ಗ್ರಾಮಾಂತರ ಅತೀ ಸೂಕ್ಷ್ಮ ಖರ್ಚು ಆಧಾರಿತ ಕ್ಷೇತ್ರವಾಗಿ ಗುರುತು

ತುಮಕೂರು

    ಚುನಾವಣಾ ಆಯೋಗ ಗುರುತಿಸಿರುವ ರಾಜ್ಯದಲ್ಲಿರುವ ಸೂಕ್ಷ್ಮ ಖರ್ಚು ಆಧಾರಿತ ವಿಧಾನಸಭಾ ಕ್ಷೇತ್ರದ ಪಟ್ಟಿಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರವೂ ಸೇರಿದ್ದು, ಚುನಾವಣಾ ಅಕ್ರಮಗಳು ನಡೆಯದಂತೆ ತಡೆಗಟ್ಟಲು ಇಬ್ಬರು ಎಆರ್‌ಓಗಳನ್ನು ನೇಮಕಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಕ್ಷೇತ್ರದ ಚುನಾವಣಾಧಿಕಾರಿ ಹೋಟೆಲ್ ಶಿವಪ್ಪ ತಿಳಿಸಿದರು.

    ತಾಲ್ಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮ ನಡೆಯದಂತೆ ಹದ್ದಿನ ಕಣ್ಣಿಡಿದ್ದು, ತುಮಕೂರು ಗ್ರಾಮಾಂತರ ಕಸಬಾ ಪಶ್ಚಿಮ ಹೋಬಳಿಯ ಮಲ್ಲಸಂದ್ರ, ಊರ್ಡಿಗೆರೆ ಹೋಬಳಿ ಜಾಸ್ ಟೋಲ್ ಕ್ಯಾತ್ಸಂದ್ರ ಹಾಗೂ ಕುರುವಲು, ಗೂಳೂರು ಹೋಬಳಿ ಹೊನ್ನುಡಿಕೆ ಹಾಗೂ ಬೆಳ್ಳಾವಿ ಹೋಬಳಿ ದೊಡ್ಡವೀರನಹಳ್ಳಿ ಸೇರಿದಂತೆ 5 ಕಡೆ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, 5 ಎಸ್‌ಎಸ್‌ಟಿ ತಂಡ, 1 ವಿಡಿಯೋ ಸರ್ವೇಲೆನ್ಸ್ ತಂಡ ಹಾಗೂ 1 ಅಕೌಂಟಿAಗ್ ತಂಡವನ್ನು ರಚಿಸಿ ನೇಮಕಾತಿ ಮಾಡಲಾಗಿದೆ.

    ಯಾವುದೇ ಅಕ್ರಮ ಹಣ ಸಾಗಾಣಿಕೆ, ಮದ್ಯ ಸಾಗಾಣಿಕೆ, ಮತ್ತಿತರ ವಸ್ತುಗಳನ್ನು ಅನಧಿಕೃತವಾಗಿ ಸಾಗಾಣಿಕೆ ಮಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.ಗ್ರಾಮಾಂತರ ಕ್ಷೇತ್ರದಲ್ಲಿ 102074 ಪುರುಷರು, 104023 ಮಹಿಳೆಯರು ಹಾಗೂ 18 ಇತರೆ ಸೇರಿದಂತೆ ಒಟ್ಟು 206155 ಮತದಾರರಿದ್ದು, ಇವರಲ್ಲಿ 4239 ಯುವ ಮತದಾರರು ಸೇರಿದ್ದಾರೆ. ಇವರ ಮತ ಚಲಾವಣೆಗೆ 226 ಮತಗಟ್ಟೆ ಸ್ಥಾಪಿಸಲಾಗಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ವಿದ್ಯುತ್, ಶೌಚಾಲಯ, ಕುಡಿಯುವ ನೀರು, ರ‍್ಯಾಂಪ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

     ಕ್ಷೇತ್ರದಲ್ಲಿ 2562 ವಿಕಲಚೇನತರು ಹಾಗೂ 80ವರ್ಷ ಮೇಲ್ಪಟ್ಟ 5265 ಗೈರು ಮತದಾರರನ್ನು ಗುರುತಿಸಲಾಗಿದ್ದು, ಇವರು ಇಚ್ಛೆ ಪಟ್ಟಲ್ಲಿ ಅಂಚೆ ಮತ ಪತ್ರದ ಮೂಲಕ ಗೌಪ್ಯವಾಗಿ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ ಅವರು, ಚುನಾವಣಾ ಅಕ್ರಮಗಳು ಕಂಡು ಬಂದಲ್ಲಿ ದೂರವಾಣಿ ಸಂಖ್ಯೆ: 0816-2006574ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಅಥವಾ ಅ-ಗಿIಉIಓ ಮೊಬೈಲ್ ಆಪ್ ಮೂಲಕವೂ ದೂರು ನೀಡಬಹುದಾಗಿದೆ ಎಂದರು.

    112 ಸೀರೆ, 2ಕೆಜಿ ಗಾಂಜಾ ವಶ: ಕ್ಷೇತ್ರದ ನೋಡಲ್ ಅಧಿಕಾರಿ ಡಿವೈಎಸ್ಪಿ ಹೆಚ್. ಶ್ರೀನಿವಾಸ್ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನ ಮಾರ್ಚ್ 10 ರಿಂದ ದಾಖಲೆ ಇಲ್ಲದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ನಗದು, ಗಾಂಜಾ, ಮದ್ಯ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 2 ದಿನಗಳ ಹಿಂದೆ ಯಲ್ಲಾಪುರ ಚೆಕ್‌ಪೋಸ್ಟ್ನಲ್ಲಿ 112 ಸೀರೆಗಳನ್ನು ಜಪ್ತಿ ಮಾಡಲಾಗಿದೆ.

    ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 68.85 ಲೀಟರ್ ಮದ್ಯ, ಹೆಬ್ಬೂರಿನಲಿ 15.76 ಲೀಟರ್, ತುಮಕೂರು ಗ್ರಾಮಾಂತರದಲಿ 16.92 ಲೀಟರ್, ಬೆಳ್ಳಾವಿಯಲಿ 990 ಮಿ.ಲೀ., ತಿಲಕ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ 8.10ಲೀಟರ್ ಮದ್ಯ ಹಾಗೂ ಹೆಬ್ಬೂರಿನಲ್ಲಿ 65,000 ರೂ. ಮೌಲ್ಯದ 2.235 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ. ಸಿದ್ದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಪಿ.ಓಂಕಾರಪ್ಪ, ಕ್ಯಾತ್ಸಂದ್ರ ಸರ್ಕಲ್ ಇನ್ಸ್ಪೆಕ್ಟರ್ ಚೆನ್ನೇಗೌಡ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap