ಓಬಿಸಿ ಹೋರಾಟ : ಮುಂದುವರಿದ ಜನಾಂಗಗಳಿಗೆ ಶೋಭೆಯಲ್ಲ

 ತುರುವೇಕೆರೆ : 

      ಸಮಾಜದಲ್ಲಿ ಮುಂದುವರಿದ ಜನಾಂಗಗಳು ಹಿಂದುಳಿದ ವರ್ಗದ ಮೀಸಲಾತಿ ಪಡೆಯಲು ಹೋರಾಟ ನಡೆಸುತ್ತಿರುವುದು ಶೋಭೆ ತರುವಂತದ್ದಲ್ಲ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಧನಿಯಾಕುಮಾರ್ ಅಭಿಪ್ರಾಯಪಟ್ಟರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಅಹಿಂದ ವರ್ಗ ಎಲ್ಲಾ ಕ್ಷೇತ್ರದಲ್ಲೂ ತುಳಿತಕ್ಕೊಳಗಾಗುತ್ತಿದೆ. ಹಾಗಾಗಿ ಅಹಿಂದ ವರ್ಗದವರು ಎಲ್ಲಾ ರೀತಿಯಲ್ಲೂ ಬಲಿಷ್ಟವಾಗಬೇಕು. ಯಾವುದೇ ಸರ್ಕಾರಗಳು ಬಂದರೂ ಹಿಂದುಳಿದ ವರ್ಗದವರಿಗೆ ಸರಿಯಾದ ಸವಲತ್ತುಗಳನ್ನು ನೀಡುತ್ತಿಲ್ಲ. ಮೀಸಲಾತಿಯಲ್ಲಿ, ವಿದ್ಯಾರ್ಥಿ ವೇತನ, ರಾಜಕೀಯ ಪ್ರಾತಿನಿದ್ಯ ಸೂಕ್ತವಾಗಿ ಸಿಗುತ್ತಿಲ್ಲ. ಇವೆಲ್ಲದರ ಬಗ್ಗೆ ಹಿಂದುಳಿದ ವರ್ಗದವರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಿಂದುಳಿದ ವರ್ಗಗಳನ್ನು ಒಂದೆಡೆ ಸೇರಿಸಿ ಒಕ್ಕೂಟದ ವತಿಯಿಂದ ಸಮಾವೇಶ ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದು, ಅದರ ಪೂರ್ವಭಾವಿಯಾಗಿ ಇದೇ ಆಗಸ್ಟ್ 21 ರ ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ತುಮಕೂರಿನಲ್ಲಿ ಪಕ್ಷಾತೀತವಾಗಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಹಿಂದುಳಿದ ವರ್ಗಗಳ ಹಲವಾರು ರಾಜಕೀಯ ಮುಖಂಡರುಗಳು, ಚಿಂತಕರು ಹಾಗೂ ಕಾನೂನು ತಜ್ಞರು ಒಂದೇ ವೇದಿಕೆಯಲ್ಲಿ ಸೇರಲಿದ್ದು, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಚರ್ಚೆಗಳು ನಡೆಯಲಿವೆ. ಈ ಸಭೆಗೆ ಪ್ರತಿ ತಾಲ್ಲೂಕಿನ ವಿವಿಧ ಅಹಿಂದ ವರ್ಗಗಳ ಪ್ರಮುಖರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

     ಪ್ರಜಾಪ್ರಗತಿ ಪತ್ರಿಕೆ ಉಪಸಂಪಾದಕರಾದ ಟಿ.ಎನ್.ಮಧುಕರ್ ಅವರು ಮಾತನಾಡಿ ಹಿಂದುಳಿದ ಜನಾಂಗದ ತಳವರ್ಗದವರಿಗೂ ಈ ವಿಚಾರ ಮಟ್ಟಿಸುವ ಮೂಲಕ ಅವರಿಗೆ ಶಕ್ತಿ ತುಂಬುವಂತಹ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ನಮ್ಮ ಒಕ್ಕೂಟ ಕಾರ್ಯ ರೂಪಿಸಿದ್ದು, ಈ ಕಾರ್ಯಕ್ರಮಕ್ಕೆ ಶಾಶ್ವತ ಹಿಂದುಳಿದ ವರ್ಗದ ಆಯೋಗದ ಮಾಜಿ ಅಧ್ಯಕ್ಷರಾದ ದ್ವಾರಕಾನಾಥ್, ಕಾಂತರಾಜು ಅವರು ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುತ್ತಿದ್ದು, ಸಮಾಜದ ಮುಖಂಡರಾದ ರಮೇಶ್, ಸುಬ್ಬಣ್ಣ, ಯಲ್ಲಪ್ಪ, ಮುಖ್ಯಮಂತ್ರಿಚಂದ್ರು, ಎಂ.ಸಿ.ವೇಣುಗೋಪಾಲ್ ಹಾಗೂ ನಮ್ಮ ಜಿಲ್ಲೆಯಿಂದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಆಂಜನಪ್ಪ ಸೇರಿದಂತೆ ಇನ್ನೂ ಅನೇಕ ಮುಖಂಡರುಗಳು ಪಾಲ್ಗೊಳ್ಳಲಿದ್ದು, ಇವರುಗಳ ಸಮ್ಮುಖದಲ್ಲಿ ಮಹತ್ತರವಾದ ಚರ್ಚೆಗಳು ನಡೆದು ಮುಂದಿನ ಸಮಾವೇಶದ ಬಗ್ಗೆ ರೂಪುರೇಷೆಗಳು ಸಿದ್ದಗೊಳ್ಳಲಿವೆ ಎಂದರು.

      ಈ ಸಂಧರ್ಭದಲ್ಲಿ ಒಕ್ಕೂಟದ ಚಂದ್ರಶೇಖರಗೌಡ, ಪ್ರೆಸ್ ರಾಜಣ್ಣ, ಶ್ರೀನಿವಾಸ್, ತಾಲ್ಲೂಕಿನ ಮುಖಂಡರಾದ ನಾಗೇಶ್, ಟಿ.ಆರ್.ಸತೀಸ್, ಕುಮಾರ್, ಶ್ರೀನಿವಾಸ್, ಶಿವರಾಜು, ಹುಚ್ಚೇಗೌಡ, ಗುರುದತ್, ಜಾಫರ್, ಪೈಲ್ವಾನ್‍ಕೃಷ್ಣಪ್ಪ, ಉಪೇಂದ್ರ ಸೇರಿದಂತೆ ಹಿಂದುಳಿದ ವರ್ಗದ ಮುಖಂಡರುಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link