ತುಮಕೂರು : ಬೀದಿನಾಯಿಗಳ ಆಪರೇಷನ್ ಕಾರ್ಯಚರಣೆ

 ತುಮಕೂರು :

      ಕಳೆದ ಕೆಲವು ದಿನಗಳಿಂದ ನಗರದ 11ನೇ ವಾರ್ಡಿನಲ್ಲಿ ಬೀದಿನಾಯಿಗಳು ಮೂವರನ್ನು ಕಚ್ಚಿ ಗಾಯಗೊಳಿಸಿದ್ದಲ್ಲದೇ ದಾರಿಹೋಕರು, ವಾಹನ ಸವಾರರ ಮೇಲೆಲ್ಲ ಎರಗಿ ಭೀತಿ ಸೃಷ್ಟಿಸುತ್ತಿದ್ದವು. ಇದು ಕೇವಲ 11ನೇ ವಾರ್ಡ್ ಸಮಸ್ಯೆ ಮಾತ್ರ ಆಗಿರದೆ ನಗರದ35 ವಾರ್ಡ್‍ಗಳಲ್ಲಿ ಬೀದಿ ನಾಯಿಗಳ ಉಪಟಳಕ್ಕೆ ಸಾರ್ವಜನಿಕರು ರೋಸಿ ಹೋಗಿದ್ದರು.

ನಗರದಲ್ಲಿ ಬೀದಿನಾಯಿಗಳ ಹೆಚ್ಚಿದ ಹಾವಳಿ ಕುರಿತು ಪ್ರಜಾಪ್ರಗತಿಯಲ್ಲಿ ಶುಕ್ರವಾರ ವಿಸ್ತøತ ವರದಿ ಮಾಡಿ ಪಾಲಿಕೆಯವರು ಗಂಭೀರ ಕ್ರಮ ವಹಿಸಬೇಕೆಂದು ಗಮನ ಸೆಳೆಯಲಾಗಿತ್ತು. ಆಯುಕ್ತೆ ರೇಣುಕಾ ಹಾಗೂ ಪಾಲಿಕೆ ಆರೋಗ್ಯಾಧಿಕಾರಿ ಡಾ.ರಕ್ಷಿತ್‍ಕುಮಾರ್ ಅವರು ಬೀದಿ ನಾಯಿ ಉಪಟಳ ನಿಯಂತ್ರಣಕ್ಕೆ ಕ್ರಮ ವಹಿಸುವುದಾಗಿ ಪ್ರತಿಕ್ರಿಯಿಸಿದ್ದರು. ಅದರಂತೆ ಇಂದು 11ನೇ ವಾರ್ಡಿನಲ್ಲಿ ವ್ಯಾನ್ ಸಮೇತ ತೆರಳಿ ಬೀದಿ ನಾಯಿಗಳನ್ನು ಬಲೆಬೀಸಿ ಹಿಡಿದು ಅವುಗಳಿಗೆ ಎಬಿಸಿ ಆಪರೇಷನ್ (ಜನನ ನಿಯಂತ್ರಣ)ಮಾಡಿಸಲು ಕರೆದೊಯ್ಯಲಾಗಿದೆ.

ವರ್ತನೆ ನಿಯಂತ್ರಣಕ್ಕೂ ಕ್ರಮವಾಗಲಿ:

      11ನೇ ವಾರ್ಡಿನಲ್ಲಿ ನಡೆದ ಈ ಕಾರ್ಯಚರಣೆ ನಗರದ ಎಲ್ಲೆಡೆ ನಿರಂತರವಾಗಿ ನಡೆಯಬೇಕೆಂಬುದು ನಾಗರಿಕರ ಆಗ್ರಹವಾಗಿದ್ದು, ಬೀದಿ ನಾಯಿಗಳು ಆಕ್ರೋಶ ಭರಿತವಾಗಿ ರಸ್ತೆಯಮೇಲೆ ಸಂಚರಿಸುವವರ ಮೇಲೆ ಎರಗುತ್ತಿರುವುದಕ್ಕೆ ಕಡಿವಾಣ ಹಾಕುವ ಕ್ರಮವಾಗಬೇಕು. ಸಾಕು ನಾಯಿಗಳಿಗಾದರೆ ನಿಯಮಿತ ಲಸಿಕೆ ಹಾಕಿ ಅವುಗಳ ವರ್ತನೆಯನ್ನು ನಿಯಂತ್ರಿಸಲಾಗುತ್ತದೆ. ಆದರೆ ಬೀದಿನಾಯಿಗಳಿಗೆ ಅಂತಹ ಲಸಿಕೆ ಹಾಕಲು ಯಾವುದೇ ಯೋಜನೆಇಲ್ಲ. ಪಶುಪಾಲನಾ ಇಲಾಖೆ ಹಾಗೂ ಪಾಲಿಕೆಯವರು ಈ ಸಂಬಂಧ ಯೋಜನೆ ಕಾರ್ಯಗತಗೊಳಿಸುವ ಅಗತ್ಯವಿದೆ ಎಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link