ತುಮಕೂರು : ಖತರ್ನಾಕ ಕಳ್ಳರ ಸುಳಿವು ನೀಡಿದ ಸಿಸಿಟಿವಿ …..!

ತುಮಕೂರು :

     ಕೆಲಸ ಮಾಡಿದರೆ ಸಂಬಳ ಕೊಡುವುದು ಸಹಜ ಆದರೆ ಕಳ್ಳತನ ಮಾಡುವವರಿಗೂ ಸಂಬಳ ಫಿಕ್ಸ್ ಮಾಡುವುದನ್ನು ಈವರೆಗೆ ಕೇಳಿರಲಿಲ್ಲ. ಆದರೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲಿಯೇ ಇಂತದ್ದೊಂದು ಖತರ್ನಾಕ್ ಗ್ಯಾಂಗ್ ಸಿಕ್ಕಿಬಿದ್ದಿದೆ. ಕಳ್ಳತನ ಮಾಡುವವರಿಗೆ 20 ಸಾವಿರ ಸಂಬಳ ನೀಡುತ್ತಿದ್ದ ಇಬ್ಬರು ಆರೋಪಿಗಳು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರು ಮೂಲದ ರಾಘವೇಂದ್ರ ಎಂಬಾತ ಕಳ್ಳತನಕ್ಕಾಗಿ ವೆಂಕಟೇಶ್ ಎಂಬಾತನನ್ನು 20,000 ರೂ ಸಂಬಳಕ್ಕೆ ಕೆಲಸಕ್ಕೆ ಇಟ್ಟುಕೊಂಡಿದ್ದ. ಕಳ್ಳತನದ ಕೆಲಸಕ್ಕೆ ಸೇರಿದ್ದ ವೆಂಕಟೇಶ್ ಕೊರಟಗೆರೆ ಸುತ್ತಮುತ್ತ ರಾತ್ರಿ ವೇಳೆ ಕೊಳವೆಬಾವಿಯಲ್ಲಿದ್ದ ಕೇಬಲ್ ವೈರ್ ಗಳನ್ನು ಕದಿಯುತ್ತಿದ್ದನಂತೆ. ಹೀಗೆ ಕದ್ದ ಕೇಬಲ್ ಗಳನ್ನು ರಾಘವೇಂದ್ರಗೆ ಕೊಡುತ್ತಿದ್ದನಂತೆ. ಆತ ವಿನೇಶ್ ಪಟೇಲ್ ಎಂಬಾತನಿಗೆ ಮಾರುತ್ತಿದ್ದನಂತೆ.

    ಹೀಗೆ ಸರಣಿ ಕಳ್ಳತನ ಮಾಡಿದರೂ ಎಲ್ಲಿಯೂ ಸಿಕ್ಕಿಹಾಕಿಕೊಳ್ಳದ ಕಳ್ಳ ವೆಂಕಟೇಶ್, ವಡ್ಡಗೆರೆಯಲ್ಲಿ ಕಳ್ಳತನ ಮಾಡಿದಾಗ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿ ವೆಂಕಟೇಶ್, ರಾಘವೇಂದ್ರ ಹಾಗೂ ವಿನೇಶ್ ಪಟೇಲ್ ನನ್ನು ಬಂಧಿಸಿದ್ದಾರೆ. 20 ಸಾವಿರ ಸಂಬಂಳ ಪಡೆದು ಕಳ್ಳತನ ಕೆಲಸಕ್ಕೆ ಸೇರಿದ್ದ ವಿಚಾರ ಕೇಳಿ ಪೊಲೀಸರೇ ದಂಗಾಗಿದ್ದಾರೆ.

Recent Articles

spot_img

Related Stories

Share via
Copy link
Powered by Social Snap