ತುರುವೇಕೆರೆ :
ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೀರಗುಂದ ಕೆರೆಯ ನೀರನ್ನು ಕೆಲವರು ಅಕ್ರಮವಾಗಿ ದೂರದ ಜಮೀನಿಗಳಿಗೆ ತೆಗೆದುಕೊಂಡು ಹೋಗುತ್ತಿರುವ ವ್ಯಕ್ತಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನೂರಾರು ರೈತರು ಒತ್ತಾಯಿಸಿದರು.
ತಾಲೂಕಿನ ನೀರಗುಂದ ಗ್ರಾಮದಲ್ಲಿ ಬುಧವಾರ ನೀರಗುಂದ ಗ್ರಾಮ ಹಾಗೂ ಅಕ್ಕಪಕ್ಕದ ರೈತರು ಸಭೆಯ ನಂತರ ಕೆರೆಯ ಮುಂಭಾಗದಲ್ಲಿ ಪ್ರತಿಭಟನೆ ನೆಡೆಸಿ ಸೇರಿ ಸರ್ಕಾರಕ್ಕೆ ಒತ್ತಾಯಿಸಿದರು.
ಗ್ರಾಮ ಪಂಚಾಯತಿ ಸದಸ್ಯ ಅಲ್ಲಪ್ಪ ಮಾತನಾಡಿ ರೈತರುಗಳ ಹೋರಾಟದಿಂದ 2019ರಲ್ಲಿ ಹೇಮಾವತಿ ಕುಡಿಯುವ ನೀರಿನ ಯೋಜನೆಯಡಿ ನೀರಗುಂದ ಕೆರೆ ಅರ್ದ ತುಂಬಿಸಲಾಗಿದೆ. ನಂತರ ರೈತರು ಸಭೆ ಸೇರಿ ಬೇಸಿಗೆಯಲ್ಲಿ ದನ ಕರುಗಳುಗಳಿಗೆ ಕುಡಿಯುವ ನೀರಿನ ಹಿತದೃಷ್ಟಿಯಿಂದ ವ್ಯವಸಾಯಕ್ಕೆ ಬಳಸದಂತೆ ಸ್ವಯಂ ಪ್ರೇರಣೆಯಿಂದ ಕೆರೆಯ ತೂಬನ್ನು ಮುಚ್ಚಲಾಗಿದೆ. ಕೆರೆಯ ನೀರಿನಿಂದ ಅಜ್ಜೇನಹಳ್ಳಿ, ಎನ್.ಮಾವಿನಹಳ್ಳಿ, ಲೋಕಮ್ಮನಹಳ್ಳಿ, ಹರಿದಾಸನಹಳ್ಳಿ, ಕಾಳಪ್ಪನಪಾಳ್ಯ, ಎನ್.ಗಂಗನಹಳ್ಳಿ, ಎನ್.ಮಂಚೇನಹಳ್ಳಿ ಗ್ರಾಮಗಳ ಬೋರ್‍ವೆಲ್‍ಗಳ ಅಂತರ್ ಜಲಮಟ್ಟ ಹೆಚ್ಚಾಗಲಿದ್ದು ರೈತರಿಗೆ ಅನುಕೂಲವಾಗಲಿದೆ ಎಂದರು.
ಆದರೆ ಇತ್ತಿಚೀಗೆ ರಾಜಕೀಯ ಪ್ರಭಾವಿಯೊಬ್ಬ ಕೆರೆಯ ಹಿಂಬಾಗದಲ್ಲಿ ಜಮೀನು ಖರೀದಿ ಮಾಡಿಕೊಂಡು ಬೊರ್‍ವೆಲ್ ಕೊರಸಿ ಅಲ್ಲಿಂದ 4 ಪೈಪ್‍ಲೈನ್ ಮೂಲಕ ಸುಮಾರು 5 ಕಿ.ಮಿ ದೂರದ ಕೋಳಘಟ್ಟ ಕಡೆಗೆ ನೀರನ್ನು ತೆಗೆದುಕೊಂಡು ಹೋಗುತ್ತಿರುವುದು ಸ್ಥಳಿಯ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ತಮ್ಮ ಜಮೀನಲ್ಲಿ ಬೋರ್‍ವೆಲ್ ನೀರನ್ನು ಅದೇ ಜಮೀನಿಲ್ಲಿ ಬಳಸಲು ಯಾರ ರೈತರ ವಿರೋಧವಿಲ್ಲ. ಆದರೆ ಇಲ್ಲಿನ ನೀರನ್ನು ಬೇರೆ ಕಡೆ ಸಾಗಿಸುವುದರ ಉದ್ದೇಶ ಏನು?. ಕಷ್ಟ ಪಟ್ಟು ತುಂಬಿಸಿದ್ದ ಕೆರೆಯ ನೀರನ್ನು ಒಬ್ಬನ ಸ್ವರ್ಥಕ್ಕಾಗಿ ಬಳಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬೇಸಿಗೆಯಲ್ಲಿ ಈಗಾಗಲೇ ದಿನ ನಿತ್ಯ ಕೆರೆಯ ನೀರು ಕಡಿಮೆಯಾಗುತ್ತಿದೆ ಅದ್ದರಿಂದ ಸರ್ಕಾರ ಈ ಬಾಗದ ರೈತರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಕಂದಾಯ ಇಲಾಖೆ ಹಾಗೂ ಹೇಮಾವತಿ ಇಲಾಖೆಗಳಿಗೂ ರೈತರು ದೂರ ನೀಡಿದ್ಧಾರೆ. ಆದರೆ ಪ್ರಭಾವಿ ವ್ಯಕ್ತಿ ಕೆಲವು ರೈತರ ಮೇಲೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿ ರಾಜಕೀಯ ಪ್ರಭಾವ ಹಣ ಬಲ ತೋರಿಸಿ ರೈತರನ್ನು ಬೆದರಿಸುವ ಕೆಲಸ ನೆಡೆಯುತ್ತಿದೆ. ಅದ್ದರಿಂದ ರೈತರಿಗೆ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸಿ ಕೊಡಬೇಕು ಎಂದು ಸಂಬಂದಪಟ್ಟವರಿಗೆ ರೈತರು ಇಗಾಗಲೇ ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರೇಣುಕಪ್ಪ.ಎಂ.ಬಿ., ವಿನಯ್‍ಪ್ರಸಾದ್, ಎನ್.ಬಿ.ರಮೇಶ್, ಕಂಚಿರಾಯಸ್ವಾಮಿ, ಚಿಕ್ಕಣ್ಣ, ನಟರಾಜು, ಎನ್.ಸಿ.ಶಶಿಧರ, ಮಹಾಲಿಂಗಯ್ಯ, ಶಂಕರಪ್ಪ, ಕಂಚಿರಾಯಪ್ಪ, ಫ್ರಭಾಕರ್, ದಯಾನಂದ್, ದಕ್ಷಣಮೂರ್ತಿ, ಪ್ರಸಾದ್, ಬಸವರಾಜು, ಗಿರಿಯಪ್ಪ, ಮೋಹನ್ ಕುಮಾರ್, ಕೆ.ರಾಜಣ್ಣ, ಲಕ್ಷ್ಮಮ್ಮ, ಪಾಲಾಕ್ಷಮ್ಮ, ಗಾಯತ್ರಮ್ಮ ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು ಈ ಸಂದರ್ಭದಲ್ಲಿ ಪಾಲ್ಗೋಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ