ತುರುವೇಕೆರೆ :
ಸುಮಾರು ವರ್ಷಗಳಿಂದ ಡಾಂಬರನ್ನೆ ಕಾಣದ ತಾಲೂಕಿನ ದಬ್ಬೆಘಟ್ಟ ಹೋಬಳಿಯ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಮೂಲಕ ಈ ಭಾಗದ ರೈತರ ಹಿತದೃಷ್ಠಿಯಿಂದ ಮೂಲಸೌಕರ್ಯ ಒದಗಿಸಿಕೊಡಲಾಗುವುದು ಎಂದು ಶಾಸಕ ಮಸಾಲಜಯರಾಮ್ ತಿಳಿದರು.
ತಾಲೂಕಿನ ದಬ್ಬೇಘಟ್ಟ ಹೋಬಳಿಯ ಬಿಗನೇನಹಳ್ಳಿ ಗ್ರಾಮದಲ್ಲಿ ಪಿಡಬ್ಯುಡಿ ರಸ್ತೆಯಿಂದ ಎಸ್‍ಸಿ ಕಾಲೋನಿವರೆಗೆ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಯೊಜನೆಯಡಿಯಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ಬರದ ನಾಡಾದ ಈ ಹೋಬಳಿಯ ಗ್ರಾಮಗಳಿಗೆ ಉತ್ತಮ ಸಂಪರ್ಕ ರಸ್ತೆಗಳಿಲ್ಲದೆ ಜನರು ಅಭಿವೃದ್ದಿಯಿಂದ ವಂಚಿತವಾಗಿದ್ದನ್ನು ಮನಗಂಡು ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆಗಳನ್ನು ಗುರುತಿಸಿ ಗ್ರಾಮಗಳ ಅಭಿವೃದ್ದಿ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಉತ್ತಮ ರಸ್ತೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಕೊರೋನಾ ಸಂದರ್ಭದಲ್ಲಿಯೂ ಸಹಾ ನನ್ನ ಶಕ್ತಿ ಮೀರಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಅಮೂಲ್ಯ ಮತ ನೀಡಿ ಆಶೀರ್ವದಿಸಿದ ನಿಮ್ಮ ಋಣ ತೀರಿಸುವ ನಿಟ್ಟಿನಲ್ಲಿ ಈ ಭಾಗಕ್ಕೆ 22 ಕೋಟಿ ರೂ. ವೆಚ್ಚದಲ್ಲಿ ಏತನೀರಾವರಿ ಯೋಜನೆ ಮಂಜೂರು ಮಾಡಿಸಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಪಿಎಮ್‍ಸಿ ವೆಂಕಟರಾಮು, ಮುಖಂಡರಾದ ವಕೀಲ ಮುದ್ದೇಗೌಡ, ಹುಲಿಕಲ್ ಜಗದೀಶ್, ಬಡಗರಹಳ್ಳಿ ರಾಮೇಗೌಡ, ವಡಕೆಘಟ್ಟ ಸಿದ್ದಲಿಂಗಣ್ಣ, ಬಸವಣ್ಣ, ದಬ್ಬೆಘಟ್ಟ ರಮೇಶ್, ಚಂದ್ರಣ್ಣ, ವಿ.ಬಿ.ಸುರೇಶ್, ಗ್ರಾಮಸ್ಥರಾದ ಹೊನ್ನೇಗೌಡ, ಮಂಜಪ್ಪ, ಕೃಷ್ಣೇಗೌಡ, ಮಾಯಣ್ಣಗೌಡ ಸೇರಿದಂತೆ ಹಾ.ಉ.ಮಹಿಳಾ ಸಹಕಾರ ಸಂಘದ ಸದಸ್ಯೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
