ತುಮಕೂರು :
ಪ್ರತಿನಿತ್ಯ ಪೊಲೀಸರು ಕಳವು ಮಾಲು ಪತ್ತೆ ಹೆಸರಿನಲ್ಲಿ ಜುವೆಲ್ಲರಿ ಮಾಲೀಕರು ಹಾಗೂ ಗಿರವಿ ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ ನಗರದ ಚಿನ್ನಾಭರಣ ಮಳಿಗೆ, ಗಿರವಿ ಅಂಗಡಿ ಮಾಲೀಕರು ಅಂಗಡಿಗಳನ್ನು ಬಂದ್ ಮಾಡಿ ಬಾರ್‍ಲೇನ್ ರಸ್ತೆಯಲ್ಲಿರುವ ನಗರ ಸಿಪಿಐ ಕಚೇರಿ ಎದುರು ಧರಣಿ ನಡೆಸಿದರು.
ಚಿನ್ನದಂಗಡಿ ಜೆ.ಪಿ. ಜೈನ್ ಅವರು ಈ ವೇಳೆ ಮಾತನಾಡಿ ಸೋಮವಾರ ಮಧ್ಯಾಹ್ನ ಬೆಂಗಳೂರಿನ ಹೆಚ್ ಎಸ್ ಆರ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಏಕಾಏಕಿ ತುಮಕೂರಿನಕೆಲವರು ಜ್ಯುವೆಲರಿ ಅಂಗಡಿಗಳಿಗೆ ಬಂದು ಅಂಗಡಿ ಮಾಲೀಕರನ್ನು ಕಳ್ಳರ ರೀತಿ ಖಾಸಗಿ ವಾಹನದಲ್ಲಿ ಕರೆದೊಯ್ದ ಘಟನೆ ಅತ್ಯಂತ ಅಮಾನವೀಯವಾಗಿದೆ. ಅಂಗಡಿ ಬಾಗಿಲನ್ನು ಹಾಕಲು ಬಿಡದೆ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದು ಸರಿಯೇ. ಹೊರಗಿನ ಪೊಲೀಸನವರು ಜಿಲ್ಲೆಯಲ್ಲಿ ಈರೀತಿ ದರ್ಪದ ರೀತಿ ವರ್ತಿಸುತ್ತಿದ್ದು, ಹೊರಗಿನವರಾಗಲೀ, ಸ್ಥಳೀಯ ಪೊಲೀಸರಾಗಲೀ ತನಿಖೆಗೊಂದು ವಿಧಾನವಿದೆ. ದಶಕಗಳಿಂದ ಮರ್ಯಾದೆಯಿಂದ ವ್ಯಾಪಾರ ಮಾಡುತ್ತಿರುವವರ ಮೇಲೆ ಪೊಲೀಸ ದರ್ಪ ಸಹಿಸಲು ಸಾಧ್ಯವಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿ ಸಚಿವರು, ಶಾಸಕರು ಈ ಬಗ್ಗೆ ಗಮನಹರಿಸಬೇಕು ಎಂದು
ಆಗ್ರಹಿಸಿದರು. .ಇನ್ನು ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪೊಲೀಸರು ಜ್ಯೂವೆಲ್ಲರಿ ಮಾಲೀಕರನ್ನು ಸಮಾಧಾನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪೊಲೀಸರಿಗೆ ಕೀಲಿಕೈ ನೀಡುತ್ತೇವೆ:
ಇನ್ನು ಹೊರ ಜಿಲ್ಲೆಗಳಿಂದ ಬರುವ ಪೊಲೀಸರು ಆರೋಪಿಗಳ ಹೆಸರಿನಲ್ಲಿ ಕೆಲವರನ್ನು ಕರೆತಂದು ಯಾವುದೇ ದಾಖಲೆಗಳು ಇಲ್ಲದೆ ಇದ್ದರೂ ಸಹ ಚಿನ್ನಕ್ಕೆ ಬೇಡಿಕೆ ಇಡುತ್ತಾರೆ ಅವುಗಳನ್ನು ರಿಕವರಿ ಮಾಡಲು ಬಂದಿದ್ದೇವೆ ಎಂದು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾರೆ ಇಂತಹ ಕಿರುಕುಳದ ಮಧ್ಯೆ ನಾವು ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ನಮ್ಮ ಅಂಗಡಿಗಳ ಕೀಲಿಕೈಗಳನ್ನು ಪೆÇಲೀಸರಿಗೆ ನೀಡಲಿದ್ದೇವೆ ಎಂದು ತಮ್ಮ ಅಸಹಾಯಕತೆಯನ್ನು ಚಿನ್ನದ ಅಂಗಡಿ ಮಾಲೀಕರು ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲದೆ ಹೀಗೇಕೆ?
ಇನ್ನು ಪ್ರತಿನಿತ್ಯ ಪೊಲೀಸರು ತನಿಖೆ ಹೆಸರಿನಲ್ಲಿ ಅಂಗಡಿಗಳಿಗೆ ಬಂದು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸುಖಾಸುಮ್ಮನೆ ಚಿನ್ನದ ಅಂಗಡಿ ಮಾಲೀಕರ ಹೆದರಿಸಿ ಬೆದರಿಸಿ ವಸೂಲಿಗೆ ಇಳಿದಿದ್ದಾರೆ ಪ್ರತಿನಿತ್ಯ ಹೊರ ಜಿಲ್ಲೆಗಳಿಂದ ಬರುವ ಪೆÇಲೀಸರು ಸ್ಥಳೀಯ ಪೆÇಲೀಸರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಬಂದು ವ್ಯಾಪಾರಿಗಳಿಗೆ ತೊಂದರೆ ಹಾಗೂ ಕಿರುಕುಳ ನೀಡುತ್ತಿದ್ದಾರೆ ಇನ್ನೂ ಏನಾದರೂ ಕೇಳಲು ಹೋದರೆ ಇಲ್ಲಸಲ್ಲದನ್ನು ಆರೋಪವನ್ನು ಮಾಡಿ ನಮ್ಮ ಮೇಲೆ ಕೇಸ್ ಗಳನ್ನು ಹಾಕುತ್ತೇವೆ ಎಂದು ಹೆದರಿಸಿ ಲಕ್ಷಾಂತರ ಹಣವನ್ನು ವಸೂಲಿ ಮಾಡುತ್ತಾರೆ. ಎಂದು ಚಿನ್ನದ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ