ತುಮಕೂರು : ಪತ್ರಕರ್ತ ಇಂದ್ರಕುಮಾರ್ ನಿಧನ

 
ತುಮಕೂರು: 

      ಪತ್ರಕರ್ತ ಜಿ. ಇಂದ್ರಕುಮಾರ್(53) ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದು, ಪತ್ನಿ ಜಯಶ್ರೀ, ಓರ್ವ ಪುತ್ರಿ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

      ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿ-ಉಪ ಸಂಪಾದಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾಗಿ, ಕಸಾಪ, ಇಪ್ಟಾ ಸೇರಿದಂತೆ ಹಲವುಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ದುಡಿದಿದ್ದರು.ಜಿಲ್ಲಾ ರಾಜ್ಯೋತ್ಸವ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿ ವಿವಿಧ ಸಂಘ ಸಂಸ್ಥೆಗಳ ಪ್ರಶಸ್ತಿಗೆ ಭಾಜನರಾಗಿದ್ದರು.

ಪ್ರಗತಿಶೀಲ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದ ಇಂದ್ರಕುಮಾರ್ ಲೇಖಕರು, ಕವಿಯಾಗಿ ಸಹ ಹೆಸರು ಮಾಡಿದ್ದು, ಪುಷ್ಪಾಂಜಲಿ, ಮಬ್ಬಿನಾಚೆಯ ಬೆಳಕು, ಸಾಲವತಿ, ಸ್ವಾತಂತ್ರ್ಯಚೌಕ, ಬಹುಮುಖಿ ಸ್ವಾತಂತ್ರ್ಯ ಸಂಗ್ರಾಮ ಸೇರಿ ಹಲವು ಕೃತಿಗಳನ್ನು ರಚನೆ ಮಾಡಿದ್ದರು. ಇಂದು ಬೆಳಿಗ್ಗೆ 10ಕ್ಕೆ ದಾಸಮುದ್ದಯನಪಾಳ್ಯದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

      ಮೃತರ ಅಂತಿಮ ದರ್ಶನವನ್ನು ರೆಡ್‍ಕ್ರಾಸ್ ರಾಜ್ಯ ಸಭಾಪತಿ ಎಸ್.ನಾಗಣ್ಣ, ಕುಲಪತಿ ವೈ.ಎಸ್.ಸಿದ್ದೇಗೌಡ, ಮಾಜಿಶಾಸಕ ಬಿ.ಸುರೇಶ್‍ಗೌಡ, ಎಸ್.ನಾಗಣ್ಣ, ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಎನ್.ಡಿ.ರಂಗರಾಜ್ ಹಾಗೂ ಸಂಘದ ಜಿಲ್ಲಾ, ತಾಲೂಕು ಪದಾಧಿಕಾರಿಗಳು, ಹಿರಿಯ ಪತ್ರಕರ್ತರಾದ ಆರ್.ಕಾಮರಾಜ್, ಸೊಗಡು ವೆಂಕಟೇಶ್, ಡಿ.ಎಂ.ಸತೀಶ್, ಎಚ್.ಎನ್.ಮಲ್ಲೇಶ್, ಕೆ.ಬಿ.ಚಂದ್ರಮೌಳಿ. ಲೇಖಕಿಯರಾದ ಬಾ.ಹ.ರಮಾಕುಮಾರಿ, ಡಾ.ಲೀಲಾಲೇಪಾಕ್ಷಿ, ದೊಡ್ಡಲಿಂಗಪ್ಪ, ಸಿದ್ಧಲಿಂಗಪ್ಪ, ಸೈಯದ್ ಮುಜೀಬ್, ಸುಬ್ರಹ್ಮಣ್ಯ. ಸೇರಿ ಹಲವರು ಪಡೆದಿದ್ದು, ಸಂತಾಪ ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link