ತುಮಕೂರು:
ಲಾಕ್ ಡೌನ್ ಪರಿಣಾಮದಿಂದಾಗಿ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರ ತೀವ್ರ ನಷ್ಟ ಅನುಭವಿಸುತ್ತಿದೆ. ತರಕಾರಿ, ಸೊಪ್ಪು, ಹಣ್ಣು ಅಲ್ಲಲ್ಲೆ ಕೊಳೆತು ಹೋಗುತ್ತಿದೆ. ಬೆಳೆಗಾರ ಅಸಹಾಯಕನಾಗುತ್ತಿದ್ದಾನೆ. ತನ್ನ ಕಣ್ಣ ಮುಂದೆಯೇ ಬೆಳೆ ಹಾಳಾಗುತ್ತಿರುವುದನ್ನು ನೋಡಿ ರೈತ ಮಮ್ಮಲ ಮರುಗುತ್ತಿದ್ದಾನೆ.
ಟೊಮ್ಯಾಟೋ, ಬದನೆ, ಸೊಪ್ಪು, ಹುರುಳಿ, ಮೂಲಂಗಿ, ಕೋಸು ಮೊದಲಾದ ತರಕಾರಿ, ಕಲ್ಲಂಗಡಿ, ಕರ್ಬೂಜ, ಪಪ್ಪಾಯಿ, ಬಾಳೆ, ಇತ್ಯಾದಿ ತೋಟಗಾರಿಕಾ ಬೆಳೆಗಳು ಹೊಲ-ತೋಟಗಳಲ್ಲಿ ಕಮರಿ ಹೋಗುತ್ತಿವೆ. ರಾಶಿ ರಾಶಿ ಹೊ ಮಣ್ಣು ಪಾಲಾಗಿದೆ. ಬಂಪರ್ ಬೆಳೆ ಇದ್ದೂ ಏನೂ ಮಾಡಲಾಗದ ಸ್ಥಿತಿ ಇದೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದ್ದು ರೈತ ಯಾತನೆ ಪಡುತ್ತಿದ್ದಾನೆ. ಬೇಸಿಗೆ ಕಾಲದಲ್ಲಿ ಬೆಳೆ ತೆಗೆಯುವುದು ಅಷ್ಟು ಸುಲಭದ ಮಾತಲ್ಲ. ಪದೇ ಪದೆ ಕೈ ಕೊಡುವ ವಿದ್ಯುತ್, ನೀರಿನ ಕೊರತೆ, ಸೊಕ್ತ ಸಮಯಕ್ಕೆ ಕೊಲಿ ಆಳುಗಳು ಸಿಗದೆ ಪರದಾಟ, ಈಎಲ್ಲ ಸಮಸೈಗಳನ್ನು ಸಹಿಸಿಕೊಂಡೇ ಬೆಳೆ ಬೆಳೆಯುತ್ತಾನೆ. ಇದಕ್ಕಾಗಿ ಸಾಕಷ್ಟು ಸಾಲ ಮಾಡಿಕೊಳ್ಳುವುದು ಅನಿವಾರ್ಯ.
ಬ್ಯಾಂಕ್ ಸಾಲಗಳು ಈಗ ಅಷ್ಟು ಸುಲಭವಲ್ಲ. ಅಲ್ಲಿ ಇಲ್ಲಿ ಕೈ ಸಾಲ ಮಾಡಿಕೊಂಡು ಬೆಳೆ ತೆಗೆಯುವವರೂ ಇದ್ದಾರೆ. ಸಾಲ ಮಾಡದೆ ಹಣ್ಣು ತರಕಾರಿ ಬೆಳೆದು ವಹಿವಾಟು ಮಾಡುವವರೂ ಇದ್ದಾರೆ. ಆದರೆ ಈಗ ಹೆಚ್ಚು ಬಾಧಿತರಾಗುವವರು ಸಾಲ ಮಾಡಿಕೊಂಡವರು. ಲಕ್ಷಗಟ್ಟಲೆ ಃರ್ಚು ಮಾಡಿ ಜಮೀನು ಹದ ಮಾಡುವುದು, ಉತ್ತಮ ತಳಿಯ ಬೀಜ ತರುವುದು, ಅದನ್ನು ಬಿತ್ತಿ ನೀರು ಹಾಯಿಸುವುದು, ಕಳೆ ಬರದಂತೆ ನೋಡಿಕೊಳ್ಳುವುದು, ಮೊಳಕೆಯೊಡೆದು ಕೆಲಕಾಲದವರೆಗೆ ಹಕ್ಕಿ ಪಕ್ಷಿಗಳಿಂದ ರಕ್ಷಿಸುವುದು, ಕೀಟನಾಶಕ ಸಿಂಪಡಣೆ, ಇವೆಲ್ಲವೂ ಸಾಕಷ್ಟು ಖರ್ಚಿನ ಬಾಬ್ತುಗಳೆ. ಇಷ್ಟೆಲ್ಲ ಖರ್ಚು ಮಾಡಿದರೂ ಒಂದು ಸಮಾಧಾನವಂತೂ ಇದ್ದೆ ಇರುತ್ತೆ. ಮುಂದೆ ಲಾಭ ಬರುವುದಲ್ಲ ಎಂದು. ಆದರೆಗೀಗ ಲಾಭವಿರಲಿ, ಹಾಕಿದ ಬಂಡವಾಳವೇ ಸಿಗುತ್ತಿಲ್ಲ. ಹೀಗಾದರೆ ಸಾಲ ತೀರಿಸುವುದು ಹೇಗೆ..? ಮನೆಯ ಇತರೆ ಖರ್ಚುಗಳನ್ನು ನಿಭಾಯಿಸುವುದು ಹೇಗೆ ? ಈ ಸಂಕಷ್ಟಗಳಲ್ಲಿ ರೈತರು ತೊಳಲಾಡುತ್ತಿದಾರೆ.
ಹಣ್ಣು ತರಕಾರಿಯನ್ನು ಹೊರಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಎನೇ ಹೇಳಿದರೂ ಜನರಲ್ಲಿ ಪೊಲೀಸರ ಭಯ ಇದ್ದೆ ಇದೆ. ಹೀಗಾಗಿ ಹೊಲಗಳಿಂದ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆ ಕಷ್ಟಪಟ್ಟು ಮಾರಾಟಕ್ಕೆ ತೆಗೆದುಕೊಂಡು ಹೋದರೂ ಅಲ್ಲಿ ಅವಕಾಶವಾಗದೆ ಅಥವಾ ಅತ್ಯಂತ ಕಡಿಮೆ ಬೆಲೆಗೆ ಕೊಡಲು ಮನಸ್ಸಾಗದೆ ರಸ್ತೆ ಬದಿಯಲ್ಲೆ ಸುರಿದು ಬರುತ್ತಿರುವ ದೃಶ್ಯಗಳನ್ನು ನೋಡುತ್ತಲೇ ಇದ್ದೇವೆ. ಟನ್ ಗಟ್ಟಲೆ ಟೊಮ್ಯಾಟೊ, ಕಲ್ಲಂಗಡಿ ನಾಶಪಡಿಸಿರುವ ಉದಾಹರಣೆಗಳು ಬಹಳಷ್ಟಿವೆ. ಇನ್ನು ಕೆಲವರು ಗಿಡಗಳಲ್ಲೆ ಕೊಳೆಯಲು ಬಿಟ್ಟಿದ್ದಾರೆ. ಇದೆಲ್ಲವೊ ಈಗಾಗಲೇ ಸಂಕಷ್ಟದಲ್ಲಿದ್ದ ರೈತನ ಮೇಲೆ ಮತ್ತಷ್ಟು ಬರೆ ಎಳೆದಂತಾಗಿದೆ.
ರೈತರ ಸಂಕಷ್ಟಕ್ಕೆ ಸ್ಪಂದಿಸುವ ಜನರೂ ನಮ್ಮಲ್ಲಿದ್ದಾರೆ. ಈಗಾಗಲೇ ಕೆಲವು ಭಾಗಗಳಲ್ಲಿ ರೈತರ ಜಮೀನುಗಳಿಗೆ ತೆರಳಿ ತರಕಾರಿ ಹಣ್ಣು ಖರೀದಿಸಿರುವ ಸಂಗತಿಗಳು ಬೆಳಕಿಗೆ ಬರುತ್ತಿವೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುತ್ತಿಲ್ಲ, ಹೇಗೆ ಯಾರನ್ನು ಸಂಪರ್ಕಿಸಬೇಕು ಎಂಬ ಅರಿವು ರೈತರಿಗೆ ತಿಳಿದಿಲ್ಲ. ಖರೀದಿಸುವ ಮನಸ್ಸು ಇರುವವರಿಗೂ ರೈತರ ಮಾಹಿತಿ ದೊರಕುತ್ತಿಲ್ಲ. ಈ ಸಂಬಂಧ ಪ್ರಜಾಪ್ರಗತಿಯು ರೈತರು ಮತ್ತು ಖರೀದಿದಾರ ನಡುವೆ ಒಂದು ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಲಿದೆ.
ಹಣ್ಣು, ತರಕಾರಿ, ಬೆಳೆದಿರುವ ರೈತರು ತಾವು ಏನು ಬೆಳೆದಿದ್ದೀರಿ, ಪ್ರಮಾಣ ಎಷ್ಟಿದೆ, ಎಂಬುದನ್ನು ನಮಗೆ ಮಾಹಿತಿ ನೀಡಿದರೆ ಅದನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಇದರಿಂದ ಇಛೇಯುಳ್ಳವರು ತಮ್ಮನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಗುತ್ತದೆ. ಬೆಳೆಗಾರರು ತಮ್ಮ ಹೆಸರು, ಊರು ಮತ್ತು ಮೊಬೈಲ್ ಸಂಖೈಯನ್ನು ನೀಡಬೇಕು. ವಿವರವನ್ನು 9880623083 ಈ ನಂಬರ್ ಗೆ ಕರೆ ಮಾಡಿ ನೀಡಬಹುದು ಅಥವಾ ವಾಟ್ಸ್ ಅಪ್ ಮಾಡಬಹುದು.
ಕರೆ ಮಾಡಿದ ರೈತರ ವಿವರ ಪತ್ರಿಕಾ ಪ್ರಕಟಣೆಗೆ ಪ್ರತಿಕ್ರಿಯಿಸಿ ರೈತರು ಕರೆ ಮಾಡಿದ್ದಾರೆ. ಅವರ
ವಿವರಗಳನ್ನು ಕೆಳಕಂಡಂತೆ ನೀಡಲಾಗಿದೆ.
1) ಬಾಲಾಜಿ ನಾಯಕ್, ಭೂಪೂರು ತಾಂಡ, ನಾಗಲಮಡಿಕೆ ಹೋ.
ಪಾವಗಡ ತಾ. ಬೆಳೆಯ ವಿವರ: 50 ಕೆ.ಜಿ. ಪ್ರತ್ಯೇಕವಾಗಿ ವಿಂಗಡಿಸಿರುವ
ಒಟ್ಟು 250 ಪ್ಯಾಕ್ ಈರುಳ್ಳಿ, ಮೊ: 988069409 3.
2) ಮಂಜುನಾಥ್ ಆರ್. ರಾಂಪುರ, ದೊಡ್ಡಬಳ್ಳಾಪುರ ತಾ. ಬೆಳೆ
ವಿವರ : 20 ಗೊನೆ ಬಾಳೆಕಾಯಿ, ಮೊ: 9743528551
3) ರೇವಣ ಸಿದ್ದಪ್ಪ ರುದ್ರನೂರು, ಗುಲ್ಬರ್ಗಾ ಜಿಲ್ಲೆ, ಬೆಳೆ ವಿವರ : 1
ಎಕರೆ 20 ಗುಂಟೆಯಲ್ಲಿ ಬೆಳೆದಿರುವ ಕಲ್ಲಂಗಡಿ, ಮೋ: 9845985514
4) ಶರಣಗೌಡ ಕೆ., ವೀರಾಪುರ, ಬಳ್ಳಾರಿ ಜಿಲ್ಲೆ ಬೆಳೆ ವಿವರ : 15
ಕ್ವಿಂಟಾಲ್ ಅರಿಶಿಣ ಜೋಳ, ಮೊ: 9481219092
5) ಸಿದ್ದಪ್ಪ ಬಿ., ಚಿಕ್ಕಬಾಣಗೆರೆ, ಶಿರಾ ತಾ. ಬೆಳೆ ವಿವರ: 275 ಚೀಲ
ಈರುಳ್ಳಿ, ಮೋ: 9743936167.
6)ಮಂಜುನಾಥ್, ಶೆಟ್ಟಿಹಳ್ಳಿ 150 ಬಾಳೆಗೊನೆ, ಮೋ:
9620276336
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ