ತುಮಕೂರು :
ಮೂವರು ಸುಲಿಗೆಕೋರರನ್ನು ತಿಲಕ್‍ಪಾರ್ಕ್ ಪೊಲೀಸರು ಸೆರೆಹಿಡಿದಿದ್ದು, ಕೃತ್ಯಕ್ಕೆ ಬಳಸಿದ್ದ ಪಲ್ಸರ್‍ಬೈಕ್ ಚಾಕು, ಎರಡು ಮೊಬೈಲ್‍ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತರಾದ ತುಮಕೂರು ನಗರದ ಮರಳೂರಿನ ದರ್ಶನ್(21), ಲೇಬರ್ ಕಾಲೋನಿಯ ಅಂಡ್ರೂಸ್(22) ಹಾಗೂ ಕುರಿಪಾಳ್ಯದ ಆರ್.ಶಿವಣ್ಣ(20) ಎಂಬುವರು ಕಳೆದ ಜು.4ರಂದು ಟೂಡಾ ಲೇಔಟ್ ಖಾಲಿಜಾಗದಲ್ಲಿ ಕೂತಿದ್ದ ಮಂಜುನಾಥ ಎಂಬುವರನ್ನು ಬೆದರಿಸಿ ಅಚನ ಮೊಬೈಲ್‍ನಿಂದ 11,500 ರೂ. ಫೋನ್ ಪೇ ಮಾಡಿಸಿಕೊಂಡು ಆತನನ್ನು ವಿವಸ್ತ್ರಗೊಳಿಸಿ ವಿಡಿಯೋ ಮಾಡಿ, ವಿಷಯ ಬಹಿರಂಗಪಡಿಸಿರೆ ವಿಡಿಯೋ ಲೀಕ್ ಮಾಡುವುದಾಗಿ ಹೇಳಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಚರಣೆಗಿಳಿದ ಸಿಪಿಐ ಮುನಿರಾಜು, ಪಿಎಸ್ಸೈಗಳಾದ ನವೀನ್, ಡಿ.ಎಲ್‍ಭಾಗ್ಯಲಕ್ಷ್ಮೀ ಅವರ ನೇತೃತ್ವದ ತಂಡ ಮೂವರು ಸುಲಿಗೆಕೋರರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
