ತುರುವೇಕೆರೆ : ಗ್ರಾಪಂ ಚುನಾವಣೆ ರೌಡಿಶೀಟರ್’ಗಳ ಪೆರೇಡ್

 ತುರುವೇಕೆರೆ : 

      ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ 84ಕ್ಕೂ ಹೆಚ್ಚು ರೌಡಿಶೀಟರ್‍ಗಳ ಪೆರೇಡ್‍ನ್ನು ಕುಣಿಗಲ್ ಡಿವೈಎಸ್‍ಪಿ ಕೆ.ಎಸ್.ಜಗದೀಶ್ ಮತ್ತು ಪಿಎಸ್‍ಐ ಪ್ರೀತಂ ನೇತೃತ್ವದಲ್ಲಿ ನಡೆಸಲಾಯಿತು.

     ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆವರಣದಲ್ಲಿ ರೌಡಿಶೀಟರ್‍ಗಳನ್ನು ನಿಲ್ಲಿಸಿ ಹಾಜರಾತಿ ಪಡೆದರು. ನಂತರ ಕುಣಿಗಲ್ ಡಿವೈಎಸ್‍ಪಿ ಕೆ.ಎಸ್.ಜಗದೀಶ್ ಮಾತನಾಡಿ, ಡಿ.27ರಂದು ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಕೂಡದು. ಇಂತಹವರಿಗೆ ವೋಟ್ ಹಾಕಬೇಕೆಂದು ಜನರಲ್ಲಿ ಒತ್ತಡ ಹೇರಬಾರದು. ಸಾರ್ವಜನಿಕರಿಗೆ ಮುಕ್ತಮತದಾನ ನಡೆಯಲು ಅವಕಾಶ ನೀಡಬೇಕು. ನಿಮ್ಮ ನಿಮ್ಮ ಊರುಗಳಲ್ಲಿ ಚುನಾವಣೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು. ಒಂದು ವೇಳೆ ಜನರಲ್ಲಿ ಸಂಘರ್ಷ ಉಂಟು ಮಾಡಲು ಯತ್ನಿಸಿದರೆ ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಶಿಸ್ತಿನ ಕ್ರಮ ಜರುಗಿಸಲಾಗುವುದು. ಜೊತೆಗೆ ನೀವು ಹೀಗಾಗಲೇ ನೀಡಿರುವ 5 ಲಕ್ಷÀ ರೂಪಾಯಿಗಳ ಬಾಂಡ್ ಒವರ್ ಹಣವನ್ನು ಸರ್ಕಾರಕ್ಕೆ ಮುಟ್ಟಗೋಲು ಹಾಕಿಕೊಳ್ಳಬೇಕಾದೀತು ಎಚ್ಚರಿಕೆ. ನೀವು ಒಳ್ಳೆಯ ವರ್ತನೆ ಬೆಳೆಸಿಕೊಂಡು ಸಜ್ಜನ ವ್ಯಕ್ತಿಗಳಾಗಿ ಬಾಳಿ ಎಂದು ಹೇಳಿದರು.

     ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ 66 ಮತ್ತು ದಂಡಿನಶಿವರ ಠಾಣಾ ವ್ಯಾಪ್ತಿಯ 18 ರೌಡಿಶೀಟರ್‍ಗಳಿಂದ ನಾವು ಕಾನೂನುಬದ್ದವಾಗಿರುತ್ತೇವೆಂದು ಬಾಂಡ್ ಒವರ್ ಮಾಡಿಸಿ ತಹಶೀಲ್ದಾರ್‍ಗೆ ಸಲ್ಲಿಸಿ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಪಿಎಸ್‍ಐ ಶಿವಲಿಂಗಪ್ಪ, ಎಎಸ್‍ಐ ಶಿವಲಿಂಗಪ್ಪ, ಸಿಬ್ಬಂದಿಗಳಾದ ಸುಪ್ರೀತ್, ಕೇಶವಮೂರ್ತಿ, ನಾಗರಾಜು, ಶಶಿಧರ್, ಸತೀಶ್, ವಿಜಯಕುಮಾರ್, ಗಂಗಾವತಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap