ತುಮಕೂರು :
ಕಳೆದ ಬಾರಿ ಚುನಾಯಿತರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಜೆಡಿಇಎಸ್ ಹುರಿಯಾಳು ಮತ್ತು ಜನಪ್ರಿಯ ನಾಯಕ ಹಾಲಿ ಶಾಸಕ ಡಿ. ಸಿ ಗೌರಿಶಂಕರ್ ಅವರ ಆಯ್ಕೆಯನ್ನು ನ್ಯಾಯಾಲಯ ಅಸಿಂಧು ಎಂದು ತೀರ್ಪು ನೀಡಿದೆ .ಮತ್ತು ಅನರ್ಹತೆಯ ಭಾಗವಾಗಿ 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಧೇಶನ ನೀಡಲಾಗಿದೆ .ಇನ್ನೂ ಗೌರಿ ಶಂಕರ ಅವರನ್ನು 6 ವರ್ಷ ಅನರ್ಹ ಮಾಡಲಾಗಿದ್ದು ,ಈ ಶಿಕ್ಷೆಗೆ ಕಾರಣ ಚುನಾವಣಾ ಸಮಯದಲ್ಲಿ ಮಾಡಲಾಗಿದ್ದ ಅಕ್ರಮ ಎನ್ನಲಾಗಿದೆ .
ಮತದಾರರಿಗೆ ನಕಲಿ ವಿಮೆ ಬಾಂಡ್ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ. ಗೌರಿಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ.
2018ರ ಚುನಾವಣೆ ಸಂದರ್ಭ ಡಿ.ಸಿ ಗೌರಿಶಂಕರ್ ಅವರು 32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಬಿಜೆಪಿಯ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಅವರು, ನಕಲಿ ಬಾಂಡ್ ಆಮಿಷ ಒಡ್ಡಿ ಗೌರಿಶಂಕರ್ ಅಕ್ರಮವಾಗಿ ಚುನಾವಣೆಯನ್ನು ಗೆದ್ದಿದ್ದಾರೆ. ಆದ್ದರಿಂದ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಮನವಿ ಮಾಡಿದ್ದರು.
ಸುದೀರ್ಘ 5 ವರ್ಷಗಳ ಕಾಲ ವಿಚಾರಣೆ ನಡೆಸಿದ ಹೈಕೋರ್ಟ್ ಶಾಸಕ ಡಿ.ಸಿ. ಗೌರಿಶಂಕರ್ ಅವರನ್ನು ಆರು ವರ್ಷ ಅನರ್ಹಗೊಳಿಸಿ ಇಂದು ತೀರ್ಪು ನೀಡಿದೆ. ಈ ಅರ್ಜಿಯನ್ನು ಸುದೀರ್ಘವಾಗಿ ವಾದ–ಪ್ರತಿವಾದ ಆಲಿಸಿ, ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿರುವ ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿತು. ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಶಾಸಕ ಗೌರಿ ಶಂಕರ್ ಆಯ್ಜೆ ಅಸಿಂಧುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
