ತುರುವೇಕೆರೆ :

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲೂಕಿನ ಮತದಾರರು ಶೇ. 61ರಷ್ಟು ಜೆಡಿಎಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ 27 ಗ್ರಾಮ ಪಂಚಾಯಿತಿಯ 400 ಅಭ್ಯರ್ಥಿಗಳಲ್ಲಿ ಸುಮಾರು 245 ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಅಡವನಹಳ್ಳಿ 8, ಅಮ್ಮಸಂದ್ರ 7, ದಂಡಿನಶಿವರ 9, ಹುಲ್ಲೆಕೆರೆ 5, ಕೊಂಡಜ್ಜಿ 9, ಸಂಪಿಗೆ 6, ಸಂಪಿಗೆಹೊಸಳ್ಳಿ 10, ಬಾಣಸಂದ್ರ 10, ಲೋಕಮ್ಮನಹಳ್ಳಿ 8, ಮುನಿಯೂರು 5, ಆನೆಕೆರೆ 14, ಕೊಡಗಿಹಳ್ಳಿ 8, ಮಾದಿಹಳ್ಳಿ 10, ತಾಳಕೆರೆ 9, ದೆಬ್ಬೇಘಟ್ಟ 6, ಅರೇಮಲ್ಲೇನಹಳ್ಳಿ 7, ತಂಡಗ 11, ಮಾವಿನಕೆರೆ 6, ಗೋಣಿತುಮಕೂರು 10, ಮುತ್ತಗನಹಳ್ಳಿ 12, ಮಾಯಸಂದ್ರ 13, ಸೊರವನಹಳ್ಳಿ 11, ವಡವನಘಟ್ಟ 9, ಮಣೆಚೆಂಡೂರು 9, ಶೆಟ್ಟಗೊಂಡನಹಳ್ಳಿ 5 ಸ್ಥಾನಗಳನ್ನು ಪಡೆದಿದ್ದು ಸಿ.ಎಸ್ ಪುರ ಹೋಳಿಯ 7 ಪಂಚಾಯಿತಿ ಜೆಡಿಎಸ್ ಅಧಿಕಾರ ಹಿಡಿಯಲಿದೆ. ಚಂಗಾವಿ 8, ಮಾವನಹಳ್ಳಿ, 8, ಇಡಗೂರು 9, ಸಿ.ಎಸ್.ಪುರ 9, ಹಿಂಡಿಸ್ಕೆರೆ 10, ಕಲ್ಲೂರು 9 ಪಂಚಾಯ್ತಿಗಳಲ್ಲಿ ಅಧಿಕಾರ ಹಿಡಿಯಲಿದ್ದೇವೆ ಎಂದು ಕ್ಷೇತ್ರದ ಮತದಾರಿಗೂ ಕೃತಜ್ಞತೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ಸ್ವಾಮಿ, ರವಿ, ಎಪಿಎಂಸಿ ಅಧ್ಯಕ್ಷ ಮಧು, ಸದಸ್ಯರಾದ ನಾಗರಾಜು, ಮುಖಂಡರಾದ ವೆಂಕಟಾಪುರದ ಯೋಗೀಶ್, ಡಾ.ಚೇತನ್, ರಂಗನಾಥ್, ನರಸೇಗೌಡ, ನರಸಿಂಹಮೂರ್ತಿ, ನಂಜೇಗೌಡ, ಗಂಗಣ್ಣ, ಬಸವರಾಜು ಬಡಗರಹಳ್ಳಿ ತ್ಯಾಗರಾಜು ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








