ತುಮಕೂರು:
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ನಂತರ ತುಮಕೂರು ಭಾರತದ ಎರಡನೇ ಸಿಲಿಕಾನ್‌ಸಿಟಿಯಾಗಲಿದೆ. ಬೆಂಗಳೂರಿನ ನಂತರ ಐಟಿ-ಬಿಟಿ ದೊಡ್ಡ ಮಟ್ಟದಲ್ಲಿ ಬೆಳೆಯುವುದು, ಭಾರತದ ಎರಡನೇ ಸಿಲಿಕಾನ್ ಸಿಟಿಯಾಗುವ ಎಲ್ಲಾ ಗುಣ ಲಕ್ಷಣಗಳು ತುಮಕೂರು ನಗರಕ್ಕೆ ಇದೆ. ಬೆಂಗಳೂರಿಗೆ ಹತ್ತಿರವಿರುವ ಕಾರಣ ಇಂತಹ ಅವಕಾಶ ಒದಗಲಿದೆ. ಮೇಲಾಗಿ ಈ ನೆಲದ ಮಣ್ಣಿಗೆ ದೊಡ್ಡ ಗುಣವಿದೆ. ಗುಬ್ಬಿವೀರಣ್ಣ ಅವರಿಗೆ ಜನ್ಮಕೊಟ್ಟ ನಾಡು.
ಅವರ ಮೂಲಕ ಕನ್ನಡ ಮೇರು ನಟ ಡಾ.ರಾಜ್‌ಕುಮಾರ್ ಹೆಸರಾಂತ ಹಾಸ್ಯನಟ ಬಾಲಕೃಷ್ಣರಂತಹ ನಟರನ್ನು ಪರಿಚಯಿಸುವುದಕ್ಕೂ ಈ ಮಣ್ಣು ಕಾರಣ. 1992 ರಲ್ಲಿ ಚಿಕ್ಕ ಸಂಸ್ಥೆಯಾಗಿ ಆರಂಭವಾದ ಶ್ರೀದೇವಿ ಶಿಕ್ಷಣ ಸಂಸ್ಥೆ ಇಂದು ಬೃಹತ್ ವಿದ್ಯಾ ಮಂದಿರವಾಗಿ ಸಾವಿರಾರು ಇಂಜಿನಿಯರ್‌ಗಳು, ವೈದ್ಯರನ್ನು ನಾಡಿಗೆ ನೀಡುತ್ತಿದೆ. ಸಿನಿಮಾದಲ್ಲಿ ಮಾತ್ರ ಹೀರೋಗಳಿರುವುದಿಲ್ಲ, ಪರಿಪೂರ್ಣತೆ ಗಳಿಸಿಕೊಂಡರೆ ಟೀ ಮಾರುವವನು ಸಹ ಹೀರೋ ಆಗಬಹುದು. ಸಾಧಿಸಿ ಮಾದರಿಯಾಗ ಬಹುದು ಎಂದು ಅತ್ಯುತ್ತಮ ಕಲಾ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರಶಸ್ತಿ, 3ನೇ ಸುವರ್ಣ ಚಿತ್ರ ಪ್ರಶಸ್ತಿ ಅತ್ಯುತ್ತಮ ಕಲಾ ನಿರ್ದೇಶಕರು, ಕನ್ನಡ ಚಲನಚಿತ್ರೋದ್ಯಮ, ಚಲನಚಿತ್ರ ನಟ ಮತ್ತು ಕಲಾ ನಿರ್ದೇಶಕರಾದ ಅರುಣ್ ಸಾಗರ್‌ರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ನ.15 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ “ಶ್ರೀಉತ್ಸವ-2024 ವಾರ್ಷಿಕೋತ್ಸವ” ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕಬಡ್ಡಿ ಆಟಗಾರ ಮಾಜಿ ನಾಯಕರು, ಕರ್ನಾಟಕ ಕಬಡ್ಡಿ ತಂಡ ಏಷಿಯಾ ಗೇಮ್ಸ್- 2018ರಲ್ಲಿ ಬೆಳ್ಳಿ ಪದಕ ವಿಜೇತರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಉಷಾರಾಣಿ.ಎನ್.ರವರು ಮಾತನಾಡುತ್ತಾ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಗುರುಗಳ ಪಾತ್ರ ಮುಖ್ಯವಾಗಿದೆ. ಇಂದು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಲ್ಲಾ ಇಲಾಖೆಯ ನೇಮಕಾತಿಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲಾತಿ ಸೌಲಭ್ಯವಿದೆ. ವಿದ್ಯಾರ್ಥಿಗಳು ಪಾಠ ಪ್ರವರ್ಚನಕ್ಕೆ ಕೊಡುವ ಗಮನದಷ್ಟೇ ಕ್ರೀಡೆಗೂ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಚೆಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಪ್ರಜಾಪ್ರಗತಿ ದಿನಪತ್ರಿಕೆ ಸಹ ಸಂಪಾದಕರಾದ ಟಿ.ಎನ್.ಮಧುಕರ್‌ರವರು ಮಾತನಾಡುತ್ತಾ ಮುಂಬರುವ ವರ್ಷಗಳಲ್ಲಿ ಭಾರತ ಚೆಸ್ ಆಟದಲ್ಲಿ ಅದ್ವಿತೀಯ ಸಾಧನೆ ಮಾಡುವ ದಿನಗಳು ದೂರವಿಲ್ಲ. 2022 ರಲ್ಲಿ ಭಾರತ ಚೆಸ್ ಒಲಂಪಿಯಾಡ್ ಏರ್ಪಡಿಸಿದ ನಂತರ ಚೆಸ್ ವಲಯದಲ್ಲಿ ಭರವಸೆಯ ಆಟಗಾರರು ಹುಟ್ಟಿಕೊಂಡಿದ್ದಾರೆ. ಕರ್ನಾಟಕದ ಚೆಸ್ ಆಟಗಾರರು ಕೀರ್ತಿ ಪಾತಕೆ ಬೆಳಗುವ ಸಾಧ್ಯತೆವಿದೆ ಎಂದರು.
ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್.ಪಾಟೀಲ್‌ರವರು ಮಾತನಾಡುತ್ತಾ 5 ಟ್ರಿಲಿಯನ್ ಆರ್ಥಿಕ ಗುರಿ ಸಾಧನೆಯಲ್ಲಿ ಯುವಕರ ಪಾತ್ರ ಬಹಳವಾಗಿದೆ. ಭಾರತದ ಕೆಲವೇ ವರ್ಷಗಳಲ್ಲಿ ಜಗತ್ತಿನ ಮೂರನೇ ಆರ್ಥಿಕ ಶಕ್ತಿಶಾಲಿ ರಾಷ್ಟçವಾಗಿ ಹೊರಹೊಮ್ಮಲಿದೆ. 5 ಟ್ರಿಲಿಯನ್ ಆರ್ಥಿಕ ಗುರಿ ಸಾಧನೆಯಲ್ಲಿ ಇಂಜಿನಿಯರಿAಗ್ ಕ್ಷೇತ್ರದ ಪಾಲು ಶೇಕಡ 30ರಷ್ಟು ಇದೆ. ಎಂದರೆ ಈ ವಲಯದಲ್ಲಿ ಎಷ್ಟು ಉದ್ಯೋಗಾವಕಾಶಗಳು ದೊರಲಿಯಲಿದೆ ಎಂಬುದನ್ನು ಅರಿಯಬಹುದಾಗಿದೆ ಬೆಂಗಳೂರಿನ ನಂತರ ತುಮಕೂರು ಸಹ ನವೋದ್ಯವಗಳ ತವರೂವಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಕ್ರೀಡೆಗೇ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‌ರವರು ಮಾತನಾಡುತ್ತಾ ಕಾಲೇಜಿನ ಅಂಗಳದಲ್ಲಿ ಹಬ್ಬದ ವಾತಾವರಣವಿದೆ ಇಲ್ಲಿನ ವಿದ್ಯಾರ್ಥಿಗಳಿಗೆಲ್ಲ ಉತ್ತಮ ಭವಿಷ್ಯವಿದೆ. ಪಾಠಕ್ಕೆ ಗಮನಕೊಡುವಷ್ಟೇ ಮಹತ್ವವನ್ನು ಕ್ರೀಡೆಗೂ ಕೊಡಿ ಎಂದು ಅರ್ಥಪೂರ್ಣವಾಗಿ ವಿವರಿಸಿದರು. ಶ್ರೀದೇವಿ ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ.ರಮಣ್ ಹುಲಿನಾಯ್ಕರ್‌ರವರು ಮಾತನಾಡುತ್ತಾ ಯಾವುದೇ ಕ್ಷೇತ್ರದಲ್ಲಿ ಪರಿಪೂರ್ಣತೆ ಗಳಿಸಿಕೊಂಡರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.
ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್‌ರವರು ವಾರ್ಷಿಕ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿಯಾದ ಅಂಬಿಕಾ ಎಂ ಹುಲಿನಾಯ್ಕರ್, ಶ್ರೀದೇವಿ ಆಸ್ಪತ್ರೆಯ ನೇತ್ರತಜ್ಞರಾದ ಡಾ.ಲಾವಣ್ಯ, ಶ್ರೀಉತ್ಸವದ ಸಂಯೋಜಕರಾದ ಡಾ.ಕಿರಣ್ ಜೆ.ಎಂ. ಹಾಗೂ ಪ್ರೊ.ಬಿ.ಎನ್.ಪ್ರತಾಪ್ ಭಾಗವಹಿಸಿದ್ದರು.