ತುಮಕೂರು : ಪಾಲಿಕೆಗೆ ಒಂದು ತಿಂಗಳಲ್ಲಿ ಹರಿದು ಬಂದ ಹಣವೆಷ್ಟು ಗೊತ್ತಾ….?

ತುಮಕೂರು:

     ಒಂದೇ ತಿಂಗಳಲ್ಲಿ ತುಮಕೂರು ಪಾಲಿಕೆಗೆ ಬರೋಬರಿ 29.34 ಕೋಟಿ ರೂಪಾಯಿ ಟ್ಯಾಕ್ಸ್ ಹರಿದು ಬಂದಿದೆ. ಈ ಮೂಲಕ ಒಂದು ವರ್ಷದ ಅವಧಿಯಲ್ಲಿ ಸಂಗ್ರಹವಾಗುತ್ತಿದ್ದ ತೆರಿಗೆಯಲ್ಲಿ ಅರ್ಧದಷ್ಟು ಒಂದೇ ತಿಂಗಳಲ್ಲಿ ಸಂಗ್ರಹವಾಗದೆ.

    ತುಮಕೂರು ಪಾಲಿಕೆ ಶೇ.5% ರಿಯಾಯಿತಿ ಸೌಲಭ್ಯ ಕೊಟ್ಟ ಪರಿಣಾಮ ಜನರು  ಮುಗಿಬಿದ್ದು ತೆರಿಗೆ ಕಟ್ಟಿದ್ದಾರೆ.  ತುಮಕೂರು ಪಾಲಿಕೆ ಈ ವರ್ಷ ವಾರ್ಷಿಕ 58 ಕೋಟಿ ತೆರಿಗೆಯ ಗುರಿಯನ್ನು ಹೊಂದಿತ್ತು, ಇದರಲ್ಲಿ ಅರ್ಧದಷ್ಟು ತೆರಿಗೆ ಒಂದೇ ತಿಂಗಳಲ್ಲಿ ವಸೂಲಿಯಾಗಿದೆ . ಏಪ್ರಿಲ್ 1ರಿಂದ 30ರವರೆಗೆ ಒಟ್ಟು‌ 29.34ಕೋಟಿ ಸಂಗ್ರಹವಾಗಿರುವುದು ಅಚ್ಚರಿ ಮೂಡಿಸಿದೆ. ಆರ್ಥಿಕ ವರ್ಷದ ಆರಂಭದಲ್ಲೇ  ಉತ್ತಮ ರೀತಿಯಲ್ಲಿ ತೆರಿಗೆ ಸಂಗ್ರಹವಾಗಿದೆ.

    24.81ಕೋಟಿ ಪ್ರಾಪರ್ಟಿ, 4.14 ಕೋಟಿ ವಾಟರ್,  39.21ಲಕ್ಷ ಯುಜಿಡಿ ಟ್ಯಾಕ್ಸ್ ವಸೂಲಿಯಾಗಿದೆ. ಏ. 30ರ ಅಂದರೆ ನಿನ್ನೆ ಒಂದೇ ದಿನ 2.90 ಕೋಟಿ ರೂಪಾಯಿ ತೆರಿಗೆಯನ್ನು ಸಾವರ್ಜನಿಕರು ಪಾವತಿಸಿದ್ದಾರೆ. ತುಮಕೂರು ನಗರದ ಕರ್ನಾಟಕ ಒನ್ ಸೆಂಟರ್, ಪಾಲಿಕೆ ಅಂಗಳದಲ್ಲಿ ತೆರೆದ ಕ್ಯಾಶ್ ಕೌಂಟರ್, ಆನ್ ಲೈನ್ ಮೂಲಕ ತೆರಿಗೆ ಪಾವತಿ ಮಾಡಲಾಗಿದೆ.  ರಿಯಾಯಿತಿ ಸೌಲಭ್ಯವನ್ನು ಮುಂದುವರೆಸುವಂತೆ ತುಮಕೂರು ನಗರವಾಸಿ ತೆರಿಗೆದಾರರು ಒತ್ತಾಯಿಸಿದ್ದಾರೆ. ಶೇ.5ರಷ್ಟು ರಿಯಾಯಿತಿ ಸೌಲಭ್ಯಕ್ಕೆ ಸಾರ್ವಜನಿಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಎಂದ ಪಾಲಿಕೆ ಕಮಿಷನರ್ ಅಶ್ವಿಜಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap