ತುಮಕೂರು : ಇಂದು-ನಾಳೆ ಗೂಳೂರು ಗಣೇಶ ಜಾತ್ರೆ

 ತುಮಕೂರು :

     ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ಜಾತ್ರೆ ಮತ್ತು ವಿಸರ್ಜನಾ ಮಹೋತ್ಸವವು ಜ. 24 ಮತ್ತು 24 ರಂದು ನಡೆಯಲಿದೆ.

      ಈಗಾಗಲೇ ಮಳೆ ಮತ್ತು ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಎರಡು ಬಾರಿ ಮುಂದೂಡಿಕೆಯಾಗಿದ್ದ ಗೂಳೂರು ಗಣೇಶ ವಿಸರ್ಜನಾ ಮಹೋತ್ಸವ ಜ. 23 ರಂದು ರಾತ್ರಿ 10 ಗಂಟೆಯಿಂದ ಆರಂಭವಾಗಲಿದೆ. ರಾತ್ರಿ 10 ಗಂಟೆಗೆ ಗ್ರಾಮದ 18 ಕೋಮಿನ ಜನರ ಸಮ್ಮುಖದಲ್ಲಿ ದೇವಾಲಯದಿಂದ ಗಣೇಶಮೂರ್ತಿಯನ್ನು ಹೊರಗೆ ತರಲಾಗುವುದು. ನಂತರ ರಾತ್ರಿ 12 ಗಂಟೆಯವರೆಗೂ ಉತ್ಸವ ನಡೆಯಲಿದೆ.

      ಶನಿವಾರ ರಾತ್ರಿ 7 ಗಂಟೆಗೆ ಜಾತ್ರೆ ಬರುವ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಚೌಡೇಶ್ವರಿ, ಗಣೇಶ, ಆಂಜನೇಯ, ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಅಲಂಕಾರವನ್ನು ಏರ್ಪಡಿಸಲಾಗಿದೆ.

     ಮಧ್ಯರಾತ್ರಿ ವರೆಗೆ ನಡೆಯುವ ಗಣೇಶೋತ್ಸವದಲ್ಲಿ ಮಹಿಳಾ ವೀರಗಾಸೆ, ಕೀಲುಕುದುರೆ ನರ್ತನ, ನಂದಿ, ನವಿಲು, ಜಿರಾಫೆ, ಕವಾಡ ಡ್ಯಾನ್ಸ್, ನಕ್ಕು ನಲಿಸುವ ಚಾರ್ಲಿ ಡ್ಯಾನ್ಸ್, ವೀರಭದ್ರ ದೇವರ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ.

      ಜ. 24 ರಂದು ಮಧ್ಯಾಹ್ನ ಮತ್ತೆ ಗಣೇಶಮೂರ್ತಿಯ ವೈಭವದ ಮೆರವಣಿಗೆಯು ಗ್ರಾಮದ ರಾಜಬೀದಿಗಳಲ್ಲಿ ನಡೆಯಲಿದೆ. ಸಂಜೆವರೆಗೂ ಗಣೇಶೋತ್ಸವದ ನಡೆದ ಬಳಿಕ ಸಂಜೆ 5 ಗಂಟೆಗೆ ಗೂಳೂರಿನ ಕೆರೆಯಲ್ಲಿ ಇತಿಹಾಸ ಪ್ರಸಿದ್ದ ಗಣೇಶಮೂರ್ತಿಯನ್ನು ವಿಸರ್ಜಿಸಲಾಗುವುದು.

      ಎರಡು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಗಣಪತಿ ಭಕ್ತ ಮಂಡಳಿಯ ಶಿವಕುಮಾರ್ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap