ಟಬೇಕೆಂದು ಹೇಳಿ ನಾಲ್ಕು ಸಾವಿರ ಪಡೆದು ಪರಾರಿಯಾಗಿರುವ ಘಟನೆ ನಡೆದಿದೆ.

ಘಟನೆ ವಿವರ:

      ಫೆ.26 ರಂದು ಬೆಳಿಗ್ಗೆ 7-00 ಗಂಟೆಯ ಸಮಯಕ್ಕೆ ಅಪರಿಚಿತ ವ್ಯಕ್ತಿಯೋರ್ವ ರಂಗಮನ್ನ ಮನೆ ಬಳಿ ಬಂದು ಹೆಸರಿಗೆ ಸರ್ಕಾರದಿಂದ ಅಂಚೆ ಕಛೇರಿಗೆ ಐವತ್ತು ಸಾವಿರ ಸಾಲ ಮಂಜೂರಾತಿ (ಲೋನ್) ಆಗಿದೆ.  ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಪಾಸ್ ಪೋರ್ಟ್ ಸೈಜಿನ ಫೋಟೋಹಾಗೂ ನಗದು ಐದು ಸಾವಿರ ರೂಗಳ ಹಣವನ್ನು ನೀಡಿದಲ್ಲಿ ಇಂದೇ ಅಂಛೇ ಕಚೇರಿಂiÀiಲ್ಲಿ ಐವತ್ತು ಸಾವಿರ ಹಣವನ್ನು ಪಡೆದುಕೊಳ್ಳಬಹುದೆಂದು ಹೇಳಿ ಮಹಿಳೆಯಿಂದ ನಾಲ್ಕು ಸಾವಿರ ಹಣ ಸ್ಥಳದಲ್ಲೇ ಪೀಕಿ ಅಂಚೆ ಕಚೇರಿಯಲ್ಲಿ ಸಾಲದ ಹಣದ ಪಡೆಯಿರಿ ಎಂದು ಹೇಳಿ ಕಾಲ್ಕಿತ್ತಿದ್ದಾರೆ.

      ಈತನ ಮಾತನ್ನು ನಂಬಿದ್ದ ರಂಗಮ್ಮ ನರಸಿಂಹಮೂರ್ತಿರವರು ಸಾಲ ದೊರೆಯುತ್ತದೆಂಬ ನಂಬಿಕೆಯಿಂದ ಬೆಳಿಗ್ಗೆ 9-30 ಗಂಟೆಯ ಸಮಯಕ್ಕೆ ಮಿಡಿಗೇಶಿಯ ಅಂಚೆ ಕಚೇರಿಗೆ ಬಂದು ನನ್ನ ಹೆಸರಿಗೆ ಸಾಲ ಮಂಜೂರಾಗಿದೆಯಂತೆ ಹಣ ನೀಡಿ ಎಂದು ಕೋರಿದಾಗ ವಂಚಕನ ಅಸಲಿಯತ್ತು ಬಯಲಾಗಿದೆ.

     ಅಂಚೆ ಕಚೇರಿಯಲ್ಲಿ ಇಂತಹ ಯಾವುದೇ ರೀತಿಯ ಸಾಲ ನೀಡುವ ಅವಕಾಶವಿಲ್ಲ ಎಂದು ಅಂಚೆ ಅಧಿಕಾರಿ ಮೋಸಕ್ಕೊಳಗಾದ ರಂಗಮ್ಮರಿಗೆ ತಿಳಿಸಿದ್ದು, ಘಟನೆ ಬಗ್ಗೆ ಮಿಡಿಗೇಶಿ ಪೋಲೀಸರ ಗಮನಕ್ಕೆ ತಂದಿದ್ದಾರೆ. ಸಾರ್ವಜನಿಕರು ಅಪರಿಚಿತರ ವಂಚನೆಯ ಮಾತುಗಳಿಗೆ ಬಲಿಯಾಗಬಾರದೆಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.

 
ಪ್ರಧಾನ ಮೋದಿ ಹೆಸರಲ್ಲೂ ವಂಚನೆ :

      ಇದೇ ದಇನ ಮಿಡಿಗೇಶಿ ಗ್ರಾಮದ ಮಾರುತಿ ನಗರದ ವಾಸಿ ಅಂಜಮ್ಮ ಕೋಂ ಭೀಮಯ್ಯ ಎನ್ನುವ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ನರೇಂದ್ರ ಮೋದಿ ಯೋಜನೆಯಡಿ ನಿಮಗೆ 30 ಸಾವಿರ ಹಣ ಬಂದಿದೆ. ಇದನ್ನು ಪಡೆಯಲು ಗಿ 2500 ರೂ ತೆಗೆದುಕೊಂಡು ನೀವು 9 ಗಂಟೆಗೆ ಕುವೆಂಪು ಶಾಲೆಯ ಬಳಿ ಬನ್ನಿ. 30 ಸಾವಿರ ಹಣ ಪಡದುಕೊಳ್ಳಿ ಎಂದು ಹೇಳಿದ್ದು ನಂತರ ವೃದ್ದೆ 9 ಗಂಟೆಗೆ ಕುವೆಂಪು ಶಾಲೆಯ ಬಳಿ ಹೋಗಿದ್ದು, ಮೋಸ ಹೋಗಿರುವ ಬಗ್ಗೆ ವರದಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap