ತುಮಕೂರು : ಹಣ್ಣು-ತರಕಾರಿ ಬೆಲೆಗಳಲ್ಲಿ ಏರಿಳಿತ!

ತುಮಕೂರು :

      ಕಳೆದ ವಾರ ವರಮಹಾಲಕ್ಷೀ ಹಬ್ಬದ ಹಿನ್ನೆಲೆಯಲ್ಲಿ ಏರಿಕೆ ಕಂಡಿದ್ದ ಹೂವು-ಹಣ್ಣಿನ ಬೆಲೆಗಳು ಈ ವಾರ ಇಳಿಕೆಯತ್ತ ಸಾಗಿವೆÉ. ಮಳೆ ಬರುತ್ತಿರುವುದು, ಅನ್ಯ ರಾಜ್ಯಗಳಿಂದ ಕೆಲ ತರಕಾರಿಗಳು ಮಾರುಕಟ್ಟೆಗೆ ಬರುತ್ತಿರುವುದರಂದ ತರಕಾರಿ ಧಾರಣೆಯಲ್ಲಿ ಏರಿಳಿತಗಳಾಗಿವೆ.

      ಧಾನ್ಯ ಬೆಲೆ ತುಸು ಇಳಿದಿದ್ದರೆ, ಕೋಳಿ, ಮೀನಿನ ಬೆಲೆ ದುಬಾರಿಯಾಗಿದೆ. ಸೇಬು ಮತ್ತೆ ಏರಿಕೆಯಾಗಿದ್ದು, ಏಲಕ್ಕಿ, ಪಚ್ಚಬಾಳೆ ಹಣ್ಣು ತಲಾ ಕೆ.ಜಿ.ಗೆ 10 ದುಬಾರಿಯಾಗಿದೆ. ಪೈನಾಪಲ್ ಬೆಲೆ ದುಪ್ಪಟ್ಟಾಗಿದ್ದು, ಕಿತ್ತಳೆ, ಮಾವಿನ ಹಣ್ಣು ಬೆಲೆ ಹೆಚ್ಚಳವಾಗಿದೆ. ಆಷಾಢ ಮಾಸದ ವೇಳೆಗೆ ಹಣ್ಣಿನ ಬೆಲೆ ಇಳಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಏರಿಕೆಯತ್ತ ಮುಖ ಮಾಡಿದೆ.

ಇಳಿದ ಮೆಣಸಿನಕಾಯಿ :

      ಬೀನ್ಸ್ ಬೆಲೆ ಮತ್ತೆ ಕೊಂಚ ಇಳಿಕೆಯಾಗಿದ್ದರೆ, ಕ್ಯಾರೇಟ್, ಬೀಟ್ರೋಟ್ ಬೆಲೆ ಏರಿಕೆಯತ್ತಲೇ ಸಾಗಿದೆ. ಹಿಂದಿನ ವಾರ ದುಬಾರಿಯಾಗಿದ್ದ ಹಸಿಮೆಣಸಿನ ಕಾಯಿ ಕೆ.ಜಿ 10, ಸೌತೆಕಾಯಿ ಬೆಲೆ ಸ್ವಲ್ಪ ಕಡಿಮೆಯಾಗಿದ್ದರೆ ಸೊಪ್ಪಿನ ಬೆಲೆ ತೀವ್ರ ಇಳಿಕೆ ಕಂಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ 30, ಸಬ್ಬಕ್ಕಿ ಕೆ.ಜಿ 20-30, ಮೆಂತ್ಯ ಸೊಪ್ಪು ಕೆ.ಜಿ 20, ಪಾಲಕ್ ಸೊಪ್ಪು ಕೆಜಿ 20 ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.

ಎಣ್ಣೆ ಸ್ಥಿರ :

      ಬೇಳೆ, ಅಕ್ಕಿ ಸೇರಿದಂತೆ ಇತರ ಧಾನ್ಯಗಳ ಬೆಲೆ ಬಹುತೇಕ ಸ್ಥಿರವಾಗಿದ್ದರೂ, ಉದ್ದಿನ ಬೇಳೆ, ಬಟಾಣಿ, ಗೋಧಿ ಬೆಲೆ ಕೊಂಚ ಏರಿಕೆಯಾಗಿದೆ. ಹೆಸರು ಬೇಳೆ, ಕಡಲೆ ಬೇಳೆ ಬೆಲೆ ಅಲ್ಪ ಇಳಿದಿದೆ. ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹಾಗಾಗಿ ಧಾನ್ಯಗಳ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಎಂದು ಮಂಡಿಪೇಟೆ ವರ್ತಕರು ಹೇಳುತ್ತಾರೆ. ಅಡುಗೆ ಎಣ್ಣೆ ಸನ್‍ಫ್ಲವರ್ ಕೆ.ಜಿ 148-152, ಪಾಮಾಯಿಲ್ ಕೆ.ಜಿ 213-166 ಕ್ಕೆ ಮಾರಾಟವಾಗಿದೆ. ಹಿಂದಿನ ವಾರ ಇಳಿಕೆಯಾಗಿದ್ದ ಎಣ್ಣೆ ಬೆಲೆ ಈ ವಾರ ಸ್ಥಿರವಾಗಿದೆ.

ಕೋಳಿ ದುಬಾರಿ :

      ಕೋಳಿ ಬೆಲೆ ಮತ್ತೆ ಏರಿಕೆಯಾಗಿದ್ದು , ಬ್ರಾಯ್ಲರ್ ಕೆ.ಜಿ 186, ರೆಡಿ ಚಿಕನ್ ಕೆ.ಜಿ 250, ಮೊಟ್ಟೆ ಕೋಳಿ ಕೆ.ಜಿ 250 ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮೊಟ್ಟೆ ಕೋಳಿ ಹಿಂದಿನ ವಾರಕ್ಕಿಂತ ದುಬಾರಿಯಾಗಿದೆ. ಮೊಟ್ಟೆ ಧಾರಣೆ ಡಜನ್‍ಗೆ 70 ರೂಪಾಯಿ ಇದ್ದು, ಕಳೆದ ವಾರಕ್ಕಿಂತ 4 ರೂ.ಕಡಿಮೆ ಆಗಿದೆ.

ಮೀನು ಬೆಲೆ ಏರಿಕೆ :

      ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಿದ್ದು, ಬೆಲೆ ತೀವ್ರವಾಗಿ ಏರಿಕೆ ಕಂಡಿದೆ. ಬಂಗುಡೆ ಕೆ.ಜಿ 350, ಬೂತಾಯಿ 240, ಬೊಳಿಂಜರ್ 180, ಅಂಜಲ್ ಕೆ.ಜಿ 1230, ಬಿಳಿಮಾಂಜಿ 1,120, ಸೀಗಡಿ ಕೆ.ಜಿ 620 ಕ್ಕೆ ನಗರದ ಮತ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಹಣ್ಣು (ಬೆಲೆ ಕೆ.ಜಿ ರೂ.)

ಸೇಬು 80-100
ದಾಳಿಂಬೆ 120-150
ಮೊಸಂಬಿ 40-60
ಕಿತ್ತಳೆ 80
ಸಪೋಟ 60-80
ಏಲಕ್ಕಿ ಬಾಳೆ 50
ಪಚ್ಚೆ ಬಾಳೆ 25-30
ಪಪ್ಪಾಯ 30
ಕಲ್ಲಂಗಡಿ 20-30
ಕರಬೂಜ 30
ಸೀಬೆ 30-40
ಪೈನಾಪಲ್ 60
ದ್ರಾಕ್ಷಿ ಕಪ್ಪು 80-120
ದ್ರಾಕ್ಷಿ ಹಸಿರು 160
ಅನಾನಸ್ 40-50

ಧಾನ್ಯ (ಬೆಲೆ ಕೆ.ಜಿ ರೂ.)

(ಮಂಡಿಪೇಟೆ)
ತೊಗರಿಬೇಳೆ 105-110
ಉದ್ದಿನಬೇಳೆ 95-105
ಹೆಸರುಬೇಳೆ 100-110
ಕಡಲೆಬೇಳೆ 75-70
ಹೆಸರುಕಾಳು 95
ಅಲಸಂದೆ 80
ಅವರೆಕಾಳು 80
ಹುರಿಗಡಲೆ 90
ಬಟಾಣಿ 120-140
ಕಡಲೆಬೀಜ 100-110
ಗೋಧಿಹಿಟ್ಟು 30-32
ಹುಣಸೆಹಣ್ಣು 130-150
ಸಕ್ಕರೆ 38-42
ಬೆಲ್ಲ 45-50

ತರಕಾರಿ (ಬೆಲೆ ಕೆ.ಜಿ ರೂ.)

(ಅಂತರಸನಹಳ್ಳಿ ಮಾರುಕÀಟ್ಟೆ)
ಟೊಮೆಟೊ 15-20
ಈರುಳ್ಳಿ 30
ಆಲೂಗಡ್ಡೆ 20-25
ಬೀನ್ಸ್ 40
ಕ್ಯಾರೆಟ್ 40
ಬೀಟ್ರೂಟ್ 24-30
ಮೂಲಂಗಿ 15-20
ಗೆಡ್ಡೆಕೋಸು 30
ಬೆಂಡೆಕಾಯಿ 25-30
ಬದನೆಕಾಯಿ 20-30
ಎಲೆಕೋಸು 20
ಹೂಕೋಸು 1ಕ್ಕೆ 30
ಹಸಿ ಮೆಣಸಿನಕಾಯಿ 36-40
ಕ್ಯಾಪ್ಸಿಕಂ 30-32
ಶುಂಠಿ 50-60
ಸೌತೆಕಾಯಿ 1ಕ್ಕೆ 3-5
ನಿಂಬೆಹಣ್ಣು 1ಕ್ಕೆ 3

ಹೂವಿನ ಧಾರಣೆಗಳು ಮಾರು/ಕೆಜಿ ದರ

ಮಲ್ಲೆಹೂವು 150
ಕನಕಾಂಬರ 120
ಸೇವಂತಿಗೆ 50
ಬಟನ್ಸ್ 30
ಮಾರಿಗೋಲ್ಡ್ (1.ಕೆಜಿ) 10
ಗುಲಾಬಿ (15 ಪೀಸ್‍ಗಳ 1 ಕಟ್ಟು) 10-50
ದುಂಡುಮಲ್ಲಿಗೆ 120

ಚೆಂಡು ಹೂವು 30
ಸುಗಂಧರಾಜ ಕೆಜಿ 40-50

ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)

ಬಾಯ್ಲರ್ 150
ಫಾರಮ್ 120
ನಾಟಿ ಕೋಳಿ ಮಾಂಸ 250-300
ಮೀನು (ಸಾಮಾನ್ಯ) 150-200
ಮೊಟ್ಟೆ (1 ಡಜನ್) 50-60

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap