ತುರುವೇಕೆರೆ :

ತಾಲೂಕಿನ ದಬ್ಬೇಘಟ್ಟ ಹೋಬಳಿಯ ಸಾದರಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇರಿಸಿದ್ದ ಬೋನಿಗೆ ಚಿರತೆಯು ಗುರುವಾರ ಸೆರೆ ಸಿಕ್ಕಿದೆ.
ಕೆಲ ದಿನಗಳ ಹಿಂದೆ ಸಾದರಹಳ್ಳಿ ಗ್ರಾಮದಲ್ಲಿ ಸಾವನ್ನಪ್ಪಿದ ಚಿರತೆಯ ಮೃತ ದೇಹ ದೊರೆತಿತ್ತು. ಸುಮಾರು ದಿನಗಳಿಂದ ಗ್ರಾಮಗಳ ಸುತಾ ್ತಮುತ್ತಾ ಚಿರತೆ ಹಾವಳಿ ಹೆಚ್ಚಿದ್ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಬೋನನ್ನು ಇರಿಸಿದ್ದರು.. ಚಿರತೆಯು ಗುರುವಾರ ಸಂಜೆ ಬೋನಿನಲ್ಲಿ ಸೆರೆಯಾಗಿದ್ದು. ವಿಷಯ ತಿಳಿದ ಗ್ರಾಮಸ್ಥರು ತೆರಳಿ ವೀಕ್ಷಿಸಿದರು. ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಳಿ ಚಿರತೆಯನ್ನು ಕಾಡಿಗೆ ಬಿಡಲು ಸಾಗಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








