ತುಮಕೂರು : ಜಿಪಂ ಕ್ಷೇತ್ರಗಳ ಪುನರ್‍ವಿಂಗಡಣೆ, ಅಧಿಸೂಚನೆ ಬಾಕಿ!

ತುಮಕೂರು :

      ಜಿಪಂ ಮತ್ತು ತಾಪಂ ಚುನಾವಣೆಗೆ ಪೂರ್ವಭಾವಿಯಾಗಿ ರಾಜ್ಯ ಚುನಾವಣಾ ಆಯೋಗ ಜನಸಂಖ್ಯೆ ಆಧಾರದಲ್ಲಿ ಹೊಸ ಕ್ಷೇತ್ರಗಳ ಸೃಷ್ಟಿ, ಕೆಲವು ಕ್ಷೇತ್ರಗಳನ್ನು ರದ್ದುಗೊಳಿಸಿ ಪುನರ್ ವಿಂಗಡಣೆ ಪ್ರಕ್ರಿಯೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು. ಅದರನ್ವಯ ಆಯಾ ತಾಲೂಕು ತಹಸೀಲ್ದಾರ್‍ಗಳು ಸಭೆಗಳನ್ನು ನಡೆಸಿ ಅಗತ್ಯ ನಕಾಶೆ, ಮಾಹಿತಿಗಳೊಂದಿಗೆ ಜಿಪಂ ಕ್ಷೇತ್ರಗಳನ್ನು ಪುನರ್‍ವಿಂಗಡಿಸಿ ಆಯೋಗಕ್ಕೆ ಅಧಿಸೂಚನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಒಟ್ಟು 64 ಜಿಲ್ಲಾ ಪಂಚಾಯತ್ ಕ್ಷೇತ್ರಗಳು ರಚನೆಯಾಗಿವೆ. ಹಿಂದೆ ಇದ್ದ 57 ಕ್ಷೇತ್ರಗಳಲ್ಲಿ ಹುಳಿಯಾರು ಜಿಪಂ ಕ್ಷೇತ್ರ ರದ್ದಾಗಿದ್ದು, ಹೊಸದಾಗಿ 8 ಕ್ಷೇತ್ರಗಳು ಸೃಷ್ಟಿಯಾಗಿವೆ. ಈ ಕ್ಷೇತ್ರ ಪುನರ್‍ವಿಂಗಡಣೆ ಪ್ರಕ್ರಿಯೆಯಲ್ಲಿ ಕೆಲವು ಕ್ಷೇತ್ರಗಳ ಹೆಸರುಗಳು ಸ್ವರೂಪ ಬದಲಾಗಿದ್ದು, ಯಾವ ತಾಲೂಕಿನಲ್ಲಿ ಯಾವ್ಯಾವ ಜಿಪಂ ಕ್ಷೇತ್ರಗಳು ರಚನೆಯಾಗಿವೆ. ಅವುಗಳು ಒಳಗೊಳ್ಳುವ ಗ್ರಾಮ ಪಂಚಾಯ್ತಿಗಳ್ಯಾವುವು ಎಂಬುದರ ಬಗ್ಗೆ ಜಿಲ್ಲೆ ಹತ್ತು ತಾಲೂಕುಗಳ ಪೈಕಿ ತುಮಕೂರು, ತುರುವೇಕೆರೆ, ಕೊರಟಗೆರೆ, ಗುಬ್ಬಿ, ಕುಣಿಗಲ್ ಈ 5 ತಾಲೂಕುಗಳ ಸಮಗ್ರ ಮಾಹಿತಿ ಇಲ್ಲಿದೆ.

ತುಮಕೂರು ತಾಲೂಕಲ್ಲಿ ನಾಗವಲ್ಲಿ ಹೊಸ ಜಿಪಂ :

      ತುಮಕೂರು ತಾಲೂಕಿಗೆ ಸಂಬಂಧಿಸಿದಂತೆ ನಾಗವಲ್ಲಿ ಮಾತ್ರ ಹೊಸ ಜಿಲ್ಲಾ ಪಂಚಾಯತ್ ಕ್ಷೇತ್ರ ರಚನೆಯಾಗಿದ್ದು, 8ಕ್ಷೇತ್ರಗಳಿದ್ದು 9 ಕ್ಷೇತ್ರಗಳಾಗಿದೆ. ಹೊಸ ನಾಗವಲ್ಲಿ ಜಿಪಂ ಕ್ಷೇತ್ರ ವ್ಯಾಪ್ತಿಗೆ ಹೊಳಕಲ್ಲು, ಬಳಗೆರೆ, ನಾಗವಲ್ಲಿ, ಗಳಿಗೇನಹಳ್ಳಿ ಗ್ರಾಮ ಪಂಚಾಯಿತಿ ಸೇರಿಸಿದ್ದು, ಹಿಂದೆ ಇದ್ದ 8 ಕ್ಷೇತ್ರಗಳಾದ ಬೆಳಗುಂಬ, ಚಿಕ್ಕತೊಟ್ಲುಕೆರೆ, ಗೂಳೂರು, ಹೆಗ್ಗೆರೆ, ಊರ್ಡಿಗೆರೆ, ಊರುಕೆರೆ, ಹೊನ್ನುಡಿಕೆ ಹಾಗೂ ಹೆಬ್ಬೂರು ಕ್ಷೇತ್ರಗಳನ್ನು ಹಾಗೆಯೇ ಉಳಿಸಲಾಗಿದೆ.

ಕೊರಟಗೆರೆಯಲ್ಲಿ ಬೊಮ್ಮಲದೇವಿಪುರ ಹೊಸ ಹೆಚ್ಚುವರಿ ಕ್ಷೇತ್ರ:

      ಕೊರಟಗೆರೆ ತಾಲೂಕು ವ್ಯಾಪ್ತಿಯಲ್ಲಿ ಹಾಲಿಇದ್ದ 4 ಜಿಪಂ ಕ್ಷೇತ್ರಗಳೊಂದಿಗೆ ಬೊಮ್ಮಲದೇವಿಪುರ ಹೊಸ ಕ್ಷೇತ್ರವಾಗಿ ರಚನೆ ಮಾಡಿದ್ದು, ಇದರ ವ್ಯಾಪ್ತಿಗೆ ದೊಡ್ಡಸಾಗ್ಗೆರೆ, ತೀತಾ, ಪಾತಗಾನಹಳ್ಳಿ, ಕ್ಯಾಮೇನಳ್ಳಿ, ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿಗಳನ್ನು ಸೇರಿಸಲಾಗಿದೆ. ಹಾಲಿ ಅಸ್ಥಿತ್ವದಲ್ಲಿದ್ದ ಕೋಳಾಲ ವ್ಯಾಪ್ತಿಗೆ ಕೋಳಾಲ, ಚಿನ್ನಹಳ್ಳಿ, ಎಲೆರಾಂಪುರ ವಜ್ಜನಕುರಿಕೆ, ನೀಲಗೊಂಡನಹಳ್ಳಿ ಪಂಚಾಯಿತಿಗಳನ್ನು, ಹೊಳವನಹಳ್ಳಿ ಕ್ಷೇತ್ರ ವ್ಯಾಪ್ತಿಗೆ ಹೊಳವನಹಳ್ಳಿ, ಅಕ್ಕಿರಾಂಪುರ, ಬೈಚಾಪುರ ಗ್ರಾಪಂ ಸೇರಿಸಿದ್ದ, ಹೂಲಿಕುಂಟೆ ಕ್ಷೇತ್ರ ವ್ಯಾಪ್ತಿಗೆ ಅರಸಾಪುರ, ಜಟ್ಟಿ ಅಗ್ರಹಾರ, , ಹುಲಿಕುಂಟೆ, ತುಂಬಾಡಿ, ವಡ್ಡಗೆರೆ, ಹಂಚಿಹಳಿ, ಹೊಳವನಹಳ್ಳಿ ಪಂಚಾಯಿತಿಯನ್ನು ತರಲಾಗಿದೆ. ತೋವಿನಕೆರೆ ಕ್ಷೇತ್ರ ವ್ಯಾಪ್ತಿಗೆ ತೋವಿನಕೆರೆ, ಬೂದಿಗೆ, ಬುಕ್ಕಾಪಟ್ಟಣ ಹಾಗೂ ಕುರಂ ಕೋಟೆ ಪಂಚಾಯ್ತಿಯನ್ನು ಸೇರಿಸಿ ಪುನರ್ ವಿಂಗಡಿಸಲಾಗಿದೆ.

ಗುಬ್ಬಿ ತಾಲೂಕಿಗೆ ಯಾವುದೇ ಹೆಚ್ಚುವರಿ ಕ್ಷೇತ್ರವಿಲ್ಲ

      ಗುಬ್ಬಿ ತಾಲೂಕಿನಲ್ಲಿದ್ದ 7 ಜಿಪಂ ಕ್ಷೇತ್ರಗಳನ್ನು ಯಾವುದೇ ರದ್ದು, ಹೆಚ್ಚಳ ಮಾಡದೆ ಪುನರ್‍ವಿಂಗಡಿಸಿ 7 ಕ್ಷೇತ್ರಗಳಾಗಿ ಉಳಿಸಿದ್ದು. ಚಂದ್ರಶೇಖರಪುರ ಬದಲಾಗಿ ಕಲ್ಲೂರು ಹೆಸರಿನಲ್ಲಿ ಹೊಸದಾಗಿ ರಚಿಸಲಾಗಿದೆ. ಇದರ ವ್ಯಾಪ್ತಿಗೆ ಚಂದ್ರಶೇಖರಪುರ, ಹಿಂಡಿಸ್ಕೆರೆ, ಮಾವಿನಹಳ್ಳಿ, ಚೆಂಗಾವಿ ಇಡಗೂರು, ಕಲ್ಲೂರು ಗ್ರಾಮ ಪಂಚಾಯ್ತಿಗಳನ್ನು ಸೇರಿಸಲಾಗಿದೆ. ಉಳಿದಂತೆ ಚೇಳೂರು ಜಿಪಂ ಕ್ಷೇತ್ರದ ವ್ಯಾಪ್ತಿಗೆ ಚೇಳೂರು, ಬಿದರೆ, ಇರಕಸಂದ್ರ ನಲ್ಲೂರು ಪಂಚಾಯ್ತಿಗಳನ್ನು ತಂದರೆ, ಅಮ್ಮನಘಟ್ಟ ಕ್ಷೇತ್ರ ವ್ಯಾಪ್ತಿಗೆ ಅಡಗೂರು, ಅಮ್ಮನಘಟ್ಟ, ಜಿ.ಹೊಸಹಳ್ಳಿ, ಮೂಕನಹಳ್ಳಿಪಟ್ಟಣ, ಎಸ್.ಕೋಡಗಿಹಳ್ಳಿ ಪಂಚಾಯ್ತಿಗಳನ್ನು ಸೇರಿಸಲಾಗಿದೆ. ಹಾಗಲವಾಡಿ ಜಿಪಂ ವ್ಯಾಪ್ತಿಗೆ ಮಂಚಲದೊರೆ, ಹಾಗಲವಾಡಿ, ಹೊಸಕೆರೆ, ಶಿವಪುರ, ಅಂಕಸಂದ್ರ ಪಂಚಾಯ್ತಿಗಳನ್ನು ಸೇರಿಸಿದರೆ, ಕಡಬ ಬದಲಾಗಿ ಹೊಸದಾಗಿ ಹೆಸರಿಸಿದ ಕುನ್ನಾಲ ಕ್ಷೇತ್ರ ವ್ಯಾಪ್ತಿಗೆ ಕಡಬ, ಕೊಪ್ಪ, ಕುನ್ನಾಲ, ಪೆದ್ದನಹಳ್ಳಿ, ಬ್ಯಾಡಗೆರೆ ಪಂಚಾಯ್ತಿಯನ್ನು ಅಡಕಗೊಳಿಸಲಾಗಿದೆ. ನಿಟ್ಟೂರು ಕ್ಷೇತ್ರ ವ್ಯಾಪ್ತಿಗೆ ನಿಟ್ಟೂರು, ಎಂಎನ್.ಕೋಟೆ, ಬೆಲವತ್ತ, ಹೇರೂರು, ಮೂಗನಾಯಕನಕೋಟೆ ಗ್ರಾಪಂಗಳು ಸೇರಿಸಲಾಗಿದ್ದು, ಅಳಿಲುಘಟ್ಟ ಕ್ಷೇತ್ರ ವ್ಯಾಪ್ತಿಗೆ ಮಾರಶೆಟ್ಟಿಹಳ್ಳಿ, ದೊಡ್ಡಗುಣಿ, ಕೊಂಡ್ಲಿ, ಅಳಿಲುಘಟ್ಟ ಹಾಗೂ ತ್ಯಾಗಟೂರು ಪಂಚಾಯ್ತಿಗಳನ್ನು ಸೇರಿಸಲಾಗಿದೆ.

ಕುಣಿಗಲ್ ತಾಲೂಕಿಗೆ ಸಂತೆಮಾವತ್ತೂರು ಒಂದು ಹೆಚ್ಚುವರಿ ಕ್ಷೇತ್ರ (5+1):

      ಕುಣಿಗಲ್ ತಾಲೂಕಿಗೆ ಒಂದು ಹೆಚ್ಚುವರಿ ಜಿಪಂ ಕ್ಷೇತ್ರ ಸೇರ್ಪಡೆಯಾಗಿದ್ದು, ಸಂತೆಮಾವತ್ತೂರು ಹೊಸ ಕ್ಷೇತ್ರ ರಚನೆಯಾಗಿದೆ. ಇದರ ವ್ಯಾಪ್ತಿಗೆ ಸಂತೆಮಾವತ್ತೂರು, ಹೇರೂರು, ಬೇಗೂರು, ಟಿ.ಹೊಸಹಳ್ಳಿ, ಕಿತ್ತಾಮಂಗಲ ಪಂಚಾಯ್ತಿಗಳನ್ನು ಸೇರಿಸಲಾಗಿದೆ. ಉಳಿದಂತೆ ಹಳೆಯ ಕೊತ್ತಗೆರೆ ಕ್ಷೇತ್ರ ವ್ಯಾಪ್ತಿಗೆ ಭಕ್ತರಹಳ್ಳಿ, ಮಡಿಕೆಹಳ್ಳಿ, ಬಿಳಿದೇವಾಲಯ, ಕೊತ್ತಗೆರೆ, ಬಾಗೇನಹಳ್ಳಿ, ತರೇದುಕುಪ್ಪೆ ಪಂಚಾಯ್ತಿಗಳನ್ನು ಸೇರಿಸಿದರೆ ಹುತ್ರಿದುರ್ಗ ಬದಲಾಗಿ ಇಪ್ಪಾಡಿ ಎಂದು ಹೆಸರಿಸಲಾದ ಕ್ಷೇತ್ರಕ್ಕೆ ಹುತ್ತಿದುರ್ಗ, ಇಪ್ಪಾಡಿ, ಜೋಡಿಹೊಸಹಳ್ಳಿ, ಯಲಿಯೂರು, ಕೆಂಪನಹಳ್ಳಿ ಹಾಗೂ ಚೌಡನಕುಪ್ಪೆ ಪಂಚಾಯ್ತಿಗಳನ್ನು ಅಡಕಗೊಳಿಸಲಾಗಿದೆ. ಹುಲಿಯೂರು ದುರ್ಗ ಕ್ಷೇತ್ರ ವ್ಯಾಪ್ತಿಗೆ ಹುಲಿಯೂರು ದುರ್ಗ ಕೊಡವತ್ತಿ, ನಿಡಸಾಲೆ, ತಾವರೆಕೆರೆ, ಉಜ್ಜನಿ ಗ್ರಾಮ ಪಂಚಾಯ್ತಿಗಳನ್ನು ಸೇರಿಸಿದರೆ, ಅಮೃತ್ತೂರು ಕ್ಷೇತ್ರ ವ್ಯಾಪ್ತಿಗೆ ಅಮೃತೂರು, ಪಡವಗೆರೆ, ಮಾರ್ಕೋನಹಳ್ಳಿ, ಜಿನ್ನಾಗರ, ಯಡವಾಣಿ, ಕೆ.ಎಚ್.ಹಳ್ಳಿ, ಹುಳಿಮಾವು ಹಳೇವೂರು ಪಂಚಾಯ್ತಿಗಳನ್ನು ಅಡಕಗೊಳಿಸಲಾಗಿದೆ. ಎಡೆಯೂರು ಬದಲಾಗಿ ಬೀರಗಾನಹಳ್ಳಿ ಎಂದು ಹೆಸರಿಸಿರುವ ಕ್ಷೇತ್ರ ವ್ಯಾಪ್ತಗೆ ಯಡಿಯೂರು, ಕೊಪ್ಪ, ಕೊಡಗೀಹಳ್ಳಿ, ಕಗ್ಗೆರೆ, ನಾಗಸಂದ್ರ ಪಂಚಾಯ್ತಿಗಳನ್ನು ಸೇರ್ಪಡೆ ಮಾಡಲಾಗಿದೆ.

ತುರುವೇಕೆರೆಗೆ ಮುನಿಯೂರು ಕ್ಷೇತ್ರ ಹೊಸಸೇರ್ಪಡೆ, ಎರಡರ ಹೆಸರು ಬದಲು

      ತುರುವೇಕೆರೆ ಕ್ಷೇತ್ರದಲ್ಲಿದ್ದ 4 ಕ್ಷೇತ್ರಗಳಿಗೆ ಒಂದು ಹೆಚ್ಚುವರಿ ಕ್ಷೇತ್ರವಾಗಿ ಮುನಿಯೂರು ಸೇರ್ಪಡೆ ಮಾಡಿದ್ದ್ಲು ಎರಡು ಕ್ಷೇತ್ರಗಳ ಹೆಸರು ಬದಲಾವಣೆಯಾಗಿ ಪುನರ್ ವಿಂಗಡಣೆಯಾಗಿದೆ. ಹೊಸ ಮುನಿಯೂರು ಕ್ಷೇತ್ರ ವ್ಯಾಪ್ತಿಗೆ ಮುನಿಯೂರು, ಮಾದಿಹಳ್ಳಿ , ಕೊಂಡಜ್ಜಿ, ತಾಳೆಕೆರೆ ಗ್ರಾಮ ಪಂಚಾಯಿತಿಗಳನ್ನು ಸೇರಿಸಲಾಗಿದೆ. ಬಾಣಸಂದ್ರ ಕ್ಷೇತ್ರ ವ್ಯಾಪ್ತಿಗೆ ಬಾಣಸಂದ್ರ, ಆನೆಕೆರೆ, ಲೋಕಮ್ಮನಹಳ್ಳಿ, ಕೊಡಗಿಹಳ್ಳಿ, ತಂಡಗ, ದಬ್ಬೆಘಟ್ಟ ಪಂಚಾಯ್ತಿಗಳನ್ನು ಸೇರಿಸಲಾಗಿದ್ದು, ದಬ್ಬೆಘಟ್ಟ ಕ್ಷೇತ್ರ ತೆಗೆದು ಬೆನಕನಕೆರೆ ಹೊಸ ಕ್ಷೇತ್ರ ರಚಿಸಲಾಗಿದೆ. ಈ ಕ್ಷೇತ್ರ ವ್ಯಾಪ್ತಿಗೆ ಅರೇಮಲ್ಲೇನಹಳ್ಳಿ, ಗೋಣಿ ತುಮಕೂರು, ಕಣತೂರು, ಮಾವಿನಕೆರೆ, ಮುತ್ತುಗದಹಳ್ಳಿ, ದಬ್ಬೇಘಟ್ಟ ಪಂಚಾಯ್ತಿಯನ್ನು ಸೇರಿಸಲಾಗಿದೆ. ದಂಡಿನಶಿವರ ಕ್ಷೇತ್ರದ ಹೆಸರು ತೆಗೆದು ಆದಿತ್ಯಪಟ್ಟಣ ಹೆಸರಿನಲ್ಲಿ ಪುನರ್‍ವಿಂಗಡಿಸಿದ್ದು, ದಂಡಿನಶಿವರ, ಅಮ್ಮಸಂದ್ರ ರೂರಲ್, ಸಂಪಿಗೆಹೊಸಹಳ್ಳಿ, ಸಂಪಿಗೆ, ಹಡವನಹಳ್ಳಿ, ಹುಲ್ಲಿಕೆರೆ ಪಂಚಾಯಿತಿಗಳನ್ನು ಸೇರಿಸಲಾಗಿದ್ದು, ಮಾಯಸಂದ್ರ ಕ್ಷೇತ್ರ ವ್ಯಾಪ್ತಿಗೆ ಮಾಯಸಂದ್ರ, ಸೊರವನಹಳ್ಳಿ, ಭೈತರ ಹೊಸಹಳ್ಳಿ, ಶೆಟ್ಟಿಗೊಂಡನಹಳ್ಳಿ, ವಡವನಘಟ್ಟ, ಮಂಡಿಚೆಂಡೂರು ಪಂಚಾಯ್ತಿಗಳನ್ನು ಸೇರಿಸಲಾಗಿದೆ.

ಪುನರ್‍ವಿಂಗಡಣೆಯಲ್ಲಿ ಬದಲಾದ ಜಿಪಂ ಕ್ಷೇತ್ರಗಳ ವಿವರ :
ತಾಲೂಕು                                             ಹಾಲಿ ಹೆಸರು                     ಬದಲಾದ ಕ್ಷೇತ್ರ

ತುರುವೇಕೆರೆ                                                  ದಬ್ಬೆಘಟ್ಟ                             ಬೆನಕನಕೆರೆ
                                                           ದಂಡಿನಶಿವರ                             ಆದಿತ್ಯಪಟ್ಟಣ
ಕುಣಿಗಲ್                                                    ಹುತ್ರಿದುರ್ಗ                               ಇಪ್ಪಾಡಿ
                                                             ಎಡೆಯೂರು                            ಬೀರಗಾನಹಳ್ಳಿ
ಗುಬ್ಬಿ                                                           ಕಡಬ                                  ಕುನ್ನಾಲ

ಹೊಸ ಕ್ಷೇತ್ರ ಗಳ ರಚನೆ ಮಾಹಿತಿ

ತಾಲೂಕು                               ಹಾಲಿ + ಹೆಚ್ಚುವರಿ ಕ್ಷೇತ್ರಗಳು

ತುಮಕೂರು                             8 + 1 (ನಾಗವಲ್ಲಿ)
ಕುಣಿಗಲ್                                5 + 1 (ಸಂತೆಮಾವತ್ತೂರು)
ಗುಬ್ಬಿ                                    7 + 0 ಹೊಸಕ್ಷೇತ್ರವಿಲ್ಲ
ಕೊರಟಗೆರೆ                              4 + 1 (ಬೊಮ್ಮಲದೇವಿಪುರ)
ತುರುವೇಕೆರೆ                             4 + 1 (ಮುನಿಯೂರು )

ಜಿಪಂ ಪುನರ್ ವಿಂಗಡಣೆ ; ಅಧಿಸೂಚನೆ ಬಾಕಿ

     ಮೇಲೆ ತುಮಕೂರು, ಗುಬ್ಬಿ, ಕೊರಟಗೆರೆ, ತುರುವೇಕೆರೆ ಹಾಗೂ ಕುಣಿಗಲ್ ತಾಲೂಕಿನಲ್ಲಿ ಹೊಸದಾಗಿ ಪುನರ್‍ವಿಂಗಡೆಯಾದ ಜಿಪಂ ಕ್ಷೇತ್ರಗಳ ಮಾಹಿತಿ ನೀಡಲಾಗಿತ್ತು. ಇಲ್ಲಿ ಚಿಕ್ಕನಾಯಕನಳ್ಳಿ, ಶಿರಾ, ತಿಪಟೂರು, ಮಧುಗಿರಿ, ಪಾವಗಡ ತಾಲೂಕುಗಳಿಗೆ ಸಂಬಂಧಿಸಿದಂತೆ ಜಿಪಂ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿ ಜಿಲ್ಲಾಡಳಿತ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಮಾಹಿತಿಯನ್ನು ನೀಡಲಾಗಿದೆ.

ಚಿಕ್ಕನಾಯಕನಹಳ್ಳಿ

ಹುಳಿಯಾರು ಜಿಪಂ ರದ್ದು, ಬೆಳಗುಲಿ ಹೊಸ ಕ್ಷೇತ್ರ ರಚನೆ

      ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹಾಲಿ ಇದ್ದ ಹುಳಿಯಾರು ಜಿಪಂ ರದ್ದುಪಡಿಸಿ ಮತ್ತೊಂದು ಹೊಸ ಕ್ಷೇತ್ರ ರೂಪಿಸಿ ತಾಲೂಕಿಗೆ ಮತ್ತೆ 5 ಕ್ಷೇತ್ರಗಳನ್ನು ಪುನರ್‍ವಿಂಗಡಿಸಲಾಗಿದೆ. ಹೊಸದಾಗಿ ಬೆಳಗುಲಿ ಕ್ಷೇತ್ರ ರಚಿಸಿ ಅದರ ವ್ಯಾಪ್ತಿಗೆ ಯಳನಡು, ಕೋರೆಗೆರೆ, ತಿಮ್ಲಾಪುರ, ದೊಡ್ಡಬಿದರೆ, ಬರಗೂರು, ಬೆಳಗುಲಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಲಾಗಿದೆ. ಹೊಯ್ಸಳಕಟ್ಟೆ ಕ್ಷೇತ್ರವನ್ನು ಕೆಂಕೆರೆ ಕ್ಷೇತ್ರವಾಗಿ ಹೆಸರಿಸಿ ಪುನರ್‍ವಿಂಗಡಿಸಿದ್ದು, ಇದರ ವ್ಯಾಪ್ತಿಗೆ ದಸೂಡಿ, ಹೊಯ್ಸಳಕಟ್ಟೆ, ಗಾಣದಾಳು, ಕೆಂಕೆರೆ, ಬರಕನಾಳು ಪಂಚಾಯ್ತಿಯನ್ನು ಸೇರಿಸಲಾಗಿದೆ. ಕಂದಿಕೆರೆ ಕ್ಷೇತ್ರವನ್ನು ತಿಮ್ಮನಹಳ್ಳಿ ಎಂದು ಹೆಸರಿಸಿ ಪುನರ್‍ವಿಂಗಡಿಸಿದ್ದು, ಇದರ ವ್ಯಾಪ್ತಿಗೆ ಕಂದಿಕೆರೆ, ತೀರ್ಥಪುರ, ಮುದ್ದೇನಹಳ್ಳಿ, ರಾಮನಹಳ್ಳಿ, ತಿಮ್ಮನಹಳ್ಳಿ ಪಂಚಾಯ್ತಿಯನ್ನು ಸೇರಿಸಲಾಗಿದೆ. ಹಂದನಕೆರೆ ಕ್ಷೇತ್ರ ವ್ಯಾಪ್ತಿಗೆ ದೊಡ್ಡೇಣೆಗೆರೆ, ಮತೀಘಟ್ಟ, ಚೌಳಕೆರೆ, ಹಂದನಕೆರೆ, ಮಲ್ಲಿಗೆರೆ ಪಂಚಾಯ್ತಿಯನ್ನು ಸೇರಿಸಿದ್ದು, ಶೆಟ್ಟಿಕೆರೆ ಕ್ಷೇತ್ರ ವ್ಯಾಪ್ತಿಗೆ ಶೆಟ್ಟಿಕೆರೆ, ಕುಪ್ಪೂರು, ದುಗಡೀಹಳ್ಳಿ, ಜಯಚಾಮರಾಜಪುರ, ಗೋಡೆಕೆರೆ, ಹೊನ್ನೆಬಾಗಿ ಪಂಚಾಯಿತಿಯನ್ನು ಸೇರಿಸಲಾಗಿದೆ.

ತಿಪಟೂರು ತಾಲೂಕಿನಲ್ಲೂ ಯಾವುದೇ ಹೊಸ ಕ್ಷೇತ್ರವಿಲ್ಲ :

       ತಿಪಟೂರು ತಾಲೂಕಿನಲ್ಲಿ 5 ಜಿಪಂ ಕ್ಷೇತ್ರಗಳನ್ನು ಕೆಲವು ಹೆಸರು ಬದಲಾಯಿಸಿ ಪುನರ್‍ವಿಂಗಡಿಸಿರುವುದನ್ನು ಬಿಟ್ಟರೆ ಐದು ಕ್ಷೇತ್ರಗಳಷ್ಟನ್ನು ಪೂರಾ ಉಳಿಸಿದ್ದು, ಹೊನ್ನವಳ್ಳಿ ಕ್ಷೇತ್ರ ವ್ಯಾಪ್ತಿಗೆ ಸಾರ್ಥವಳ್ಳಿ, ಗಡಿಗೊಂಡನಹಳ್ಳಿ, ಹೊನ್ನವಳ್ಳಿ, ಗ್ವಾರಘಟ್ಟ, ಮತ್ತೀಹಳ್ಳಿ ಪಂಚಾಯ್ತಿಯನ್ನು ಸೇರಿಸಲಾಗಿದೆ. ಹುಚ್ಚಗೊಂಡನಹಳ್ಳಿ ಕ್ಷೇತ್ರವನ್ನು ಹಾಲ್ಕುರಿಕೆ ಎಂದು ಹೆಸರಿಸಿ ಬಳವನೆರಲು, ಹಾಲ್ಕುರಿಕೆ, ಹುಚ್ಚಗೊಂಡನಹಳ್ಳಿ, ಮಣಕೀಕೆರೆ ಪಂಚಾಯ್ತಿಗಳನ್ನು ಕ್ಷೇತ್ರವ್ಯಾಪ್ತಿಗೆ ತರಲಾಗಿದೆ. ಕಿಬ್ಬನಹಳ್ಳಿ ಕ್ಷೇತ್ರಕ್ಕೆ ಕುಪ್ಪಾಳು, ಕರಡಿ, ಬಿಳಿಗೆರೆ, ಅರಳಗುಪ್ಪೆ, ಹಿಂಡಸ್ಕೆರೆ ಪಂಚಾಯ್ತಿಯನ್ನು ಅಡಕಮಾಡಿದ್ದರೆ, ರಂಗಾಪುರ ಕ್ಷೇತ್ರವನ್ನು ಈಚನೂರು ಎಂದು ಹೆಸರಿಸಿ ಗುರುಗದಹಳ್ಳಿ, ತಡಸೂರು, ರಂಗಾಪುರ, ದಸರೀಘಟ್ಟ, ನಾಗರಘಟ್ಟ, ಈಚನೂರು ಪಂಚಾಯ್ತಿಯನ್ನು ಸೇರಿಸಲಾಗಿದೆ. ನೊಣವಿನ ಕೆರೆ ಕ್ಷೇತ್ರ ವ್ಯಾಪ್ತಿಗೆ, ನೆಲ್ಲಿಕೆರೆ, ನೊಣವಿನಕೆರೆ, ಹುಣಸೆಘಟ್ಟ, ಮಸವನಘಟ್ಟ, ಬಜಗೂರು, ಗುಂಗುರುಮಳೆ ಪಂಚಾಯ್ತಿಯನ್ನು ಸೇರಿಸಲಾಗಿದೆ.

ಶಿರಾ ತಾಲೂಕಿಗೆ ಬೇವಿನಕೆರೆ ಹೊಸ ಕ್ಷೇತ್ರ ಸೇರ್ಪಡೆ :

      ಶಿರಾ ತಾಲೂಕಿನಲ್ಲಿ 7 ಜಿಪಂಕ್ಷೇತ್ರಗಳೊಂದಿಗೆ ಬೇವಿನಕೆರೆ ಹೊಸ ಜಿಪಂ ಕ್ಷೇತ್ರವನ್ನು ಸೇರಿಸಿ 8ಕ್ಕೇರಿಸಲಾಗಿದ್ದು, ಗೌಡಗೆರೆ, ಬೇವಿನಹಳ್ಳಿ, ಹುಣಸೇಹಳ್ಳಿ, ಚಂಗಾವರ ಹೊಸರು ಗ್ರಾಮ ಪಂಚಾಯ್ತಿಗಳನ್ನು ಹೊಸ ಕ್ಷೇತ್ರಕ್ಕೆ ಅಡಕಗೊಳಿಸಲಾಗಿದೆ. ಉಳಿದಂತೆ ಹುಲಿಕುಂಟೆ ಕ್ಷೇತ್ರವಿದ್ದುದನ್ನು ತಡಕಲೂರು ಎಂದು ಬದಲಾಯಿಸಿ ತಡಕಲೂರು, ದೊಡ್ಡಬಾಣಗೆರೆ, ದೊಡ್ಡಹುಲಿಕುಂಟೆ, ದ್ವಾರನಕುಂಟೆ, ಹೊಸ ಹಳ್ಳಿ ಗ್ರಾಮ ಪಂಚಾಯ್ತಿಗಳನ್ನು ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ನಾದೂರು ಜಿಪಂ ಕ್ಷೇತ್ರ ವ್ಯಾಪ್ತಿಗೆ ನಾದೂರು, ಬರಗೂರು, ಹಂದಿಕುಂಟೆ, ಹೆಂದೊರೆ, ಮೇಲುಕುಂಟೆ ಗ್ರಾಮ ಪಂಚಾಯಿತಿಗಳನ್ನು ತರಲಾಗಿದ್ದು, ತಾವರೆಕೆರೆ ಜಿಪಂ ಕ್ಷೇತ್ರ ವ್ಯಾಪ್ತಿಗೆ ತಾವರೆಕೆರೆ, ಲಕ್ಷ್ಮೀಸಾಗರ, ಬಂದಕುಂಟೆ, ಯಲಿಯೂರು, ಭೂವನಹಳ್ಳಿ ಪಂಚಾಯ್ತಿಗಳನ್ನು ಕ್ಷೇತ್ರ ವ್ಯಾಪ್ತಿಗೆ ಒಳಪಡಿಸಲಾಗಿದೆ.

      ಮದಲೂರು ಜಿಪಂ ಕ್ಷೇತ್ರ ವ್ಯಾಪ್ತಿಗೆ ಮದಲೂರು, ಹೊನ್ನಗೊಂಡನಹಳ್ಳಿ, ಕೊಟ್ಟ, ಮಾಗೋಡು ರತ್ನಸಂದ್ರ ಪಂಚಾಯ್ತಿಯನ್ನು ತಂದರೆ, ಚಿಕ್ಕನಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಗೆ ಚಿಕ್ಕನಹಳ್ಳಿ, ಹಾಲೇನಹಳ್ಳಿ, ತಾಳಗುಂದ, ಭೂಪಸಂದ್ರ, ತರೂರು, ಚಿನ್ನೇನಹಳ್ಳಿ ಗ್ರಾಮಪಂಚಾಯ್ತಿಗಳನ್ನು ಅಡಕಮಾಡಲಾಗಿದೆ. ಕಳ್ಳಂಬೆಳ್ಳ ಕ್ಷೇತ್ರ ವ್ಯಾಪ್ತಿಗೆ ಕಳ್ಳಂಬೆಳ್ಳ, ಯಲದಬಾಗಿ, ಗೋಪಾಲದೇವರಹಳ್ಳಿ, ದೊಡ್ಡ ಅಗ್ರಹಾರ, ಸೀಬಿ, ಸೀಬಿ ಅಗ್ರಹಾರ ಪಂಚಾಯ್ತಿಗಳನ್ನು ಅಡಕಗೊಳಿಸಿದ್ದರೆ, ಬುಕ್ಕಾಪಟ್ಟಣ ಕ್ಷೇತ್ರ ವ್ಯಾಪ್ತಿಗೆ ಬುಕ್ಕಾಪಟ್ಟಣ, ಕುರುಬರಹಳ್ಳಿ, ರಾಮಲಿಂಗಾಪುರ, ಹುಯಿಲ್‍ದೊರೆ, ನೇರಳಗುಡ್ಡ ಪಂಚಾಯ್ತಿಯನ್ನು ತರಲಾಗಿದೆ.

ಮಧುಗಿರಿಯಲ್ಲೂ ಬಡವನಹಳ್ಳಿ ಹೊಸ ಕ್ಷೇತ್ರ ಸೇರ್ಪಡೆ :

      ಮಧುಗಿರಿ ತಾಲೂಕಿನಲ್ಲಿದ್ದ 6 ಕ್ಷೇತ್ರದ ಜೊತೆಗೆ ಹೊಸದಾಗಿ ಬಡವನಹಳ್ಳಿ ಕ್ಷೇತ್ರ ಸೇರ್ಪಡೆಗೊಳಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬಡವನಹಳ್ಳಿ ಕ್ಷೇತ್ರ ವ್ಯಾಪ್ತಿಗೆ ಬಡವನಹಳ್ಳಿ, ಚಿನಕವಜ್ರ, ಬಿಜವರ, ದೊಡ್ಡವೀರಗೊಂಡನಹಳ್ಳಿ, ಕವಣದಾಲ, ರಂಗಾಪುರ ಗ್ರಾಮ ಪಂಚಾಯ್ತಿಗಳನ್ನು ಸೇರಿಸಲಾಗಿದೆ. ದೊಡ್ಡೇರಿ ಕ್ಷೇತ್ರವನ್ನು ತೆಗೆದು, ಕೊಟಗಾರ್ಲಹಳ್ಳಿ ಕ್ಷೇತ್ರವಾಗಿ ಪುನರ್‍ವಿಂಗಡಿಸಿದ್ದು, ಇದರ ವ್ಯಾಪ್ತಿಗೆ ಕೊಟಗಾರ್ಲಹಳ್ಳಿ, ಸಿದ್ದಾಪುರ, ದಬ್ಬೇಘಟ್ಟ, ಮರವೇಕೆರೆ, ಗಂಜಲಗುಂಟೆ ಪಂಚಾಯ್ತಿಗಳನ್ನು ಅಡಕಗೊಳಿಸಲಾಗಿದೆ. ಹೊಸಕೆರೆ ಕ್ಷೇತ್ರ ವ್ಯಾಪ್ತಿಗೆ ಹೊಸಕೆರೆ, ಸಜ್ಜೆಹೊಸಹಳ್ಳಿ, ಚಂದ್ರಗಿರಿ, ನೇರಳೆಕೆರೆ, ರಂಟವಾಳಲು, ಬ್ರಹ್ಮಸಮುದ್ರ ಪಂಚಾಯ್ತಿಗಳನ್ನು ಸೇರಿಸಿದ್ದರೆ, ಮಿಡಿಗೇಶಿ ಕ್ಷೇತ್ರವನ್ನು ಗರಣಿ ಎಂದು ಬದಲಾಯಿಸಿ, ಗರಣಿ, ರೆಡ್ಡಿಹಳ್ಳಿ, ಚಿನ್ನೇನಹಳ್ಳಿ, ಮಿಡಿಗೇಶಿ, ಬೇಡತ್ತೂರು ಪಂಚಾಯ್ತಿಗಳನ್ನು ಸೇರಿಸಲಾಗಿದೆ. ಇಟಕದಿಬ್ಬನಹಳ್ಳಿ ಕ್ಷೇತ್ರಕ್ಕೆ ಇಟಕದಿಬ್ಬನಹಳ್ಳಿ, ಚಿಕ್ಕದಾಳವಟ್ಟ, ಸಿಂಗನಹಳ್ಳಿ, ದೊಡ್ಡಯಲ್ಕೂರು, ಮುದ್ದೇನಹಳ್ಳಿ ಪಂಚಾಯ್ತಿಗಳನ್ನು ಸೇರಿಸಿದ್ದು, ಕೊಡಿಗೇನಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಗೆ ಕೊಡಿಗೇನಹಳ್ಳಿ, ಕಲಿದೇವಪುರ, ಕಡಗತ್ತೂರು, ದೊಡ್ಡಮಾಲೂರು, ಚಿಕ್ಕಮಾಲೂರು ಗ್ರಾಪಂಗಳನ್ನು ಅಡಕಗೊಳಿಸಲಾಗಿದೆ. ಪುರವರ ಕ್ಷೇತ್ರವನ್ನು ಬ್ಯಾಲ್ಯ ಎಂದು ಹೆಸರಿಸಿ, ಕ್ಷೇತ್ರ ವ್ಯಾಪ್ತಿಗೆ ಬ್ಯಾಲ್ಯ, ಗೊಂದಿಹಳ್ಳಿ, ಕೋಡ್ಲಾಪುರ, ಕೊಂಡವಾಡಿ, ಪುರವರ, ಕೋಡಗದಾಲ ಪಂಚಾಯ್ತಿಗಳನ್ನು ಸೇರಿಸಲಾಗಿದೆ.

ಪಾವಗಡ ತಾಲೂಕಿನಲ್ಲಿ ಕಾಮನದುರ್ಗ ಹೊಸ ಕ್ಷೇತ್ರ :

      ಪಾವಗಡ ತಾಲೂಕಿನಲ್ಲಿ ಹಾಲಿಇದ್ದ 6 ಕ್ಷೇತ್ರಗಳೊಂದಿಗೆ ಕಾಮನದುರ್ಗ ಹೊಸ ಕ್ಷೇತ್ರ ರಚಿಸಿದ್ದು, ಈ ಕ್ಷೇತ್ರ ವ್ಯಾಪ್ತಿಗೆ ಕಾಮನದುರ್ಗ(ನೀಲಮ್ಮನಹಳ್ಳಿ), ಪೊನ್ನಸಮುದ್ರ, ಬೆಟ್ಟದಕೆಳಗಿನಹಳ್ಳಿ, ಚಿಕ್ಕಹಳ್ಳಿ, ಮರಿದಾಸನಹಳ್ಳಿ, ಬೂದಿಬೆಟ್ಟ ಗ್ರಾಮ ಪಂಚಾಯ್ತಿಗಳನ್ನು ಸೇರಿಸಲಾಗಿದೆ. ಬ್ಯಾಡನೂರು ಕ್ಷೇತ್ರ ವ್ಯಾಪ್ತಿಗೆ ಬ್ಯಾಡನೂರು, ನಲಿಗಾನಹಳ್ಳಿ, ಚನ್ನಕೇಶವಪುರ, ಕನ್ನಮೇಡಿ, ರಾಜವಂತಿ ಪಂಚಾಯಿತಿಗಳನ್ನು ಸೇರಿಸಿದ್ದು, ಕೋಟಗುಡ್ಡ ಕ್ಷೇತ್ರ ವ್ಯಾಪ್ತಿಗೆ ಕೋಟಗುಡ್ಡ, ರಂಗಸಮುದ್ರ, ವದನಕಲ್ಲು, ಸಾಸಲಗುಂಟೆ, ನ್ಯಾಯದಗುಂಟೆ ಪಂಚಾಯ್ತಿಗಳನ್ನು ಅಡಕಗೊಳಿಸಲಾಗಿದೆ. ಮಂಗಳವಾಡ ಕ್ಷೇತ್ರ ವ್ಯಾಪ್ತಿಗೆ, ಮಂಗಳವಾಡ, ಅರಸೀಕೆರೆ, ಕೊಂಡೆತಿಮ್ಮನಹಳ್ಳಿ, ಗುಜ್ಜನಡು ಪಂಚಾಯ್ತಿಗಳನ್ನು ಸೇರಿಸಿದ್ದು, ನಾಗಲಮಡಿಕೆ ಬದಲಾಗಿ ಪಳವಳ್ಳಿ ಎಂದು ಹೆಸರಿಸಿದ ಕ್ಷೇತ್ರದಲ್ಲಿ ನಾಗಲಮಡಿಕೆ, ರಾಪ್ಟೆ, ಪಳವಳ್ಳಿ, ತಿರುಮಣಿ, ವಳ್ಳೂರು ಪಂಚಾಯ್ತಿಗಳನ್ನು ಕ್ಷೇತ್ರ ವ್ಯಾಪ್ತಿಗೆ ಅಡಕಗೊಳಿಸಲಾಗಿದೆ. ವೆಂಕಟಾಪುರ ಕ್ಷೇತ್ರ ವ್ಯಾಪ್ತಿಗೆ ವೆಂಕಟಾಪುರ, ರೊಪ್ಪ, ಕೊಡಮಡಗು, ದೊಮ್ಮತಮರಿ, ವಿರೂಪಸಮುದ್ರ ಪಂಚಾಯಿತಿಗಳನ್ನು ಸೇರಿಸಿದ್ದು, ವೈಎನ್.ಹೊಸಕೋಟೆ ಕ್ಷೇತ್ರ ವ್ಯಾಪ್ತಿಗೆ ವೈ.ಎನ್.ಹೊಸಕೋಟೆ, ಸಿದ್ದಾಪುರ, ಪೋತಗಾನಹಳ್ಳಿ, ಜೋಡಿಹಚ್ಚಮನಹಳ್ಳಿ ಪಂಚಾಯಿತಿಗಳನ್ನು ಸೇರಿಸಲಾಗಿದೆ.

ಪುನರ್‍ವಿಂಗಡಣೆಯಲ್ಲಿ ಬದಲಾದ ಜಿಪಂ ಕ್ಷೇತ್ರಗಳ ವಿವರ

ತಾಲೂಕು             ಹಾಲಿ ಕ್ಷೇತ್ರ            ಬದಲಾದ ಕ್ಷೇತ್ರ
ಪಾವಗಡ             ನಾಗಲಮಡಿಕೆ              ಪಳವಳ್ಳಿ
ಮಧುಗಿರಿ               ದೊಡ್ಡೇರಿ              ಕೊಟಗಾರ್ಲಹಳ್ಳಿ
ಶಿರಾ                  ಹುಲಿಕುಂಟೆ               ತಡಕಲೂರು
ಚಿ.ನಾ.ಹಳ್ಳಿ            ಕಂದಿಕೆರೆ                 ತಿಮ್ಮನಹಳ್ಳಿ
ತಿಪಟೂರು          ಹುಚ್ಚಗೊಂಡನಹಳ್ಳಿ           ಹಾಲ್ಕುರಿಕೆ
                        ರಂಗಾಪುರ               ಈಚನೂರು

ಹೊಸ ಕ್ಷೇತ್ರ ಗಳ ರಚನೆ ಮಾಹಿತಿ

ತಾಲೂಕು                        ಹಾಲಿ + ಹೆಚ್ಚುವರಿ ಕ್ಷೇತ್ರಗಳು
ಪಾವಗಡ                            6 + 1 (ಕಾಮನದುರ್ಗ )
ಶಿರಾ                                 7 + 1 (ಬೇವಿನಕೆರೆ)
ಮಧುಗಿರಿ                             6 + 1 (ಬೇವಿನಹಳ್ಳಿ)
ತಿಪಟೂರು                            7 + 0 (ಹೊಸಕ್ಷೇತ್ರವಿಲ್ಲ)
ಚಿ.ನಾ.ಹಳ್ಳಿ                           4 + 1 (ಬೆಳಗುಲಿ)

 

ಮಾಹಿತಿ: ಎಸ್.ಹರೀಶ್ ಆಚಾರ್ಯ

Recent Articles

spot_img

Related Stories

Share via
Copy link
Powered by Social Snap