ತುಮಕೂರು :

ತುಮಕೂರು ವಿಶ್ವವಿದ್ಯಾನಿಲಯದ 14ನೇ ವಾರ್ಷಿಕ ಘಟಿಕೋತ್ಸವವು ರಾಷ್ಟ್ರಗೀತೆಯೊಂದಿಗೆ ಇಂದು ಆರಂಭ ಮಾಡಲಾಯಿತು.
ಗೌರವಾನ್ವಿತ ರಾಜ್ಯಪಾಲರಾದ ವಾಜೂಬಾಯಿವಾಲಾ ಅವರಿಂದ 92 ಮಂದಿಗೆ ಚಿನ್ನದ ಪದಕ ಹಾಗೂ ಪದವಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಉದ್ಯಮಿ ಸಮಾಜ ಸೇವಕ ಐ.ಎಸ್.ಪ್ರಸಾದ್ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಇಸ್ರೋ ಮಾಜಿ ಅಧ್ಯಕ್ಷ ಪದ್ಮವಿಭೂಷಣ ಡಾ||ಕೆ. ಕಸ್ತೂರಿರಂಗನ್ ಅವರು ಘಟಿಕೋತ್ಸವದ ಭಾಷಣ ಮಾಡಿದರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ವೈ ಎಸ್ ಸಿದ್ದೇಗೌಡ ಅವರು ವಾರ್ಷಿಕ ವರದಿ ಮಂಡನೆ ಮಾಡಿದರು. ಕುಲಸಚಿವರು, ಅಕಾಡೆಮಿಕ್ ಕೌನ್ಸಿಲ್ ಸಿಂಡಿಕೇಟ್ ಸದಸ್ಯರು ಸೇರಿದಂತೆ ರ್ಯಾಂಕ್ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.








