ಮಿಡಿಗೇಶಿ:
ಮೇ 2 ರಂದು `ಮಿಡಿಗೇಶಿ ದೊಡ್ಡಕೆರೆಯ ಅಂಗಳ ಉಳ್ಳವರ ಪಾಲು’ ಎಂಬ ತಲೆ ಬರಹದ ಶೀರ್ಷಿಕೆಯಡಿ ಪ್ರಜಾ ಪ್ರಗತಿಯಲ್ಲಿ ಪ್ರಕಟವಾದ ಸುದ್ದಿಗೆ ಸ್ಪಂದಿಸಿದ ತಹಸೀಲ್ದಾರ್ ಡಾ.ವಿಶ್ವನಾಥ್ ಪರಿಶೀಲಿಸಿ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಗ್ರಾಮ ಲೆಕ್ಕಿಗರಿಬ್ಬರಿಗೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಆದೇಶಿಸಿ, ಮೇ 05 ರಂದು ಸ್ಥಳ ಪರಿಶೀಲನೆ ನಡೆದಿತ್ತು. ಕೆಲದಿನಗಳ ಹಿಂದೆಯಷ್ಟೆ ಬೆನಕನಹಳ್ಳಿ ಗ್ರಾಮದ ಗೋವಿಂದರಾಜು ಬಿನ್ ತಿಮ್ಮಯ್ಯ ಒತ್ತುವರಿ ಮಾಡಿಕೊಂಡಿದ್ದರೆ, ಕಳೆದ ಇಪ್ಪತ್ತು ವರ್ಷಗಳಿಂದ ಒತ್ತುವರಿ ಮಾಡಿಕೊಂಡು, ಬೆಳೆ ಬೆಳೆಯುತ್ತಿರುವ ಬೆನಕನಹಳ್ಳಿ ಗ್ರಾಮದವರಾದ ಸಣ್ಣೀರಪ್ಪ ಬಿನ್ ರಾಮಲಿಂಗಪ್ಪ, ವೆಂಕಟಪ್ಪ ಬಿನ್ ಮುತ್ಯಾಲಪ್ಪ, ವಿಜಯ್ ಕುಮಾರ್ ಬಿನ್ ಹನುಮಂತಪ್ಪ, ಮಲ್ಲಿಕಾರ್ಜುನಪ್ಪ ಬಿನ್ ರಾಮಲಿಂಗಪ್ಪರವರಿಗೆ ಒತ್ತುವರಿ ಕುರಿತು ನೋಟಿಸ್ ಜಾರಿ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
