ತುಮಕೂರು : ಇಂದಿನಿಂದ ಲಾಕ್ ಡೌನ್ ನಿರ್ಬಂಧಗಳಲ್ಲಿ ಮತ್ತಷ್ಟು ಸಡಿಲಿಕೆ!

 ತುಮಕೂರು : 

     ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಬಂದಿರುವುದರಿಂದ ಸರ್ಕಾರವು ಇಂದಿನಿಂದ(ಜುಲೈ 5ರ ಬೆಳಿಗ್ಗೆ 6 ಗಂಟೆಯಿಂದ) ಲಾಕ್ ಡೌನ್ ನಿಬರ್ಂಧಗಳನ್ನು ಮತ್ತಷ್ಟು ಸಡಿಲಗೊಳಿಸಿದ್ದು, ಸೋಮವಾರದಿಂದ ಜಿಲ್ಲೆಯಲ್ಲಿಯೂ ಈ ಸಡಿಲಿಕೆ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ತಿಳಿಸಿದ್ದಾರೆ.

      ಲಾಕ್ ಡೌನ್ ನಿಬರ್ಂಧಗಳನ್ನು ಸಡಿಲಗೊಳಿಸಲು ಸರ್ಕಾರವು ಪರಿಷ್ಕೃತ ಮಾರ್ಗಸೂಚಿಯನ್ನು ಜಾರಿಗೊಳಿಸಿದ್ದು, ಈ ಮಾರ್ಗಸೂಚಿಯು ಜುಲೈ 5 ರಿಂದ 19ರವರೆಗೆ ಜಾರಿಯಲ್ಲಿರುತ್ತದೆ.

      ಮಾರ್ಗಸೂಚಿಗಳನ್ವಯ ಚಿತ್ರಮಂದಿರ/ಸಿನೆಮಾ ಹಾಲ್/ಪಬ್ ಗಳನ್ನು ಹೊರತುಪಡಿಸಿ ಉಳಿದ ಅಗತ್ಯ ಚಟುವಟಿಕೆಗಳಿಗೆ ಅನುಮತಿಸಲಾಗಿದೆ. ಸ್ಪರ್ಧಾತ್ಮಕ ತರಬೇತಿ ಉದ್ದೇಶಕ್ಕಾಗಿ ಮಾತ್ರ ಈಜು ಕೊಳಗಳಿಗೆ ಅನುಮತಿಸಲಾಗಿದೆ.
ಕೋವಿಡ್ 19 ಸೂಕ್ತ ನಡವಳಿಕೆ ಮತ್ತು ಎಸ್ಓಪಿ ನಿಯಮಗಳನ್ನು ಅನುಸರಿಸಿ ಕ್ರೀಡಾ ಸಂಕೀರ್ಣ ಮತ್ತು ಕ್ರೀಡಾಂಗಣಗಳನ್ನು (ಅಭ್ಯಾಸದ ಉದ್ದೇಶಕ್ಕಾಗಿ ಮಾತ್ರ) ತೆರೆಯಬಹುದು ಆದರೆ ಪ್ರೆಕ್ಷಕರಿಗೆ ಅನುಮತಿಯಿಲ್ಲ.

      ಸಾಮಾಜಿಕ / ರಾಜಕೀಯ / ಕ್ರೀಡೆ / ಮನರಂಜನೆ / ಶೈಕ್ಷಣಿಕ / ಸಾಂಸ್ಕøತಿಕ / ಧಾರ್ಮಿಕ
ಕಾರ್ಯ / ಇತರೆ ಸಭೆಗಳನ್ನು ಏರ್ಪಡಿಸಲು ಅವಕಾಶವಿಲ್ಲ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ 100ಕ್ಕೂ ಹೆಚ್ಚು ಜನ ಸೇರದಂತೆ ಮದುವೆ ಹಾಗು ಕುಟುಂಬದ ಕಾರ್ಯಗಳನ್ನು ನಡೆಸಲು ಅನುಮತಿ ಇದೆ. ಅದೇ ರೀತಿ ಗರಿಷ್ಠ 20 ಸದಸ್ಯರೊಂದಿಗೆ ಶವಸಂಸ್ಕಾರ / ಅಂತ್ಯಕ್ರಿಯೆಗಳನ್ನು ನಡೆಸಲು ಅನುಮತಿಸಲಾಗುವುದು.

      ಮಂದಿರ, ಮಸೀದಿ, ಚರ್ಚ್ ನಂತಹ ಧಾರ್ಮಿಕ ಕೇಂದ್ರಗಳಲ್ಲಿ ತೀರ್ಥ ಪ್ರಸಾದ ಸೇವೆಗಳನ್ನು ಹೊರತುಪಡಿಸಿ ದರ್ಶನ/ಪ್ರಾರ್ಥನೆಗೆ ಮಾತ್ರ ತೆರೆಯಲು ಅನುಮತಿಸಲಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಆಸನ ಸಾಮಥ್ರ್ಯ(ಶೇ. 100)ವಿರುವಷ್ಟು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.

      ಎಲ್ಲಾ ಅಂಗಡಿ, ರೆಸ್ಟೋರೆಂಟ್, ಮಾಲ್, ಖಾಸಗಿ ಕಚೇರಿ, ಮತ್ತಿತರ ಮುಚ್ಚಿದ ಸ್ಥಳಗಳಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದರೊಂದಿಗೆ ಕೆಲಸ ಮಾಡಲು ಅವಕಾಶವಿದೆ. ಎಲ್ಲಾ ಶೈಕ್ಷಣಿಕ ಸಂಸ್ಥೆ / ಟ್ಯುಟೋರಿಯಲ್ / ಕಾಲೇಜುಗಳನ್ನು ಮುಂದಿನ ಆದೇಶದವರೆಗೂ ತೆರೆಯಲು ಅವಕಾಶವಿಲ್ಲ.

ಮಾಸ್ಕ್ ಧರಿಸದಿದ್ದರೆ ದಂಡ :

      ಕೋವಿಡ್ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾರ್ವಜನಿಕರು ಮಾಸ್ಕ್ ಧಾರಣೆ, ಕೈ-ಸ್ವಚ್ಛತೆಗಾಗಿ ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

     ಮಾಸ್ಕ್ ಧರಿಸದವರಿಗೆ ಮಹಾನಗರ ಪಾಲಿಕೆ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 250 ರೂ. ಹಾಗು ಉಳಿದ ಪ್ರದೇಶಗಳಲ್ಲಿ 100 ರೂ.ಗಳ ದಂಡ ವಿಧಿಸಲಾಗುವುದು. ಸಾರ್ವಜನಿಕರು ಹಾಗೂ ಮತ್ತಿತರರಿಗೆ ಕಿಟ್ ವಿರಣೆ ಮಾಡುವಾಗ ಜನಸಂದಣಿ ಸೇರುವುದನ್ನು ಕಟ್ಟುನಿಟ್ಟಾಗಿ ನಿಬರ್ಂಧಿಸಲಾಗಿದೆ.

ಬದಲಾದ ಸಮಯದಲ್ಲಿ ರಾತ್ರಿ ಕಫ್ರ್ಯೂ ಮುಂದುವರಿಕೆ :

     ಬದಲಾದ ಸಮಯದಲ್ಲಿ ರಾತ್ರಿ ಕಫ್ರ್ಯೂ ಮುಂದುವರೆಯಲಿದ್ದು, ರಾತ್ರಿ ಕಫ್ರ್ಯೂ ಮಾರ್ಗಸೂಚಿಯನ್ವಯ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅಗತ್ಯ ಮತ್ತು ತುರ್ತು ಹೊರತುಪಡಿಸಿ, ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

      ರೋಗಿಗಳು ಮತ್ತು ಅವರ ಪರಿಚಾರಕರು / ತುರ್ತು ಅಗತ್ಯವಿರುವ ವ್ಯಕ್ತಿಗಳು, ವ್ಯಾಕ್ಸಿನೇಷನ್ ತೆಗೆದುಕೊಳ್ಳುವವರಿಗೆ ಅನುಮತಿಸಲಾಗುವುದು. ಅಗತ್ಯ ಸೇವೆ ಮತ್ತು ಕರ್ತವ್ಯಗಳನ್ನು ನಿರ್ವಹಿಸುವ ಅಧಿಕಾರಿಗಳು / ಸಿಬ್ಬಂದಿಗಳ ಓಡಾಟಕ್ಕೆ ನಿಬರ್ಂಧ ಇರುವುದಿಲ್ಲ. ತುರ್ತು ಮತ್ತು ಅಗತ್ಯ ಸೇವೆಗಾಗಿ 24/7 ಕಾರ್ಯಾಚರಣೆ ಮಾಡುವ ಎಲ್ಲಾ ಕೈಗಾರಿಕೆಗಳು / ಕಂಪನಿಗಳು / ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು. ಇಂತಹ ಸಂಸ್ಥೆಗಳಿಂದ ನೀಡಲಾದ ಗುರುತಿನ ಚೀಟಿ ಹೊಂದಿರುವ ನೌಕರರ ಚಲನೆಗೆ ಅನುಮತಿಸಲಾಗುವುದು.

ಅಧಿಕೃತ ಗುರುತಿನ ಚೀಟಿ ಹೊಂದಿರುವ ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರ ನೌಕರರು ಮತ್ತು ವಾಹನಗಳ ಓಡಾಟಕ್ಕೂ ಅನುಮತಿ ನೀಡಲಾಗುವುದು. ಐಟಿ ಮತ್ತು ಐಟಿಇಎಸ್ ಕಂಪನಿಗಳು / ಸಂಸ್ಥೆಗಳ ಅಗತ್ಯವಿರುವ ಸಿಬ್ಬಂದಿ ಹಾಗೂ ನೌಕರರು ಮಾತ್ರ ಕಚೇರಿಯಿಂದ ಕೆಲಸ ಮಾಡತಕ್ಕದ್ದು. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ.
ವೈದ್ಯಕೀಯ/ತುರ್ತು/ಔಷಧಿ ಮಳಿಗೆ ಇನ್ನಿತರೆ ಅಗತ್ಯ ಸೇವೆ ಒದಗಿಸಲು ಅನುಮತಿಯಿದೆ ಆದರೆ ಯಾವುದೇ ವಾಣಿಜ್ಯ ಸೇವೆಗೆ ಅವಕಾಶವಿಲ್ಲ.

      ಎಲ್ಲ ತರಹದ ಸರಕು ವಾಹನ/ಖಾಲಿ ವಾಹನಗಳ ಸಂಚಾರಕ್ಕೆ ಅನುಮತಿಯಿಲ್ಲ. ಆದರೆ ಹೋಮ್ ಡೆಲಿವರಿ ವಾಹನಗಳಿಗೆ ಅನುಮತಿಯಿದೆ. ಪ್ರಯಾಣಿಕರ ಪ್ರಯಾಣಕ್ಕೆ ಅನುವಾಗುವಂತೆ ಎಲ್ಲ ರೀತಿಯ ಸಾರಿಗೆ ವಾಹನ ಸಂಚಾರಕ್ಕೆ ಅವಕಾಶವಿದೆ ಹಾಗೂ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಸ್ ಟರ್ಮಿನಲ್ / ನಿಲ್ದಾಣಗಳಿಗೆ ಹೋಗಲು/ಬರಲು ಸಾರಿಗೆ/ಖಾಸಗಿ ವಾಹನ/ ಟ್ಯಾಕ್ಸಿಗಳಿಗೆ ಅನುಮತಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ದಾಖಲೆ / ಟಿಕೆಟ್ ಅನ್ನು ಕಟ್ಟುನಿಟ್ಟಾಗಿ ಹಾಜರುಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap