ತುಮಕೂರು :
ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.
ಪ್ರಸಾದ್ (40) ಮೃತ ವ್ಯಕ್ತಿ. ಪ್ರಸಾದ್, ಮದ್ಯಪಾನ ಮಾಡಿ ನಂತರ ಬಾರ್ ಮುಂದೆ ನಿಂತಿದ್ದರು. ಈ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಪರಿಣಾಮ ಪ್ರಸಾದ್ ಕೆಳಗೆ ಬಿದ್ದಿದ್ದರು. ನಂತರ ದುಷ್ಕರ್ಮಿಗಳು ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ ಎನ್ನಲಾಗಿದೆ.
ಸಹಜವಾಗಿ ಪ್ರಸಾದ್ ರಾತ್ರಿ ವೇಳೆ ಮನೆಗೆ ಹೋಗದಿದ್ದಾಗ ದೂರವಾಣಿ ಕರೆ ಮಾಡಿ ಮನೆಗೆ ತಿಳಿಸುತ್ತಿದ್ದರಂತೆ. ಆದರೆ ನಿನ್ನೆ ಎಷ್ಟೇ ಬಾರಿ ಕರೆ ಮಾಡಿದರು ಪತಿ ಫೋನ್ ತೆಗೆಯದಿದ್ದಾಗ ಕುಟುಂಬದವರು ಆರಂತಕಕ್ಕೆ ಒಳಗಾಗಿದ್ದರು. ಬಳಿಕ ಬೆಳಗಿನ ಜಾವ ಪ್ರಸಾದ್ ಹುಡುಕುತ್ತಾ ಹೋದವರಿಗೆ ಗಂಗಸಂದ್ರ ಸಮೀಪದ ರಿಂಗ್ ರಸ್ತೆಯಲ್ಲಿರುವ ಚಿಲೋಟ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಅವರ ಶವ ಕಂಡು ಬಂದಿದೆ. ಕೂಡಲೇ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ತಿಪ್ಪೇಸ್ವಾಮಿ ಭೇಟಿ ಪರಿಶೀಲನೆ ನಡೆಸಿದ್ದು, ಕೊಲೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ