ಕೃಷಿಕರ ಉತ್ಪಾದನಾ ಕಂಪನಿ ಕಛೇರಿ ಉದ್ಘಾಟನೆ

ತುರುವೇಕೆರೆ :

      ತಾಲೂಕಿನ ಮಾಯಸಂದ್ರ ಗ್ರಾಮದ ರಾಮಮಂದಿರದಲ್ಲಿ ಕೃಷಿಕರ ಉತ್ಪಾದಕ ಕಂಪನಿ ನಿಯಮಿತ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

       ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಮಸಾಲೆ ಜಯರಾಮ್ ಅವರು ಮಾತನಾಡಿ, ರೈತ ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರಸ್ತೆಗೆ ಸುರಿಯುತ್ತಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಬೇರೆ ಮಾರ್ಗಗಳನ್ನು ಕಂಡುಕೊಳ್ಳಬೇಕು. ಅಂದು 9600ರೂ ಇದ್ದ ಕೊಬ್ಬರಿ ಬೆಲೆ ಇಂದು 16600 ಆಗಿದೆ. ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಅದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ತಾಲೂಕಿನಲ್ಲಿ ರೈತರಿಗೆ ಅನುಕೂಲವಾಗುವಂತಹ ಕಾರ್ಯಕ್ಕೆ ಆದಿಚುಂಚನಗಿರಿ ಶ್ರೀಗಳು ಬೃಹತ್ ಕಾರ್ಯಕ್ಕೆ ಕೈಜೋಡಿಸಿದ್ದು, ಟಿ.ಬಿ.ಕ್ರಾಸ್‍ನಲ್ಲಿ ಬೃಹತ್ ಮಾರುಕಟ್ಟೆಯೊಂದನ್ನು ನಿರ್ಮಿಸಲಿದ್ದಾರೆ. ಆದರೇ ಕೋವಿಡ್ ಕಾರಣದಿಂದ ತಡೆಹಿಡಿಯಲಾಗಿದೆ. ತಾಲೂಕಿನ ಅಭಿವೃದ್ಧಿಗಾಗಿ 1500 ಕೋಟಿ ರೂಗಳ ಅನುದಾನವನ್ನು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ನೀಡಿದ್ದಾರೆ. ಇದರಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ವಿಶೇಷವಾಗಿ ಅವರಿಗೆ ತಾಲೂಕಿನ ಜನತೆಯ ಪರವಾಗಿ ಕೃತಜ್ಞತೆಯನ್ನು ತಿಳಿಸಿದರು. ಬೀದರ್-ಕೆ.ಬಿ. ಕ್ರಾಸ್ ಮಾರ್ಗವಾಗಿ ಮೈಸೂರು ನೆಲ್ಲೀಗೆರೆ ಕ್ರಾಸ್ ಹೆದ್ದಾರಿ ರಸ್ತೆಯ ಅಭಿವೃದ್ಧಿಗಾಗಿ 250 ಕೋಟಿ ರೂ. ಅನುದಾನವನ್ನು ಸಹ ಇತ್ತೀಚಿಗೆ ತಂದಿದ್ದೇನೆ. ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದ್ದವು. ಆದರೆ ಎರಡು ವರ್ಷಗಳ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಶೀಘ್ರದಲ್ಲೇ ಮುಂದುವರೆಸುವ ಮೂಲಕ ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿ ಹಾಗೂ ತಾಲೂಕಿನ ಮತದಾರರ ಋಣ ತೀರಿಸುವ ಪ್ರಯತ್ನವನ್ನು ಈ ಮೂಲಕ ಮಾಡುತ್ತಿರುವೆ. ಇಂತಹ ಸಂಘಗಳು ರೈತರಿಗೆ ನಾನಾತರಹದ ಸೌಲಭ್ಯಗಳನ್ನು ನೀಡಲಿ. ತಾಲೂಕಿನ ರೈತರಿಗೆ ಅನುಕೂಲವಾಗಲಿ ರೈತರು ಬೆಳೆದ ಬೆಳೆಯನ್ನು ನೇರವಾಗಿ ನಾನೇ ಖರೀದಿಸುವೆ. ಗುಡಿ ಕೈಗಾರಿಕೆ ಅಂತಹ ಕಾರ್ಯಗಳು ಹಲವು ಯಂತ್ರೋಪಕರಣಗಳನ್ನು ತೆರೆಯಿರಿ. ತಾಲೂಕಿನ ರೈತರ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಲು ನಾನು ಸದಾ ಸಿದ್ಧನಿದ್ದೇನೆ ಎಂದು ನೂತನ ಕೃಷಿಕರ ಉತ್ಪಾದಕ ಕಚೇರಿಯ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಕು.ಪೂಜಾ ಅವರು ಮಾತನಾಡಿ, ರೈತರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಇಂತಹ ಕೃಷಿ ಉತ್ಪಾದಕ ಸಹಕಾರ ಸಂಘಗಳಿಂದ ಮಾರುಕಟ್ಟೆ ಸುಧಾರಣೆ ವ್ಯವಸ್ಥೆಯನ್ನು ಕಂಡುಕೊಳ್ಳಬಹುದು. ಜೊತೆಗೆ ಇದರಲ್ಲಿ ಹಲವು ಸೌಲಭ್ಯಗಳನ್ನು ರೈತ ರಿಯಾಯಿತಿ ದರದಲ್ಲಿ ನೀಡುವಂತದ್ದು. ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಈ ಸಂಸ್ಥೆಯ ಕೆಲಸ ಮಾಡುತ್ತದೆ. ನಮ್ಮ ಇಲಾಖೆಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸಹ ನೀಡುವುದರ ಮೂಲಕ ರೈತರ ಅನುಕೂಲಕ್ಕಾಗಿ ಸದಾ ಸಹಕಾರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಡಿ.ಸಿ.ಸಿ. ಬ್ಯಾಂಕ್‍ನ ಜಿಲ್ಲಾ ನಿರ್ದೇಶಕರಾದ ಸಿದ್ದಲಿಂಗಯ್ಯ, ಗ್ರಾ.ಪಂ. ಅಧ್ಯಕ್ಷರಾದ ಮಂಗಳ ಗೌರಮ್ಮ. ಇ.ಒ.ಜಯಕುಮಾರ್, ಗಜಾನನ ಫುಡ್ ಮಾಲೀಕರಾದ ಶೈಲಜಾ, ಕಣ ಕೃಷಿಕರ ಉತ್ಪಾದಕ ಕಂಪನಿ ಅಧ್ಯಕ್ಷರಾದ ಸಂತೋಷ್‍ಕುಮಾರ್, ನಿರ್ದೇಶಕರುಗಳಾದ ನಟರಾಜು, ನಾಗರಾಜು, ಚಂದ್ರಶೇಖರ್, ರಾಜೇಶ್, ನಾಗೇಶ್, ಧ್ರುವಕುಮಾರ್, ಕುಮಾರ್, ಜಗದೀಶ್, ಸಂದೇಶ್ ಗ್ರಾ.ಪಂ.ಸದಸ್ಯರುಗಳು ಹಾಗೂ ನಿರ್ದೇಶಕರು ನಿವೇದಿತಾ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು, ಜನಪ್ರತಿನಿಧಿಗಳು, ರೈತ ನಾಯಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

      ಮುಂದಿನ ದಿನಗಳಲ್ಲಿ ರೈತರು ನೇರವಾಗಿ ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ನೀಡಿ ನಿಗದಿತ ಬೆಲೆಯನ್ನು ಪಡೆಯಬಹುದಾಗಿದೆ. ಹಾಗೂ ತಾಲ್ಲೂಕಿನಲ್ಲಿ ರೈತರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಸೌಲಭ್ಯ ದೊರೆಯುವಂತಹ ಫ್ಯಾಕ್ಟರಿಯನ್ನು ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ಶೀಘ್ರದಲ್ಲೇ ಆರಂಭಿಸಲಾಗುವುದು ಅಲ್ಲದೆ ತಾಲೂಕಿನಲ್ಲಿ ಹತ್ತಾರು ಬೋರ್‍ವೆಲ್ ಲಾರಿಗಳು ಅಲ್ಲಲ್ಲಿ ನಿಲ್ಲುತ್ತಿದ್ದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಬೋರ್‍ವೆಲ್ ಲಾರಿಗಳು ಕಣ್ಮರೆಯಾಗಿವೆ. ಕಾರಣ ರೈತರ ಅನುಕೂಲಕ್ಕಾಗಿ ತಾಲೂಕಿನ ಎಲ್ಲಾ ಕೆರೆ-ಕಟ್ಟೆಗಳಿಗೆ ಹೇಮಾವತಿ ನೀರು ಹರಿಸಿರುವುದು

-ಮಸಾಲೆ ಜಯರಾಮ್, ಶಾಸಕರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap