ತುಮಕೂರು :
ಕಳೆದ ಶ್ರಾವಣಮಾಸದ ವಿಶೇಷ ವಾರದ ದಿನಗಳು, ಸಾರ್ವತ್ರಿಕ ರಜಾದಿನಗಳಂದು ಜಿಲ್ಲೆಯ ದೇವಾಲಯಗಳು, ಪ್ರಾರ್ಥನಾಮಂದಿರ, ಚರ್ಚ್‍ಗಳಿಗೆ ವಿಧಿಸಿದ್ದ ಭಕ್ತರ ಪ್ರವೇಶ ನಿರ್ಬಂಧವನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ಸೆ.9 ರಿಂದ ತೆರವುಗೊಳಿಸಿದ್ದಾರೆ.
ಕೋವಿಡ್ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಕಳೆದ ಆ.12ರಿಂದ ಜಾರಿಗೊಳಿಸಿದ್ದ ನಿರ್ಬಂಧ ಆದೇಶವನ್ನು ಪ್ರಸ್ತುತ ಶ್ರಾವಣ ಮಾಸ ಅಂತ್ಯಗೊಂಡ ಹಿನ್ನೆಲೆಯಲ್ಲಿ ತೆರವುಗೊಳಿಸುತ್ತಿರುವುದಾಗಿ ಜಿಲ್ಲಾಧಿಕಾರಿಗಳು ಹೊಸ ಆದೇಶದಲ್ಲಿ ತಿಳಿಸಿದ್ದು, ವಾರಾಂತ್ಯ ಹಾಗೂ ಸಾರ್ವತ್ರಿಕ ರಜಾದಿನಗಳಂದು ಕೋವಿಡ್ -19 ಸಮುಚಿತ ವರ್ತನೆಗೊಳೊಂದಿಗೆ ದೇವಾಲಯ, ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಲು ಅನುಮತಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಕ್ತರು, ಪ್ರಸಾಸಿಗರಿಗೆ ಗೌರಿಹಬ್ಬದಂದು ನೀಡಿರುವ ಈ ಮುಕ್ತತೆ ಸಾರ್ವಜನಿಕರಲ್ಲಿ ಖುಷಿ ತಂದರೂ, ಗುಂಪುಗೂಡಬಾರದು, ಮಾಸ್ಕ್ ಮೊದಲಾದ ಕೋವಿಡ್ ನಿಯಮಾವಳಿಗಳ ಕಡ್ಡಾಯ ಪಾಲನೆ ಸಾಧ್ಯವೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ. ಸಾರ್ವಜನಿಕರು ಈ ಮುಕ್ತ ಪ್ರವೇಶವನ್ನು ದುರುಪಯೋಗಪಡಿಸಿಕೊಂಡರೂ ಮತ್ತೆ ಕೋವಿಡ್ ಅಪಾಯಕ್ಕೆ ಸಿಲುಕಬೇಕಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
