ತುರುವೇಕೆರೆ :

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಿ.30ರಂದು ತಾಲ್ಲೂಕಿನ ಗ್ರಾಮ ಪಂಚಾಯ್ತಿ ಚುನಾವಣೆಯ ಮತ ಎಣಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ನಯಿಂಉನ್ನಿಸಾ ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. 27 ಗ್ರಾಮ ಪಂಚಾಯಿತಿಗಳಿಗೆ 53 ಟೇಬಲ್ ಹಾಕಲಾಗಿದ್ದು ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 2 ಅಥವಾ 3 ಟೇಬಲ್ ಗಳಲ್ಲಿ ಮತ ಏಣಿಕೆ ಸಿದ್ದತೆ ಮಾಡಲಾಗಿದೆ. ಮತ ಎಣಿಕೆ ಮುಗಿದ ನಂತರ ವಾರ್ಡ್‍ಗಳ ಫಲಿತಾಂಶ ಘೋಷಿಸಲಾಗುವುದು. ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿ ಅಥವಾ ಒಬ್ಬ ಏಜೆಂಟ್‍ಗೆ ಮಾತ್ರ ಅವಕಾಶವಿದ್ದು ಅವರಿಗೆ ತಾಲೂಕು ಕಛೇರಿಯಲ್ಲಿ ಪಾಸ್ ನೀಡಲಾಗುವುದು.
ಪತ್ರಿಕೆಯವರಿಗೆ ಪ್ರತ್ಯೇಕ ಕೊಠಡಿ ಮಾಡಲಿದ್ದು ಫಲಿತಾಂಶದ ಮಾಹಿತಿ ನೀಡಲಾಗುವುದು. ಎಣಿಕೆ ಕೇಂದ್ರ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋ ಬಸ್ತು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








