ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಗಳಿಸುತ್ತಿರುವ ತುಮಕೂರು

ಬೆಂಗಳೂರು

    ಕಲ್ಪತರ ನಾಡು ತುಮಕೂರು ಈಗ ಕೈಗಾರಿಕಾ ಬೆಳವಣಿಗೆಯ ಕಾರಣಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಗಳಿಸುತ್ತಿದೆ.

     ತುಮಕೂರು ನಗರ ಅಭಿವೃದ್ಧಿ ಹೊಂದುತ್ತಿದ್ದು, ಉದ್ಯಮಿಗಳಿಂದ ಹೆಚ್ಚಿನ ಹೂಡಿಕೆ ಆಕರ್ಷಿಸುತ್ತಿದೆ. ದಕ್ಷಿಣ ಭಾರತದ ನಗರಗಳಲ್ಲಿ ತುಮಕೂರು ಒಂದು ‘ಕೈಗಾರಿಕಾ ಸ್ಮಾರ್ಟ್ ನಗರ ವೆಂದು ಗುರುತಿಸಲ್ಪಡುತ್ತಿದೆ.

     ತುಮಕೂರು ಜಿಲ್ಲೆ ಕೈಗಾರಿಕಾ ಪ್ರಗತಿಯಲ್ಲಿ ವಸಂತನರಪುರ ಕೈಗಾರಿಕಾ ಪಾರ್ಕ್ ಅತಿ ಹೆಚ್ಚು ಅವಕಾಶಗಳನ್ನು ಪಡೆದಿದೆ. ಬರುವ 2022 ರ ಹೊತ್ತಿಗೆ 2 ಲಕ್ಷ ಉದ್ಯೋಗಾವಕಾಶಗಳು ಜಿಲ್ಲೆಯಲ್ಲಿ ಸೃಷ್ಟಿಯಾಗಲಿದ್ದು, ಅದರಲ್ಲಿ ಸಿಂಹಪಾಲು ವಸಂತನರಸಪುರಕ್ಕೆ ಸಲ್ಲಲಿದೆ.

      ಕೈಗಾರಿಕಾ ಪ್ರದೇಶಾಭಿವೃದ್ಧಿ ಜತೆಗೆ ಜನಸಂಖ್ಯೆಯೂ ಸಹ ಗಣನೀಯವಾಗಿ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ವಸತಿ ಸೌಲಭ್ಯ ಒದಗಿಸುವುದು ಸಹ ಸವಾಲಾಗಿದ್ದು, ಈ ಹಿನ್ನೆಲೆಯಲ್ಲಿ ಕೈಗಾರಿಕಾ ಪ್ರದೇಶದ ಸುತ್ತಮುತ್ತ ರಿಯಲ್ ಎಸ್ಟೇಟ್ ಚಟುವಟಿಕೆ ಸಹ ಗರಿಗೆದರಲಿದೆ.

     “ತುಮಕೂರು ರಿಯಲ್ ಎಸ್ಟೇಟ್ ವ್ಯವಹಾರ ಕುರಿತು ಇತ್ತೀಚೆಗೆ ಫೆಲಿಸಿಟಿ ಅಡೋಬ್ ಸಂಸ್ಥೆ ಸಮೀಕ್ಷೆ ನಡೆಸಿತ್ತು. ಸಂಸ್ಥೆಯ ನಿರ್ದೇಶಕ ಪ್ರೇನಂದ್ ಪ್ರೇಮಚಂದ್ರನ್ ಅವರ ಪ್ರಕಾರ, ರಿಯಲ್ ಎಸ್ಟೇಟ್ ಚಟುವಟಿಕೆ ಮತ್ತಷ್ಟು ಬಿರುಸುಗೊಳ್ಳಲಿದೆ ಎಂದು ಹೇಳುತ್ತಾರೆ.

     ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯ ಭಾಗವಾಗಿ ವಸಂತನಾರಸಪುರ ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ. ಇಲ್ಲಿ ಒಟ್ಟು 50,000 ಕೋಟಿ ಹೂಡಿಕೆಯಾಗುವ ನಿರೀಕ್ಷೆಯಿದೆ.

      ತುಮಕೂರು ಅಭಿವೃದ್ಧಿಗೊಳ್ಳುತ್ತಿರುವ ವೇಗವನ್ನು ಗಮನಿಸಿದ ಸರ್ಕಾರ ಬೆಂಗಳೂರಿನ ನಮ್ಮ ಮೆಟ್ರೋ ರೈಲು ಸಂಫರ್ಕವನ್ನು ತುಮಕೂರಿಗೂ ವಿಸ್ತರಿಸಿ, ಸಾಮೂಹಿಕ ಸಾರಿಗೆ ಸಂಪರ್ಕವನ್ನು ಬಲಗೊಳಿಸಲು ಉದ್ದೇಶಿಸಿದೆ. ಪ್ರಸ್ತುತ, ನಮ್ಮ ಮೆಟ್ರೋ ಸಂಪರ್ಕ ನಾಗಸಂದ್ರ ನಿಲ್ದಾಣದ ಬಳಿ ಕೊನೆಗೊಳ್ಳುತ್ತದೆ (ಕೆನ್ನೆಮೆಟಲ್ ಕಾರ್ಖಾನೆಯ ಬಳಿ) ಮತ್ತು ಎರಡನೆ ಹಂತದಲ್ಲಿ ಬೆಂಗಳೂರಿನ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (ಬಿಐಇಸಿ) ತನಕ ವಿಸ್ತರಣೆಯಾಗಲಿದೆ. ಇದು ಮೂರು ಅಥವಾ ನಾಲ್ಕನೇ ಹಂತದಲ್ಲಿ ತುಮಕೂರು ವರೆಗೆ ವಿಸ್ತರಣೆಗೊಳ್ಳಲಿದೆ.

      ಅಕ್ಕಿ ಗಿರಣಿಗಳು, ಕಾಯಿರ್ ಇಂಡಸ್ಟ್ರೀಸ್, ತೈಲ ಹೊರತೆಗೆಯುವ ಮಿಲ್‍ಗಳು ಇಲ್ಲಿ ತಲೆಎತ್ತಲಿವೆ. ಜಿಲ್ಲೆಯಲ್ಲಿ ಟೆಕ್ಸ್ ಟೈಲ್ ಪಾರ್ಕ್, ಅಪ್ಯಾರಲ್ ಜೋನ್, ರೆಡಿಮೇಡ್ ಗಾರ್ಮೆಂಟ್ಸ್ ಜೋನ್ ಮತ್ತು ಜಿಲ್ಲೆಯ ಕೈಮಗ್ಗ ಜವಳಿ ಉದ್ಯಮಗಳ ಸ್ಥಾಪನೆಗೆ ಪ್ರಸ್ತಾವನೆ ಸಹ ಸಲ್ಲಿಕೆಯಾಗಿದೆ. ಬರುವ ದಿನಗಳಲ್ಲಿ ಜಪಾನೀಸ್ ಪಾರ್ಕ್ ಸ್ಥಾಪನೆಯಾಗಲಿದೆ. ವೋಲ್ವೋ, ಹಿಮಾಲಯನ್ ಡ್ರಗ್ಸ್ ಮತ್ತು ಎಚ್‍ಎಎಲ್‍ನಿಂದ ಲಘು ಹೆಲಿಕಾಪ್ಟರ್ ತಯಾರಿಕೆ ಘಟಕ ಸಹ ನಿರ್ಮಾಣವಾಗಲಿದೆ ಎನ್ನುತ್ತಾರೆ ವಸಂತನರಸಪುರ ಇಂಡಸ್ಟ್ರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್.ಶಿವಶಂಕರ್ ಹೇಳುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap