ತುಮಕೂರು:
ಸಹಕಾರಿ ಬ್ಯಾಂಕ್‍ಗಳು ಭಾರತದಲ್ಲಿ ಹುಟ್ಟಿದ್ದೇ ಎಲ್ಲ ವರ್ಗದ ಜನರಿಗೆ ಆರ್ಥಿಕ ಸಹಾಯ ಮಾಡಲು,ಪ್ರತಿ ಮನುಷ್ಯ ಆರ್ಥಿಕ ಸ್ವಾವಲಂಬಿ ಬದುಕು ಸಾಗಿಸಲು ಸಹಕಾರಿ ಬ್ಯಾಂಕ್‍ಗಳು ಸ್ಥಾಪಿಸಲು ಪ್ರಮುಖ ಕಾರಣ,ಬ್ಯಾಂಕಿನ ಪ್ರತಿ ಷೇರುದಾರನು ಅವರ ಅಗತ್ಯತೆಗೆ ತಕ್ಕಂತೆ ಬ್ಯಾಂಕ್‍ನಿಂದ ಸಾಲ ಪಡೆದು ಅವನ ಕಷ್ಟಗಳನ್ನು ತೀರಿಸಿಕೊಳ್ಳಬೇಕು, ಪ್ರತಿ ಜಾಮೀನುದಾರನೂ ಸಹ ಸಾಲ ಪಡೆದವನಷ್ಟೇ ಬಾಧ್ಯತೆ ಹೊಂದಿರುತ್ತಾನೆ, ಸಹಕಾರಿ ಸಂಘಗಳಲ್ಲಿ ಹೆಚ್ಚು ಹೆಚ್ಚು ಹಣದ ವ್ಯವಹಾರ ಮಾಡಿ ಸಹಕಾರಿ ಸಂಘಗಳನ್ನು ಬೆಳೆಸಬೇಕು, ಬ್ಯಾಂಕಿನ ಪ್ರತಿ ಗ್ರಾಹಕನ ಬೆಂಬಲವೇ ಬ್ಯಾಂಕಿನ ಶ್ರೀರಕ್ಷೆ, ಸಂತೃಪ್ತ ಗ್ರಾಹಕನೇ ಬ್ಯಾಂಕಿನ ನಿಜವಾದ ಆಸ್ತಿ, ನಮ್ಮ ಬ್ಯಾಂಕ್ ಗ್ರಾಹಕರಿಗಾಗಿ ಅತ್ಯಾಕರ್ಷಕ ಬಡ್ಡೀದರ ನೀಡುತ್ತಿದೆ, ಇದನ್ನು ಎಲ್ಲ ಗ್ರಾಹಕರು ಮತ್ತು ಷೇರುದಾರರು ಸದುಪಯೋಗಪಡಿಸಿಕೊಂಡು ತಾವೂ ಬೆಳೆಯಬೇಕು ಮತ್ತು ಬ್ಯಾಂಕನ್ನು ಸಹ ಬೆಳೆಸಬೇಕೆಂದು ಬಿ.ಎನ್.ಪುಟ್ಟನರಸರೆಡ್ಡಿ ಹೇಳಿದರು.
ತುಮಕೂರು ನಗರದ ಶ್ರೀರಾಮದೇವಸ್ಥಾನದ ಆವರಣದಲ್ಲಿ ಶ್ರೀ ವಿನಾಯಕ ಸೌಹಾರ್ಧ ಪತ್ತಿನ ಸಹಕಾರಿ ನಿಯಮಿತದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಬ್ಯಾಂಕಿನ ಎಲ್ಲ ನಿರ್ದೇಶಕರು ಬ್ಯಾಂಕಿನ ಷೇರುದಾರರಲ್ಲಿ ಬ್ಯಾಂಕಿನ ಜೊತೆ ನಿಕಟ ಸಂಪರ್ಕ ಹೊಂದಿ ಹೆಚ್ಚು ಹೆಚ್ಚು ವ್ಯವಹಾರ ಮಾಡಿ ಬ್ಯಾಂಕಿನ ಸರ್ವೋತೋಮುಖ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ಎಲ್.ರಾಮಮೋಹನ್, ನಿರ್ದೇಶಕರುಗಳಾದ ಎಂ.ಕೃಷ್ಣಮೂರ್ತಿ, ಟಿ.ಆರ್.ರಮೇಶ್ ಬಾಬು, ಡಾ||ಕೆ.ಎಸ್.ರಾಮಕೃಷ್ಣ, ಡಿ.ಪ್ರಭಾಕರ್, ಜಯರಾಮು, ಎ.ಶ್ರೀನಿವಾಸ್. ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಜಿ.ನರಸಿಂಹಮೂರ್ತಿ ಪ್ರಾರ್ಥಿಸಿ, ಟಿ.ಆರ್.ರಮೇಶ್ ಬಾಬು ಪ್ರಾರ್ಥಿಸಿ, ಹೆಚ್.ನಾಗರಾಜು ನಿರೂಪಿಸಿ, ಡಾ||ಕೆ.ಎಸ್.ರಾಮಕೃಷ್ಣ ವಂದಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ