ತುಮಕೂರು :
ಮಹಾನಗರಪಾಲಿಕೆ ಬಜೆಟ್ ಮಂಡನೆ ಇಂದು ಬೆಳಿಗ್ಗೆ 11ಕ್ಕೆ ಪಾಲಿಕೆ ಸಭಾಂಗಣದಲ್ಲಿ ನಡೆಯಲಿದ್ದು, ಈ ಬಾರಿ ನಗರ ಮೂಲಕಸೌಕರ್ಯ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಹೊಂದಲಾಗಿದೆ.
2021-22ನೇ ಸಾಲಿನ ಆಯವ್ಯಯ ಮಂಡನೆ ಕುರಿತು ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ ಮೇಯರ್ ಬಿ.ಜಿ.ಕೃಷ್ಣಪ್ಪ, ಆಯುಕ್ತೆ ರೇಣುಕಾ ಅವರು ಕಳೆದ ಕೋವಿಡ್ ಸಂದರ್ಭದಲ್ಲೂ ಶೇ.100ರಷ್ಟು ತೆರಿಗೆ ಸಂಗ್ರಹಣೆ ಸಾಧನೆಯನ್ನು ಪಾಲಿಕೆ ಮಾಡಿದ್ದು, ಬಜೆಟ್‍ನಲ್ಲಿ ವಾರ್ಡ್‍ಗಳ ಮೂಲ ಸೌಕರ್ಯ, ಕೋವಿಡ್ ಇರುವುದರಿಂದ ಆರೋಗ್ಯ ಕ್ಷೇತ್ರ, ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕ್ರೀಡಾ, ಸಾಂಸ್ಕøತಿಕ, ಕಲಾ ಚಟುವಟಿಕೆಗೂ ಒತ್ತು ನೀಡಿ ಜನಸ್ನೇಹಿ ಬಜೆಟ್ ಮಂಡಿಸಲಾಗುತ್ತಿದೆ ಎಂದರು.
ಹೆಚ್ಚಿನ ನಿರೀಕ್ಷೆ:
ರಾಜಧಾನಿಗೆ ಉಪನಗರಿಯಾಗುವಂತೆ ವೇಗವಾಗಿ ಬೆಳೆಯುತ್ತಿರುವ ತುಮಕೂರು ನಗರ, ಹೆಚ್ಚುತ್ತಿರುವ ಜನದಟ್ಟಣೆ, ವಸತಿ ಪ್ರದೇಶಗಳಿಗೆ ಅನುಗುಣವಾಗಿ ನಿರೀಕ್ಷಿತ ಅಭಿವೃದ್ಧಿ ಹೊಂದುತ್ತಿಲ್ಲ. ನಗರ ಹೊರವಲಯದ ವಾರ್ಡ್‍ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ