ಸರಣಿ ಭೂಕಂಪನಕ್ಕೆ ನಡುಗಿದ ಟರ್ಕಿ …!

ನವದೆಹಲಿ

     ಫೆ.6ರ ಮುಂಜಾನೆ ದಕ್ಷಿಣ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯ ಸುಮಾರು 7.8 ಎಂದು ಯುಎಸ್‌ಜಿಎಸ್ ತಿಳಿಸಿದೆ . ನಂತರದಲ್ಲಿ 6.7 ತೀವ್ರತೆಯ ಮತ್ತೊಂದು ಪ್ರಬಲ ಕಂಪನ ಸಂಭವಿಸಿದ್ದು ಅಪಾರ ಸಾವು ನೋವು ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.

     ಹಾನಿಯ ಪ್ರಮಾಣ ಮತ್ತು ಸಾವಿನ ಸಂಖ್ಯೆ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗಳು ಮತ್ತು ವಿಡಿಯೊಗಳು ಅನೇಕ ಸಾವುನೋವುಗಳನ್ನು ಸೂಚಿಸುತ್ತವೆ. ಭೂಕಂಪದಿಂದಾಗಿ ಅನೇಕ ಕಟ್ಟಡಗಳು ಕುಸಿದಿವೆ ಮತ್ತು ಅನೇಕ ಜನರು ಅವಶೇಷಗಳಲ್ಲಿ ಸಿಲುಕಿರುವ ಭಯವಿದೆ ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap