ತುಮಕೂರಿನಿಂದ ಜಮೀರ್ ಸ್ಪರ್ಧೆ ಇಲ್ಲ!!

 ತುಮಕೂರು:

      ಜು.3 ರಂದು ಕೆಲವು ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಸಿದ್ದರಾಮಯ್ಯರಿಗಾಗಿ ಕ್ಷೇತ್ರ ತ್ಯಾಗ ತುಮಕೂರಿನಿಂದ ಜಮೀರ್ ಸ್ಪರ್ಧೆ? ಎನ್ನುವ ವಿಷಯ ಸತ್ಯಕ್ಕೆ ದೂರವಾದುದು ಎಂದು ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಮಹಬೂಬ್ ಪಾಷ ತಿಳಿಸಿದ್ದಾರೆ.

      ಈಗಾಗಲೇ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಬದಾಮಿ ಕ್ಷೇತ್ರ ಬಿಟ್ಟು ಯಾವುದೇ ಕ್ಷೇತ್ರಪಲ್ಲಟ ಮಾಡುವುದಿಲ್ಲ ಎಂಬುದಾಗಿ ವಿಧಾನಸಭೆಯಲ್ಲಿ ಮತ್ತು ವಿವಿಧ ಪತ್ರಿಕಾಗೋಷ್ಟಿಗಳಲ್ಲಿ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಕೂಡ ಚಾಮರಾಜಪೇಟೆಯಲ್ಲಿಯೇ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಇದೆಲ್ಲವೂ ತಿಳಿದಿರಿರುವ ವಿಚಾರವಾಗಿದೆ. ಆದ್ದರಿಂದ ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಮಹಬೂಬ್ ಪಾಷ ಮನವಿ ಮಾಡಿದ್ದಾರೆ.

      2018 ರ ಸಾರ್ವತ್ರಿಕ ವಿಧಾನ ಸಭಾಚುನಾವಣೆಯಲ್ಲಿ ತುಮಕೂರು ನಗರದ ಅಲ್ಪಸಂಖ್ಯಾತ ಸಮುದಾಯದ ಮತದಾರರು ನಿಕಟಪೂರ್ವ ಶಾಸಕರು ಮತ್ತು ನಮ್ಮೆಲ್ಲರ ನೆಚ್ಚಿನ ನಾಯಕರಾದ ಡಾ.ರಫೀಕ್‍ಅಹ್ಮದ್ ಅವರಿಗೆ ಅತ್ಯಂತ ಹೆಚ್ಚು ಮತಗಳನ್ನು ನೀಡಿರುವುದು ತಿಳಿದ ವಿಷಯವಾಗಿದೆ. 2018ರ ವಿಧಾನಸಭಾ ಚುನಾಚಣೆಯ ಮತದಾರನದ ವಿವರ ತಿಳಿಯದೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಅರ್ಥೈಸಿಕೊಳ್ಳದೇ ಇರುವವರು ಇಂತಹ ಬಾಲಿಷ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹವರ ವಿರುದ್ದವಾಗಿ ಕೆಪಿಸಿಸಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link