ತುರುವೇಕೆರೆ : ಮನೆ ಗೋಡೆ ಕುಸಿದು ವೃದ್ಧ ಸಾವು!!

 ತುರುವೇಕೆರೆ : 

      ಮನೆಯ ಗೋಡೆ ಕುಸಿದ ಪರಿಣಾಮ ವೃದ್ಧರೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಪಟ್ಟಣದ ಸಮೀಪದ ಅರಕೆರೆ ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನಲ್ಲಿ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ದಂಡಿನಶಿವರ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಸುರಿದ ಮಳೆಗೆ ಅರಕೆರೆ ಗ್ರಾಮದಲ್ಲಿ ಮನೆಯೊಳಗೆ ಮಲಗಿದ್ದ ಪುಟ್ಟಯ್ಯ(65) ಎಂಬುವವರ ಮೇಲೆ ಮನೆಯ ಗೋಡೆ ಕುಸಿದ ಪರಿಣಾಮ ಪುಟ್ಟಯ್ಯ ಸ್ಥಳದಲ್ಲೆ ಮೃತ ಹೊಂದಿದ್ದಾರೆ. 

     ಪಕ್ಕದಲ್ಲೆ ಮಲಗಿದ್ದ ಪುಟ್ಟಯ್ಯನವರ ಪತ್ನಿ ಲಕ್ಕಮ್ಮನವರ ಕಾಲ ಮೇಲೆ ಗೋಡೆಯ ಕಲ್ಲು, ಇಟ್ಟಿಗೆಗಳು ಬಿದ್ದ ಪರಿಣಾಮ ಲಕ್ಕಮ್ಮನವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗೋಡೆ ಬಿದ್ದ ಶಬ್ದಕ್ಕೆ ಅಕ್ಕಪಕ್ಕದ ಮನೆಯವರು ಮತ್ತು ಮೃತರ ಮಕ್ಕಳಿಬ್ಬರೂ ಧಾವಿಸಿ ಗೋಡೆಯಡಿ ಸಿಲುಕಿದ್ದ ಪುಟ್ಟಯ್ಯರನ್ನು ಹೊರ ತೆಗೆದಿದ್ದಾರೆ. ಆ ವೇಳೆಗಾಗಲೇ ಪುಟ್ಟಯ್ಯ ಮೃತ ಹೊಂದಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯರಾಜ್‍ಕುಮಾರ್, ಗ್ರೇಟ್-2 ತಹಶೀಲ್ದಾರ್ ಸುನೀಲ್‍ಕುಮಾರ್, ಕಂದಾಯಾಧಿಕಾರಿ ಗಂಗಾಧರಪ್ಪ, ಪಿಎಸ್‍ಐ ಶಿವಲಿಂಗಯ್ಯ, ಗ್ರಾಮ ಲೆಕ್ಕಿಗ ಕೆ.ನಾಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Recent Articles

spot_img

Related Stories

Share via
Copy link