ತುಮಕೂರು:
ಕಳೆದ ಜ.15ರಂದು ಸಿಮೆಂಟ್ ಆಲೋಬ್ಲಾಕ್ ತಲೆ ಮೇಲೆ ಎತ್ತಿಹಾಕಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪಿಗಳಿಬ್ಬರನ್ನು ತುಮಕೂರು ಗ್ರಾಮಾಂತರ ಪೊಲೀಸರು ಸೆರೆಹಿಡಿದಿದ್ದಾರೆ.
ನಗರ ಹೊರವಲಯದ ರಾಜೀವ್‍ಗಾಂಧಿ ನಗರದ ಟೂಡಾ ಲೇಔಟ್‍ನ ವಾಸಿ ಸುನೀಲ್‍ಕುಮಾರ್ ಅಲಿಯಾಸ್ ಪ್ರಸಾದ್ ಎಂಬಾತನನ್ನು ಗಂಗಸಂದ್ರ ರಸ್ತೆ ಅಲಂಕಾರ್ ಚಿಲ್ ಔಟ್ ಬಾರ್ & ರೆಸ್ಟೋರೆಂಟ್ ಮುಂಭಾಗ ಸಿಮೆಂಟ್ ಆಲೋಬ್ಲಾಕ್ ಇಟ್ಟಿಗೆಯನ್ನು ತಲೆಯ ಮೇಲೆ ಹಾಕಿ ಕೊಲೆ ಮಾಡಲಾಗಿತ್ತು.
ಪ್ರಕರಣ ದಾಖಲಿಸಿದ್ದ ತುಮಕೂರು ಗ್ರಾಮಾಂತರ ಪೊಲೀಸರು, ಕೊಲೆಯ ಬೆನ್ನತ್ತಿದ್ದಾಗ ಸುನೀಲ್‍ಕುಮಾರ್ ಹತ್ಯೆಗೆ ಆಕೆಯ ಪತ್ನಿ ನಿರ್ಮಲಾ ಮತ್ತು ಆಕೆಯೊಡನೆ ಅಕ್ರಮ ಸಂಬಂಧ ಹೊಂದಿದ್ದ ಗಂಗಸಂದ್ರ ವಾಸಿ ಮೇಸ್ತ್ರಿ ರಂಗಯ್ಯ ಎಂಬಾತನೇ ಕಾರಣ ಎಂಬುದು ಬಯಲಾಗಿದೆ.
ಜ.18ರಂದು ಇಬ್ಬರನ್ನು ಬಂಧಿಸಿ ವಿಚಾರಣೆ ಪಡಿಸಲಾಗಿ ತಪ್ಪು ಒಪ್ಪಿಕೊಂಡಿದ್ದು, ಅಕ್ರಮ ಸಂಬಂಧದ ಬಗ್ಗೆ ಪದೇ ಪದೇ ಗಂಡ ಗಲಾಟೆ ಮಾಡುತ್ತಿದ್ದು, ಈತ ಬದುಕಿದ್ದರೆ ತೊಂದರೆ ಎಂದು ಇಬ್ಬರು ಸೇರಿ ತೀರ್ಮಾನಿಸಿ ಜ.15ರಂದು ಅರಿಯೂರು ದೇವಾಲಯದ ಬಳಿ ಕೊಲೆಯ ಒಳಸಂಚು ರೂಪಿಸಿ ಆ ದಿನ ರಾತ್ರಿ ಪ್ರಸಾದ್ ಗಂಗಸಂದ್ರ ರಸ್ತೆ ಬಾರ್‍ನಿಂದ ಹೊರಗೆ ಬರುವುದನ್ನೇ ರಂಗಯ್ಯ ಕಾಯುತ್ತಿದ್ದು, ಆತನ ದ್ವಿಚಕ್ರ ವಾಹನ ಸ್ಟಾರ್ಟ್ ಆಗದಂತೆ ಮಾಡಿ, ಆತನು ಗಾಡಿ ಚಾಲೂ ಮಾಡುವ ಪ್ರಯತ್ನದಲ್ಲಿ ಪ್ರಸಾದನನ್ನು ಕೆಳಕ್ಕೆ ನೂಕಿ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಸದರಿ ಆರೋಪಿಗಳನ್ನು ಎಎಸ್ಪಿ ಉದೇಶ್, ಡಿವೈಎಸೊಉ ಹೆಚ್.ಜೆ ತಿಪ್ಪೇಸ್ವಾಮಿ ರವರ ನೇತೃತ್ವದಲ್ಲಿ ಸಿ.ಪಿ.ಐ. ಸಿ.ಹೆಚ್. ರಾಮಕೃಷ್ಣಯ್ಯ, ಪಿ.ಎಸ್.ಐ ಎಂ.ಬಿ ಲಕ್ಷ್ಮಯ್ಯ, ಹಾಗೂ ಸಿಬ್ಬಂದಿಯವರುಗಳಾದ ಉಮೇಶ್, ನಯಾಜ್ ಪಾಷ, ಶಾಂತಕುಮಾರ್, ದೇವರಾಜು, ವೆಂಕಟೇಶಪ್ಪ, ಭೀಮಯ್ಯ, ಶಶಿಕಲಾ, ಜಿಲ್ಲಾ ಪೊಲೀಸ್ ಕಚೆರಿಯ ನರಸಿಂಹರಾಜು, ಚಾಲಕರಾದ ಉಮೇಶ್ ರವರುಗಳ ತಂಡ ಸೆರೆಹಿಡಿದಿದ್ದು, ತ್ವರಿತ ಆರೋಪಿಗಳನ್ನು ಸೆರೆಹಿಡಿದ ಪೊಲೀಸರ ತಂಡದ ಕಾರ್ಯವನ್ನು ಎಸ್ಪಿ ಡಾ.ಕೆ.ವಂಸಿಕೃಷ್ಣ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ