ತುರುವೇಕೆರೆ : ಪಿ.ಡಿ.ಓ. ವರ್ಗಾವಣೆಗೆ ಸಾರ್ವಜನಿಕರ ಆಕ್ರೋಶ

ತುರುವೇಕೆರೆ :

      ತಾಲ್ಲೂಕು ಪಂಚಾಯಿತ್ ಆವರಣದಲ್ಲಿ ಆನೆಕೆರೆ ಪಿ.ಡಿ.ಓ. ರವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದಿಗ್ಬಂದನ ವಿಧಿಸಿದ ಆನೆಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಸದಸ್ಯರುಗಳು ಆನೆಕೆರೆ ಗ್ರಾಮ ಪಂಚಾಯ್ತಿ ಸರಿಯಾಗಿ ಅಭಿವೃದ್ಧಿ ಕಾರ್ಯಗಳು ನೆಡೆಯುತ್ತಿಲ್ಲ ರೈತರಿಗೆ ಯಾವುದೆ ಕೆಲಸಗಳು 3 ತಿಂಗಳಿಂದ ನೆಡೆದಿಲ್ಲ ಆದ್ದರಿಂದ ನಾವುಗಳು ಮನನೊಂದು ಪ್ರತಿಭಟನೆ ನೆಡೆಸಿದ್ದೇವೆ ಬೇಕಾದವರಿಗೆ ಏನ್.ಎಂ.ಆರ್. ತೆಗೆದುಕೊಡುವುದು ಬೇರೆಯವರದನ್ನು ಕ್ಯಾನ್ಸಲ್ ಮಾಡುವುದು ಇಂತಹ ಕೆಲಸಗಳನ್ನು ಮಾಡುತ್ತಿರುವ ಪಿ.ಡಿ.ಓ. ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು ಈತ ಆನೆಕೆರೆ ಹಾಗೂ ಹುಲ್ಲೇಕೆರೆ ಎರಡು ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸರಿಯಾಗಿ ಸಧಸ್ಯರ ಹಾಗೂ ಸಾರ್ವಜನಿಕರ ಸಂಪರ್ಕಕ್ಕೆ ಸಿಗುತ್ತಿಲ್ಲಾ ಮತ್ತು ಸಧಸ್ಯರ ಮಾತಿಗೂ ಕಿಮ್ಮತ್ತಿಲ್ಲಾ ಆದ್ದರಿಂದ ನಮ್ಮ ತಾಲ್ಲೂಕಿಗೆ ಇಂತಹ ಅಧಿಕಾರಿ ನಮಗೆ ಬೇಡ ನಮಗೆ ಅಭಿವೃದ್ಧಿ ಬೇಕು ಈತನನ್ನು ಕೂಡಲೆ ವಜಾಗೊಳಿಸಿ ಎಂದು ಸಿ. ಇ. ಓ. ಮತ್ತು ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈತನ ವಿರುದ್ಧ ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲು ನಾವು ತಯಾರಿದ್ದೇವೆ ಇವರನ್ನು ಕೂಡಲೆ ವಜಾ ಮಾಡಬೇಕು ಎಂದು ಆಗ್ರಹಿಸಿದರು.

     ಈ ಸಂದರ್ಭದಲ್ಲಿ ಆನೆಕೆರೆ ಗ್ರಾಮಪಂಚಾಯ್ತಿ ಅಧ್ಯಕ್ಷರು, ಉಪಪಾಧ್ಯಕ್ಷರು, ಸದಸ್ಯರುಗಳು, ಗ್ರಾ.ಪಂ. ವ್ಯಾಪ್ತಿಯ ಕೆಲವು ಗ್ರಾಮಸ್ಥರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

Recent Articles

spot_img

Related Stories

Share via
Copy link