ತುರುವೇಕೆರೆ : ಒಳ ಚರಂಡಿ ಕಾಮಗಾರಿಗೆ ಚಾಲನೆ

 ತುರುವೇಕೆರೆ :

      ಪಟ್ಟಣದ ಒಳ ಚರಂಡಿಯನ್ನು 11 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.

      ಪಟ್ಟಣದ ಒಳಚರಂಡಿ ಸಂಸ್ಕರಣ ಘಟಕದಿಂದ ತ್ಯಾಜ್ಯ ನೀರನ್ನು ಶಿಂಷಾ ಕಾಲುವೆಗೆ ಬಿಡಲು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿನ ಪೈಪ್ ಲೈನ್ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

      ಪಟ್ಟಣ ಬೆಳದಂತೆ ಜನರಿಗೆ ಒಳ ಚರಂಡಿ ವ್ಯವಸ್ಥೆ ಕಲ್ಪಿಸಬೇಕಿದೆ. ಈಗಾಗಲೇ ನಿರ್ಮಿಸಿರುವ ಒಳಚರಂಡಿ ಸಂಪೂರ್ಣ ಹಾಳಾಗಿದ್ದು ಮತ್ತೆ ನವೀಕರಿಸುವಂತೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಾಗಿ ನಗರಾಬಿವೃದ್ದಿ ಸಚಿವರು ಆಶ್ವಾಸನೆ ನೀಡಿದ್ದು ಮುಂದಿನ ಬಜೆಟ್ ಅಧಿವೇಶನದಲ್ಲೂ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

      ಒಳ ಚರಂಡಿ ಸಂಸ್ಕರಣ ಘಟಕದ ತ್ಯಾಜ್ಯ ನೀರನ್ನು ಕಾಲುವೆ ಮೂಲಕ ಹರಿಸಲು ಮುಂದಾಗಿದ್ದು ಈ ನೀರು ಹರಿಯುವಿಕೆಯಿಂದ ಅಕ್ಕ ಪಕ್ಕದ ರೈತರಿಗೆ ತೊಂದರೆಯಾಗುತ್ತದೆ ಎಂಬ ರೈತರ ಮನವಿ ಮೇರೆಗೆ ಭೂಮಿಯೊಳಗೆ ಪೈಪ್ ಲೈನ್ ಮೂಲಕ ಶಿಂಷಾ ಕಾಲುವೆಗೆ ಬಿಡಲಾಗುವುದು ಎಂದರು.

      ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್ ಕುಮಾರ್, ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ಚಿದಾನಂದ್, ಯಜಮಾನ್‍ಮಹೇಶ್, ಎನ್.ಆರ್.ಸುರೇಶ್, ಪ್ರಭಾಕರ್, ಆಶಾ ರಾಜಶೇಖರ್, ಸ್ವಪ್ನನಟೇಶ್, ರವಿಕುಮಾರ್, ಮುಖ್ಯಾಧಿಕಾರಿ ಮಂಜುಳಾದೇವಿ, ಒಳಚರಂಡಿ ಮಂಡಳಿ ಎಇಇ ಸಿದ್ದನಂಜಯ್ಯ, ಗುತ್ತಿಗೆದಾರ ರಘುಮೂರ್ತಿ, ಮಾದಿಹಳ್ಳಿ ಚಂದ್ರೇಗೌಡ, ಮುಖಂಡರಾದ ನಾಗಲಾಪುರ ಮಂಜಣ್ಣ, ಕಾಳಂಜೀಹಳ್ಳಿ ಸೋಮು, ಸುನಿಲ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link