ತುಮಕೂರು :
ವಿಶ್ವ ಹೃದಯ ದಿನದ ಅಂಗವಾಗಿ ಸಿದ್ದಗಂಗಾ ಆಸ್ಪತ್ರೆ ವತಿಯಿಂದ ಪ್ರಜಾ ಪ್ರಗತಿ ಹಾಗೂ ಪ್ರಗತಿ ಟಿವಿ ಸಹಯೋಗದೊಂದಿಗೆ ಮ್ಯಾರಥಾನ್ ಆಯೋಜನೆ ಮಾಡಲಾಗಿದೆ.
ಅಕ್ಟೋಬರ್ 4 ಸೋಮವಾರ ಬೆಳಗ್ಗೆ 6 ಗಂಟೆಗೆ ರನ್ ಫಾರ್ ಯುವರ್ ಹೆಲ್ತ್ 5ಕೆ ಮ್ಯಾರಥಾನ್ ನಡೆಯಲಿದ್ದು, 10 ಜನರಿಗೆ 35,000 ಮೊತ್ತದ ಬಹುಮಾನ ವಿತರಣೆ ಮಾಡಲಾಗುತ್ತದೆ.
ಈ ಮ್ಯಾರಥಾನ್ ಸಿದ್ದಗಂಗಾ ಆಸ್ಪತ್ರೆಯಿಂದ ಆರಂಭವಾಗಿ ಟೌನ್ ಹಾಲ್, ಅಮಾನಿಕೆರೆ ರಸ್ತೆಯಿಂದ ಶಿವಕುಮಾರ ಸ್ವಾಮೀಜಿ ವೃತ್ತ ಪಲುಪಿ ನಂತರ ಸಿದ್ಧಗಂಗಾ ಆಸ್ಪತ್ರೆಯಲ್ಲಿಯೇ ಕೊನೆಯ ಪಾಯಿಂಟ್ ನಿಗದಿಮಾಡಲಾಗಿದೆ. ಅರ್ಜುನ ಪ್ರಶಸ್ತಿ ವಿಜೇತರಾದ ಶ್ರೀಮತಿ ಅಶ್ವಿನಿ ನಾಚಪ್ಪ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ.