ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಮುಗಿಬಿದ್ದ ಜನ

ತುರುವೇಕೆರೆ :  

ಪೊಟೊ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನ ಟೆಸ್ಟ್ ಮಾಡಿಸಲು ಮುಗಿ ಬಿದ್ದ ಜನತೆ.

      ತಾಲ್ಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದ್ವಿಮುಖವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಸಾರ್ವಜನಿಕ ಆಸ್ಪತ್ರೆಗೆ ಇದೀಗ ಮುಗಿಬೀಳುವವರ ಜನ ಸಂಖ್ಯೆ ಹೆಚ್ಚುತ್ತಿದೆ.

      ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೆ ಇದೆ. ತಾಲ್ಲೂಕು ಆಡಳಿತ ಯಾವುದೆ ಮುಂಜಾಗ್ರತಾ ಕ್ರಮ ಕೈಗೊಂಡರು ಸೋಂಕಿತರ ಪ್ರಮಾಣ ತಹಬದಿಗೆ ತರಲು ಸಾಧ್ಯವಾಗುತ್ತಿಲ್ಲ. ಕಾರಣ ಜನಸಾಮಾನ್ಯರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸದಿರುವುದೆ ಮುಖ್ಯ ಕಾರಣ. ಕೇವಲ ನೆಪಮಾತ್ರಕ್ಕೆ ಮಾಸ್ಕ್ ಧರಿಸುವುದನ್ನು ಬಿಟ್ಟರೆ ವ್ಯಕ್ತಿಗತ ಅಂತರ ಕಿಂಚಿತ್ತೂ ಪಾಲಿಸುತ್ತಿಲ್ಲ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಲು ಜನರು ಪ್ರತಿದಿನ ನೂರಾರು ಜನ ನಾಮುಂದು ತಾಮುಂದು ಎಂಬಂತೆ ಸರ್ಕಾರದ ಮಾರ್ಗ ಸೂಚಿಗಳನ್ನು ಗಾಳಿಗೆ ತೊರಿ ಮುಗಿ ಬೀಳುತ್ತಿದ್ದಾರೆ. ಕೋವಿಡ್ ಟೆಸ್ಟ್ ಮಾಡಿಸಲು ಬರುವವರಿಗೆ ಬ್ಯಾರಿಕೇಡ್‍ನಂತ ಸರಿದಿಯಲ್ಲಿ ಹೋಗಲು ಯಾವುದೇ ಕ್ರಮ ಆಸ್ಪತ್ರೆಯಲ್ಲಿ ಕೈಗೊಂಡಿಲ್ಲವಾದ್ದರಿಂದ ಜನರು ಒಮ್ಮೆಲೆ ಗುಂಪುಗೂಡುವುದರಿಂದ ವೈದ್ಯರಿಗೆ ತೊಂದರೆ ಯಾಗುವುದಲ್ಲದೆ. ಜನರಿಗೂ ತೊಂದರೆ ತಪ್ಪಿದ್ದಲ್ಲ. ಸರದಿಯಲ್ಲಿದ್ದವರಿಗೆ ಕೊರೋನಾ ಯಾರಿಗಿದೆ ಎಂಬುದು ಪರೀಕ್ಷಿಸಿದ ನಂತರವೆ ತಿಳಿಯುವುದರಿಂದ ಒಂದು ವೇಳೆ ಕೊರೋನಾ ಸೋಂಕಿದ್ದವರು ಗುಂಪಿನಲ್ಲಿರುವವರಿಗೆಲ್ಲಾ ಹಬ್ಬಿಸುವ ಸಾಧ್ಯತೆಯಿದೆ. ನನ್ನ ಅಜ್ಜಿಗೆ ಲಸಿಕೆ ಹಾಕಿಸಲು ಬಂದ ಸಂದರ್ಭದಲ್ಲಿ ಕೆಲವೇ ಮಂದಿಗೆ ಲಸಿಕೆ ಸಿಗಲಿದ್ದು. ಅದನ್ನು ಪಡೆಯಲು ಜನ ದುಂಬಾಲು ಬೀಳುತ್ತಿದ್ದು. ಲಸಿಕೆ ಹಾಕಿಸಲು ಸಾಧ್ಯವಾಗಲಿಲ್ಲ ಆಸ್ಪತ್ರೆಗಳಲ್ಲೆ ಮಾರ್ಗಸೂಚಿಗಳನ್ನು ಅನುಸರಿಸಲಿಲ್ಲ ಎಂದರೆ ಕೊರೋನಾ ತಡೆಗಟ್ಟುವುದಾದರೂ ಹೇಗೆ! ಸಂಬಂದಿಸಿದವರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎ.ಪಿ.ಎಂ.ಸಿ. ನಾಮಿನಿ ಸದಸ್ಯ ಹರಿಕಾರನಹಳ್ಳಿ ಹೆಚ್.ಎನ್.ಪ್ರಸಾದ್ ವೈದ್ಯರಲ್ಲಿ ಮನವಿ ಮಾಡಿದ್ದಾರೆ.

      ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ನೂರಾರು ಜನ ಬರುತ್ತಿದ್ದು ಪ್ರತಿದಿನ ಕೇವಲ 30 ಮಂದಿಗೆ ಮಾತ್ರ ಪ್ರಾರಂಭದ ವ್ಯಾಕ್ಸಿನ್ ಕೆಲವೇ ಮಂದಿಗೆ ಮಾತ್ರ ಲಸಿಕೆ ಸಿಗಲಿದೆ. 2 ನೇ ಬಾರಿಯವರಿಗೆ ಪ್ರತಿ ದಿನ 70 ಜನಕ್ಕೆ ಮಾತ್ರ ಲಸಿಕೆ ಸಿಗಲಿದ್ದು. ಜನ ವ್ಯಾಕ್ಸಿನ್ ಪಡೆಯಲು ಆಸ್ಪತ್ರೆಗೆ ದುಂಬಾಲು ಬೀಳುತ್ತಿದ್ದಾರೆ.

      ಅಗತ್ಯವಲ್ಲದ ಅಂಗಡಿಗಳು ಓಪನ್ ಮುಂಜಾನೆ 6 ಗಂಟೆಯಿಂದ 10 ರವರೆಗೆ ಅಗತ್ಯ ವಸ್ತುಗಳಿಗೆ ಅನುಮತಿಯೇನೊ ನೀಡಿದೆ. ಆದರೆ ಬೆರಳೆಣಿಕೆಯಷ್ಟು ಅಂಗಡಿಗಳನ್ನು ಬಿಟ್ಟರೆ ಮತ್ತೆಲ್ಲಾ ಅಂಗಡಿಗಳು ಬಹುಶಃ ತೆರೆದಿರುತ್ತವೆ. ಕೆಲವು ಅಂಗಡಿಗಳು ಅಗತ್ಯ ವಸ್ತುಗಳೆಂದು 10-15 ಹಾಲಿನ ಪ್ಯಾಕೆಟ್‍ಗಳನ್ನು ಅಂಗಡಿ ಮುಂಭಾಗವಿಟ್ಟು ಪೊಲೀಸರ ಕಣ್ತಪ್ಪಿಸಿ ತೆರೆಮರೆಯಲ್ಲಿ ಬೀಡಿ ಸಿಗರೇಟು, ಕಾಫೀ, ಟೀ, ಮಾಡುತ್ತಿರುವುದು ಕಾಣಬರುತ್ತಿದೆ. ಅಗತ್ಯವಲ್ಲದ ಕೆಲ ಅಂಗಡಿಗಳು ಸ್ವಲ್ಪವೆ ಬಾಗಿಲು ತೆರೆದು ವ್ಯಾಪಾರ ಮಾಡುವುದು ಕಾಣಬರುತ್ತಿದೆ.
ಆಂಬುಲೆನ್ಸ್‍ಗೆ ಪರದಾಟ ಕೊರೋನಾದಿಂದ ತಾಲ್ಲೂಕಿನಲ್ಲಿ ಅನೇಕ ಸಾವುನೋವುಗಳು ಸಂಭವಿಸುತ್ತಿದ್ದು. ಕೊರೋನಾ ಸಂಕಷ್ಟಕ್ಕೆ ಸಿಲುಕಿದವರನ್ನು ಸಾಗಿಸಲು ಆಂಬ್ಯುಲೆನ್ಸ್‍ಗಳ ಕೊರತೆಯಿದ್ದು. ಸಕಾಲಕ್ಕೆ ಸಿಗದೆ ತಾಲ್ಲೂಕಿನ ಜನತೆ ಪರದಾಡುವಂತಾಗಿದೆ. ಹಿಂದೆ ಚುನಾವಣಾ ಸಂದರ್ಭಗಳಲ್ಲಿ ಕೆಲ ರಾಜಕಾರಣಿಗಳು ಆಂಬ್ಯುಲೆನ್ಸ್‍ಗಳನ್ನು ತಾಲ್ಲೂಕಿಗೆ ನೀಡಿ ಉಚಿತವಾಗಿ ಇದರ ಸೌಲಭ್ಯವನ್ನು ತಾಲ್ಲೂಕಿನ ಜನತೆ ಪಡೆದುಕೊಳ್ಳಿ ಎಂದೇಳಿ ಕೆಲವಾರು ತಿಂಗಳುಗಳಲ್ಲಿ ಅವೆಲ್ಲ ಮಂಗಮಾಯವಾದವು. ಕೆಲ ತಾಲ್ಲೂಕುಗಳಲ್ಲಿ ಈಗಾಗಲೇ ಆಂಬುಲೆನ್ಸ್‍ನ್ನು ಕೆಲ ರಾಜಕಾರಣಿಗಳು ನೀಡಿದ್ದು. ಅದರಂತೆ ತಾಲ್ಲೂಕಿನ ಜನ ಆಂಬ್ಯುಲೆನ್ಸ್ ಗಾಗಿ ಪರಿತಪ್ಪಿಸುತ್ತಿರುವ ಇಂತಹ ಸಂದರ್ಭದಲ್ಲಿ ಮುಂಚೂಣಿ ರಾಜಕಾರಣಿಗಳು ಅಥವಾ ಕೊಡುಗೈ ದಾನಿಗಳು ಆಂಬ್ಯುಲೆನ್ಸ್ ನೀಡಿದ್ದೆ ಆದರೆ ತಾಲ್ಲೂಕಿನ ಜನತೆ ಅಂತಹವರನ್ನು ಮುಂದಿನ ದಿನಗಳಲ್ಲಿ ಸ್ಮರಿಸಿಯಾರು ಎಂದು ದಂಡಿನಶಿವರ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಶಿವಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಿರ್ಗತಿಕರು ಆಹಾರದ ಸಮಸ್ಯೆಗೆ ಸಿಲುಕಿ ನಿತ್ರಾಣರಾಗಿರುವುದು.

      ಭಿಕ್ಷುಕರ ಪರದಾಟ ಕೊರೋನಾ ಪ್ರಾರಂಭದಲ್ಲಿ ಬಡಕಾರ್ಮಿಕರು, ನಿರ್ಗತಿಕರು. ಭಿಕ್ಷಕರು ಸೇರಿದಂತೆ ಹಸಿದವರಿಗೆ ಆಹಾರ ನೀಡಲು ಅನೇಕ ಸಂಘ ಸಂಸ್ಥೆಗಳು ಮುಂದೆ ಬಂದಿದ್ದವು. ಆದರೆ ಕೊರೋನಾ 2ನೇ ಅಲೆ ಹೆಚ್ಚಾಗಿರುವ ಇಂತ ಸಂದರ್ಭದಲ್ಲಿ ಯಾವುದೇ ಸಂಘಸಂಸ್ಥೆಗಳು ಮುಂದೆ ಬಾರದ್ದರಿಂದ ಬಡಕಾರ್ಮಿಕರು, ದಿನಗೂಲಿ ನೌಕರರು, ಭಿಕ್ಷಕರು ಹಸಿವಿನಿಂದ ನರಳುವಂತಾಗಿದೆ. ಬೆಳ್ಳಿಗೆ 6 ರಿಂದ 10ರ ವರೆಗೆ ಮಾತ್ರ ಅಂಗಡಿ, ಹೋಟೆಲ್‍ಗಳಿಗೆ ಪರ್ಮಿಷನ್ ಕೊಟ್ಟಿದ್ದರೂ ಸಹಾ ಯಾವುದೇ ಹೋಟೆಲ್‍ಗಳು ತೆಗೆಯದೆ ಪೂರ್ಣವಾಗಿ ಬಂದ್ ಮಾಡಿರುವುದರಿಂದ ನಿರ್ಗತಿಕರಿಗೆ ಊಟವಿಲ್ಲದೆ ಪರದಾಡುವಂತಾಗಿದೆ. ಆಹಾರವಿಲ್ಲದೆ ನಿತ್ರಾಣರಾಗಿರುವವರನ್ನು ಜನತೆ ನೋಡಿದರೂ ಕೊರೋನಾ ಭಯದಿಂದ ಅವರತ್ತ ಸುಳಿಯದಿರುವುದು ದುರ್ಧೈವವೇ ಸರಿ.

      ಪ್ರತಿದಿನ ಕೇವಲ 4 ಗಂಟೆ ವ್ಯಾಪಾರಕ್ಕೆ ಅವಕಾಶ ನೀಡಿರುವುದು ಯಾವುದೇ ಪ್ರಯೋಜನ ವಿಲ್ಲದಂತಾಗಿದ್ದು. ಕೋನೆಪಕ್ಷ ಕೆಲವು ದಿನಗಳಾದರು ಪೂರ್ಣ ಪ್ರಮಾಣದಲ್ಲಿ ಲಾಕ್ ಡೌನ್ ಮಾಡದ್ದೆ. ಅದಲ್ಲಿ ಕೊರೋನಾವನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಬಹುದಾಗಿದೆ. ಎಂದು ಕೆಲ ಪ್ರಜ್ಞಾವಂತ ನಾಗರೀಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link