ತುಮಕೂರು : ಪಾಲಿಕೆ ಆಸ್ತಿತೆರಿಗೆ ಪಾವತಿ ; ಜೂ.30ರವರೆಗೆ ವಿಸ್ತರಣೆ

 ತುಮಕೂರು :

      2021-22ನೇ ಸಾಲಿನ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಘೋಷಿಸಿದ್ದ ಶೇ.5ರಷ್ಟು ರಿಯಾಯಿತಿಯನ್ನು ಜೂ.30ರವರೆಗೆ ವಿಸ್ತರಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಕೋವಿಡ್ -19 ಹರಡುವಿಕೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಏ.27ರಿಂದ ಕೋವಿಡ್ ಕರ್ಫ್ಯೂ ಘೋಷಿಸಿದ್ದು. ನಗರದ ನಾಗರಿಕರು ಆಸ್ತಿ ತೆರಿಗೆ ಪಾವತಿಸುವುದು ಕಷ್ಟ ಸಾಧ್ಯವಾಗಿರುತ್ತದೆ ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳಿಗೆ ಶೇ.5ರಷ್ಟು ರಿಯಾಯಿತಿಯ ಕಾಲವಧಿಯನ್ನು ಮುಂದಿನ ಮಾಹೆ ಜೂ.30ರ ಅಮತ್ಯದವರೆಗೂ ವಿಸ್ತರಿಸಲಾಗಿದ್ದು ಸಾರ್ವಜನಿಕರಿಗೂ ಸದುಪಯೋಗ ಪಡಿಸಿಕೊಳ್ಳಲು ಕೋರಿದ್ದಾರೆ.   

Recent Articles

spot_img

Related Stories

Share via
Copy link
Powered by Social Snap