ತುಮಕೂರು : ಪಾಲಿಕೆಯಿಂದ 250.66 ಲಕ್ಷ ಉಳಿತಾಯ ಬಜೆಟ್!

ತುಮಕೂರು :

      2021-22ನೇ ಸಾಲಿನ ತುಮಕೂರು ಮಹಾನಗರಪಾಲಿಕೆ ಆಯವ್ಯಯ ಶುಕ್ತವಾರ ಮಂಡನೆಯಾಗಿದ್ದು, 250.66 ಲಕ್ಷ ಉಳಿತಾಯ ಆಯವ್ಯಯವನ್ನು ತೆರಿಗೆ ಹಣಕಾಸು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್ ಮಂಡಿಸಿದರು.

      ಮೇಯರ್ ಬಿ.ಜಿ.ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆ ಕೌನ್ಸಿಲ್‍ನಲ್ಲಿ ಇ-ಬಜೆಟ್ ಅನ್ನು ಮಂಡಿಸಿದ ಹಣಕಾಸು ಸಮಿತಿ ಅಧ್ಯಕ್ಷರು ಆರಂಭಿಕ ಶಿಲ್ಕು 2091.45 ಲಕ್ಷವನ್ನೊಳಗೊಂಡು ಒಟ್ಟು 229.96 ಕೋಟಿ ಆದಾಯವನ್ನು ಪ್ರಸಕ್ತ ಸಾಲಿಗೆ ನಿರೀಕ್ಷಿಸಲಾಗಿದೆ. ಅಂತೆಯೇ 227.45 ಕೋಟಿ ಅಂದಾಜು ವೆಚ್ಚವನ್ನು ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.

      ಸ್ವಚ್ಛ ಮತ್ತು ಹಸಿರು ತುಮಕೂರು ನಿರ್ಮಾಣ ಸಂಕಲ್ಪ: ನಗರದ ಮೂಲಸೌಕರ್ಯಗಳಾದ ಕುಡಿಯುವ ನೀರು, ಆರೋಗ್ಯ, ಬೀದಿದೀಪ, ಒಳಚರಂಡಿ,ರಸ್ತೆ ಮತ್ತು ಚರಂಡಿ, ಉದ್ಯಾನವನ ಅಭಿವೃದ್ಧಿ ಮಾಡುವ ಮೂಲಕ ಸ್ವಚ್ಛ ಮತ್ತು ಹಸಿರು ತುಮಕೂರು ನಿರ್ಮಾಣಕ್ಕೆ ಆಯವ್ಯಯದಲ್ಲಿ ಆದ್ಯತೆ ನೀಡಲಾಗಿದೆ ಪಾಲಿಕೆ ಆರ್ಥಿಕ ಇತಿ ಮಿತಿಗಳಿಗೆ ಅನುಗುಣವಾಗಿ ಸದಸ್ಯರುಗಳು, ಸಾರ್ವಜನಿಕರು, ಜನಪ್ರತಿನಿಧಿಗಳ ಸಲಹೆಯನ್ನು ಪರಿಗಣಿಸಿ ಈ ಮಂಗಡಪತ್ರವನ್ನು ಮಂಡಿಸಲಾಗಿದೆ. ನಾಗರಿಕರ ಮೇಲೆ ಕರಭಾರದ ಹೊರೆ ವಿಧಿಸಿಲ್ಲ ಎಂದು ಹೇಳಿದರು.

ನಿರೀಕ್ಷಿತ ಆದಾಯಗಳು 

      ಕೈಗಾರಿಕಾ ಆಸ್ತಿಗಳು ಪಾಲಿಗೆ ತೆರಿಗೆ ಜಾಲದ ವ್ಯಾಪ್ತಿಗೆ: ತೆರಿಗೆ ವ್ಯಾಪ್ತಿಗೆ ಒಳಪಟ್ಟಿರದ ಆಸ್ತಿಗಳನ್ನು ಹಾಗೂ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ಆಸ್ತಿಗಳನ್ನು ಖಾತಾ ಆಂದೋಲನದ ಮೂಲಕ ನಗರದ ಶೇ.100ರಷ್ಟು ಆಸ್ತಿಗಳನ್ನು ತೆರಿಗೆ ಜಾಲಕ್ಕೆ ಒಳಪಡಿಸಿ ಆದಾಯ ವೃದ್ಧಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದ ಅಧ್ಯಕ್ಷರು ಪಾಲಿಕೆ ಆಸ್ತಿತೆರಿಗೆಯಿಂದ 32 ಕೋಟಿ, 2 ಕೋಟಿ ದಂಡದ ರೂಪದಲ್ಲಿ ನಿರೀಕ್ಷಿಸಲಾಗಿದೆ. ಆಸ್ತಿ ಹಕ್ಕು ಬದಲಾವಣೆÉ, ನಕಲಿನಿಂದ 1 ಕೋಟಿ 5ಲಕ್ಷ, ಘನತ್ಯಾಜ್ಯ ಉಪಕರದಿಂದ 2 ಕೋಟಿ, ಜಾಹೀರಾತು ತೆರಿಗೆ ಮೂಲಕ 15 ಲಕ್ಷ, ಸ್ಟಾಂಪ್ ಡ್ಯೂಟಿ ಮೂಲಕ 50 ಲಕ್ಷ, ಉದ್ದಿಮೆ ಪರವಾನಗಿ ಶುಲ್ಕದಿಂದ 1.5 ಕೋಟಿ, ಕುಡಿಯುವ ನೀರು ಶುಲ್ಕದಿಂದ 12 ಕೋಟಿ. ಒಳಚರಂಡಿ ಸಂಪರ್ಕ, ಅನಧಿಕೃತ ಸಂಪರ್ಕ ಸಂಕ್ರಮದಿಂದ ಒಟ್ಟು 2 ಕೋಟಿ 20 ಲಕ್ಷ, ರಸ್ತೆ ಕಡಿತ ಶುಲ್ಕದಿಂದ 1 ಕೋಟಿ, ಬೀದಿ ಬದಿ ವ್ಯಾಪಾರದ ಸ್ಥಳದಲ್ಲಿ ಸ್ವಚ್ಛತೆಗಾಗಿ ಕನಿಷ್ಠ ಶುಲ್ಕ ನಿಗದಿಪಡಿಸಿ 6 ಲಕ್ಷ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಹೀಗೆ ಪಾಲಿಕೆಯ ಸ್ವಂತ ಸಂಪನ್ಮೂಲಗಳಿಂದ 6049.65 ಲಕ್ಷಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.

      ಸರಕಾರದಿಂದ 14,855 ಕೋಟಿ ನಿರೀಕ್ಷೆ; ಅಂತೆಯೇ ಸರಕಾರದ ವಿವಿಧ ಅನುದಾನಗಳಿಂದ 14,855 ಕ್ಷ ನಿರೀಕ್ಷಿಸಲಾಗಿದ್ದು, ಪ್ರಮುಖವಾಗಿ ಎಸ್‍ಎಫ್‍ಸಿ ವೇತನ ಅನುದಾನ 18 ಕೋಟಿ, ಎಸ್‍ಎಫ್‍ಸಿ ಮುಕ್ತನಿಧಿಯಿಂದ 5 ಕೋಟಿ, ವಿದ್ಯುತ್ ಶುಲ್ಕ ಅನುದಾನದಿಂದ 30 ಕೋಟಿ, ವೆಚ್ಚ ಮರುಭರಿಸುವಿಕೆ ಅನುದಾನ 2.10 ಕೋಟಿ, ಜನಗಣತಿ ಅನುದಾನ 50 ಲಕ್ಷ, ವಿಶೇಷ ಅನುದಾನ 10 ಕೋಟಿ, ಸ್ವಚ್ಛಭಾರತ್ ಅನುದಾನ 8.40 ಕೋಟಿ, ಅಮೃತ್ ಯೋಜನೆಯಡಿ 3 ಕೋಟಿ, ಡೇನಲ್ಮ್ ಯೀಜನೆಯಡಿ 50ಲಕ್ಷ, 15ನೇ ಹಣಕಾಸು ಅನುದಾನ 16 ಕೋಟಿ, ಶಾಸಕರು, ಸಂಸದರ ಪ್ರದೇಶಾಭಿವೃದ್ಧಿ ಅನುದಾನ 25ಲಕ್ಷ, ಎಂಜಿ.ಎನ್‍ವೈ ಯೋಜನೆಯಡಿ 125 ಕೋಟಿ, ಬರಪರಿಹಾರದಡಿ 50 ಲಕ್ಷ, ಘನತ್ಯಾಜ್ಯವಿಲೇವಾರಿ ವಿಶೇಷ ಅನುದಾನ 50 ಲಕ್ಷ ಹಾಗೂ ಪೌರಕಾರ್ಮಿಕರ 52 ಮನೆಗಳ ನಿರ್ಮಾಣಕ್ಕಾಗಿ ಹೆಚ್ಚುವರಿ 150 ಕೋಟಿ ಅನುದಾನ ನಿರೀಕ್ಷಿಸಲಾಗಿದೆ

ನಿರೀಕ್ಷಿತ ವೆಚ್ಚಗಳು :

      ಇನ್ನೂ ಬಜೆಟ್‍ನಲ್ಲಿ ಸಿಬ್ಬಂದಿ ವೇತನ ಭತ್ಯೆ ಪಾವತಿಗಾಗಿ 18ಕೋಟಿ, ಕಚೇರಿ, ವಾಹನ ವೆಚ್ಚಗಳಿಗಾಗಿ 2.5 ಕೋಟಿ, ಹೊರಗುತ್ತಿಗೆ ಸೇವೆಗಾಗಿ 80 ಲಕ್ಷ, ಇ-ಕಚೇರಿ ಸೌಲಭ್ಯಕ್ಕಾಗಿ 50 ಲಕ್ಷ ಮನರಂಜನೆ ಸಾಂಸ್ಕøತಿಕ ಕಾರ್ಯಕ್ರಮಕ್ಕಾಗಿ 20.50 ಲಕ್ಷ, ರಾಷ್ಟ್ರೀಯ ಹಬ್ಬ ಸಾಂಸ್ಕøತಿಕ ಕಾರ್ಯಕ್ರಮ ವಂತಿಕೆಗಾಗಿ 15 ಲಕ್ಷ, ಪ್ರಕೃತಿ ವಿಕೋಪ ಸಹಾಯಧನಕ್ಕಾಗಿ 50 ಲಕ್ಷ, ವಿಪತ್ತು ನಿರ್ವಹಣಾ ತಂಡಕ್ಕಾಗಿ 10ಲಕ್ಷ ವಾರ್ಡ್ ಕಮಿಟಿ ರಚನೆಗಾಗಿ 10 ಲಕ್ಷ, ಸದಸ್ಯರ ಗೌರವಧನ, ಸಭೆ ವೆಚ್ಚಕ್ಕಾಗಿ 65 ಲಕ್ಷ ಸದಸ್ಯರ ಅಧ್ಯಯನ ಪ್ರವಾಸಕ್ಕಾಗಿ 20 ಲಕ್ಷ, ವಾಣಿಜ್ಯ ಸಂಕೀರ್ಣಗಳ ನಿರ್ವಹಣೆಗಾಗಿ 20 ಲಕ್ಷ ರಸ್ತೆ ಚರಂಡಿ ನಿರ್ಮಾಣಕ್ಕಾಗಿ 42.16 ಕೋಟಿ, ಮೇಯರ್, ಉಪಮೇಯರ್ ವಿವೇಚನ ಅನುದಾನ 1ಕೋಟಿ 50 ಲಕ್ಷ ತೆಗೆದಿರಿಸಿದ್ದು, ಬೀದಿದೀಪ ವ್ಯವಸ್ಥೆಗಾಗಿ 21.87 ಕೋಟಿ, ಸಾರ್ವಜನಿಕರ ಆರೋಗ್ಯ ಜಾಗೃತಿ, ಅನಾಥ ಶವಸಂಸ್ಕಾರಕ್ಕಾಗಿ 1ಕೋಟಿ 34 ಲಕ್ಷ, ಪಾಲಿಕೆ ಪೌರಕಾರ್ಮಿಕರು, ಪತ್ರಕರ್ತರ ಆರೋಗ್ಯ ಕೇಂದ್ರ ಸ್ಥಾಪನೆಗೆ 15 ಲಕ್ಷ, ವೈಜ್ಞಾನಿಕ ಕಸ ವಿಲೇವಾರಿಗಾಗಿ 39.35 ಕೋಟಿ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ 34.76 ಕೋಟಿ. ಉದ್ಯಾನವನಗಳ ಅಭಿವೃದ್ಧಿಗೆ 1 ಕೋಟಿ, ಮೂಲಸೌಕರ್ಯ ನಿರ್ಮಾಣ, ಪಾಲಿಕೆ ಹೊಸ ಆಡಳಿತ ಕಚೇರಿಗಾಗಿ 9 ಕೋಟಿ ಮೀಸಲಿರಿಸಲಾಗಿದೆ.

      ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಡಿ ಶೇ.24.10 ಅನುದಾನದಡಿ ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ದಿಗೆ 847.91 ಲಕ್ಷ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮಕ್ಕೆ 34.05 ಲಕ್ಷ,ಸವಿತ ಸಮಾಜ, ಮಡಿವಾಳರು, ಟ್ಯಾಕ್ಸಿ-ಕ್ಯಾಬ್ ಚಾಲಕರು, ಇತರೆ ಕುಶಲಕರ್ಮಿಗಳ ಅನುಕೂಲಕ್ಕೆ 20ಲಕ್ಷ ದಿವ್ಯಾಂಗ ಚೇತನರಿಗೆ 58.69 ಲಕ್ಷ, ಮಹಿಳಾ ಸಬಲೀಕರಣಕ್ಕೆ 10 ಲಕ್ಷ.., ಹೀಗೆ 227.45 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಉಪಮೇಯರ್ ನಾಜೀಮಾಬಿ, ಆಯುಕ್ತೆ ರೇಣುಕಾ ಹಾಜರಿದ್ದರು.

ಮೇಯರ್ ವಿವೇಚನಾ ನಿಧಿ ಸದ್ಬಳಕೆ ಚರ್ಚೆ :

      ಬಜೆಟ್ ಮಂಡನೆ ಬಳಿಕ ನಡೆದ ಚರ್ಚೆಯಲ್ಲಿ ಮೇಯರ್ ಹಾಗೂ ಉಪಮೇಯರ್ ವಿವೇಚನಾ ಅನುದಾನ 1.50 ಕೋಟಿ ಹೆಸರಿಗಷ್ಟೇ ಪ್ರತೀ ವರ್ಷ ಬಜೆಟ್‍ನಲ್ಲಿ ಮೀಸಲಿರಿಸಲಾಗುತ್ತದೆ. ಆ ಅನುದಾನದಡಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೆಸರಿಗೆ ಮಾತ್ರ ಅನುದಾನ ಘೋಷಿಸಲಾಗುತ್ತಿದೆಯೇ ಎಂದು ಸದಸ್ಯ ಮಲ್ಲಿಕಾರ್ಜುನ್ ಎತ್ತಿದ ಪ್ರಶ್ನೆಗೆ, ಮಾಜಿ ಮೇಯರ್‍ಗಳಾದ ಲಲಿತಾ ರವೀಶ್, ಫರೀದಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್‍ಅಹಮದ್, ಧರಣೇಂದ್ರ, ಮನು ಮತ್ತಿತರರು ಧನಿಗೂಡಿಸಿ ಹಳೇ ಕಾಮಗಾರಿಗೆ ಇನ್ನೂ ಬಿಲ್ ಕೊಟ್ಟಿಲ್ಲ. ಕ್ರಿಯಾ ಯೋಜನೆಯಡಿ ವಿವೇಚನಾ ನಿಧಿಯ ಯೋಜನೆ ಕಾಮಗಾರಿ ಸೇರಿಸಬೇಕು ಎಂದು ಒತ್ತಾಯಿಸಿದರು. ಮೇಯರ್ ಕೃಷ್ಣಪ್ಪ ಅವರು ಬಿಲ್ ಏಕೆ ತಡೆ ಹಿಡಿಯಲಾಗಿದೆ. ಹಳೆ ಬಾಕಿ ಪಾವತಿಸಿ ಎಂದು ಆಯುಕ್ತರಿಗೆ ಸೂಚಿಸಿ ಈ ಬಾರಿ ವಿವೇಚನಾ ನಿಧಿ ಸದ್ಬಳಕೆಯಾಗಲಿದೆ ಎಂದರು. ಆಯುಕ್ತರು ಸಹ ಏಪ್ರಿಲ್-ಮೇ ಅಂತ್ಯದೊಳಗೆ ಹಳೆ ಬಿಲ್ ಬಾಕಿ ಪಾವತಿಸುವುದಾಗಿ ತಿಳಿಸಿದರು. ಎಸ್ಸಿ-ಎಸ್ಟಿ ಅನುದಾನ ಸಮರ್ಪಕ ವಿನಿಯೋಗವಾಗದಿರುವ ಕುರಿತು ಸದಸ್ಯ ಶ್ರೀನಿವಾಸ್, ನಯಾಜ್ ಮುತ್ತಿತರರು ಪ್ರಸ್ತಾಪಿಸಿದರು ಕೆಲಸ ಮಾಡದ ಅಧಿಕಾರಿಗಳನ್ನು ಬದಲಾಯಿಸಿ ಎಂದರು. ಮೇಯರ್ ಅವರು ಈ ಬಾರಿ ಅನುದಾನ ಸಮರ್ಪಕ ಬಳಕೆಗೆ ಒತ್ತುಕೊಡುವ ಜೊತೆಗೆ ಅಧಿಕಾರಿಗಳು ಕೆಲಸ ಮಾಡಲೇಬೇಕು. ಮಾಡದಿದ್ದರೆ ಕೆಲಸ ಮಾಡಿಸಲಾಗುತ್ತದೆ ಎಂದು ಹೇಳಿ ಸದಸ್ಯರ ಚರ್ಚೆಗೆ ತೆರೆ ಎಳೆದರು. ವಿಪತ್ತು ನಿರ್ವಹಣಾ ನಿಧಿ, ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕಿತ್ತು ಎಂದು ಸದಸ್ಯ ಲಕ್ಷ್ಮೀನರಸಿಂಹರಾಜು ಅಭಿಪ್ರಾಯಪಟ್ಟರು.

ಬಜೆಟ್ ಪ್ರಮುಖಾಂಶಗಳು

 * ಪಾಲಿಕೆಯಾದ ಬಳಿಕ ಹಣಕಾಸು ಸ್ಥಾಯಿ ಸಮಿತಿ ಮಹಿಳಾ ಅಧ್ಯಕ್ಷೆಯಿಂದ ಪ್ರಥಮ ಬಾರಿಬಜೆಟ್ ಮಂಡನೆ.
* ಪಾಲಿಕೆ ವ್ಯಾಪ್ತಿಯಲ್ಲಿ ಮಾದರಿ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲು ಆಯಾ ವಾರ್ಡ್ ವ್ಯಾಪ್ತಿಯ ನಾಗರಿಕ ಸಮಿತಿ, ಶಾಲಾ, ಕಾಲೇಜು ಸಂಘಸಂಸ್ಥೆಗಳಿಗೆ ಅನುದಾನ ಒದಗಿಸುವ ಹೊಸ ಯೋಜನೆ.
* ಸದಸ್ಯರುಗಳ ಜ್ಞಾನಾರ್ಜನೆಗಾಗಿ ದೇಶದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಯನ ಪ್ರವಾಸಕ್ಕಾಗಿ 20 ಲಕ್ಷ ಮೀಸಲು.
* ಕಳೆದ ವರ್ಷದಂತೆ ಈ ವರ್ಷವೂ ವಾರ್ಡ್ ಕಮಿಟಿ ರಚನೆಗಾಗಿ 10 ಲಕ್ಷ ಮೀಸಲು. ಕಮಿಟಿಗಳು ಮಾತ್ರ ಇನ್ನೂ ರಚನೆಯಾಗಿಲ್ಲ.
*ಸಂಗೊಳ್ಳಿರಾಯಣ್ಣ ಅಛತ್ರ ಅಭಿವೃದ್ಧಿಗೆ 40 ಲಕ್ಷ ಮೀಸಲು.
* ಎಸ್ಸಿ-ಎಸ್ಟಿ, ಹಿಂದುಳಿದ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನಿಗದಿತ ಅನುದಾನ ಮೀಸಲಿಡುವ ಜೊತೆಗೆ ಸವಿತಾ ಸಮಾಜ, ಮಡಿವಾಳರು ಟ್ಯಾಕ್ಸಿ/ಕ್ಯಾಬ್ ಚಾಲಕರು ಹಾಗೂ ಇತರ ಕುಶಲಕಾರ್ಮಿಕರ ಅನುಕೂಲಕ್ಕೆ. 20 ಲಕ್ಷ ಮೀಸಲು.
* ಬಯೋಡಿಸಲ್ ಘಟಕ ಸಥಾಪನೆ ಮಾಡಲು 1ಕೋಟಿ, ದೇವಸ್ಥಾನದಲ್ಲಿ ಸಿಗುವ ತ್ಯಾಜ್ಯ ಹೂವ್ವುಗಳಿಂದ ಪ್ರಾಯೋಗಿಕ ಅಗರಬತ್ತಿ ತಯಾರು ಘಟಕ ಸ್ಥಾಪನೆಗೆ 5 ಲಕ್ಷ ಮೀಸಲು.
*ಬೀದಿ ಬದಿ ವ್ಯಾಪಾರಿಗಳು, ತಳ್ಳುವು ಗಾಡಿ ಕ್ಯಾಂಟೀನ್ ವ್ಯಾಪರಸ್ಥರಿಂದ ಸ್ಥಳ ಸ್ವಚ್ಛತೆಗಾಗಿ ಪಾಲಿಕೆ ಕನಿಷ್ಠ ಶುಲ್ಕ ಸಂಗ್ರಹಿಸÀಲು ಒಪ್ಪಿಗೆ.

ಇದೊಂದು ನಾಮಕಾವಸ್ಥೆ ಬಜೆಟ್. ಹಿಂದಿನ ಬಜೆಟ್‍ನ ಯಥಾರೂಪ. ಸದ್ಯದ ತುಮಕೂರು ಮಹಾನಗರಪಾಲಿಕೆ ತೆರಿಗೆ ದರ ರಾಜ್ಯದ ಇತರೆಡೆಗೆ ಹೋಲಿಸಿದರೆ ಹೆಚ್ಚಿನದಾಗಿ ಈಬಗ್ಗೆ ಸಾಮಾನ್ಯಸಭೆಗಳಲ್ಲಿ ಚರ್ಚಿಸಿ ಇಳಿಕೆ ಮಾಡುವಂತೆ ಒತ್ತಾಯಿಸಿದರೂ ಕಡಿಮೆ ಮಾಡಿಲ್ಲ.

-ಕುಮಾರ್, ವಿಪಕ್ಷ ಕಾಂಗ್ರೆಸ್ ಸದಸ್ಯರು.

ತುಮಕೂರು ನಗರದಲ್ಲಿಸ್ಮಾರ್ಟ್‍ಸಿಟಿ, ಪಾಲಿಕೆಯಿಂದ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು. ಕಾಂಕ್ರೀಟ್ ನಗರವಾಗಿ ಮಾತ್ರ ಬಿಡದೆ ಹಸಿರು ಹೆಚ್ಚಿಸಲು ಆಯ್ದ ಸ್ಥಳಗಳಲ್ಲಿ ಗಿಡಗಳನ್ನು ನೆಡಲು ಹೆಚ್ಚು ಒತ್ತುಕೊಡಬೇಕು. ಎಲ್ಲಾ ಸದಸ್ಯರು ಮೇಯರ್ ಆಗಿ, ಎಲ್ಲಾ ಅಧಿಕಾರಿಗಳು ಆಯುಕ್ತರಾಗಿ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಿ. ಅನಧಿಕೃತ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ.

-ಜಿ.ಎಸ್.ಬಸವರಾಜು, ಸಂಸದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link